• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾನಸ ಸರೋವರ ಯಾತ್ರಿಕರಿಗೆ ಸುಷ್ಮಾ ಶುಭ ಹಾರೈಕೆ

By Mahesh
|

ನವದೆಹಲಿ, ಜೂ.15: ಚೀನಾ ದೇಶದ ಸಹಕಾರದಿಂದ ಕೈಲಾಸ ಮಾನಸ ಸರೋವರ ಯಾತ್ರೆಗೆ ಹೊಸ ಮಾರ್ಗ ತೆರೆದುಕೊಂಡಿದೆ. ನಾಥುಲಾ ಪಾಸ್ ಮಾರ್ಗವಾಗಿ ಭಾರತದ ಭಕ್ತಾದಿಗಳು ಪವಿತ್ರ ತಾಣವನ್ನು ತಲುಪಬಹುದಾಗಿದೆ. ಮಂಗಳವಾರ ಯಾತ್ರಿಗಳ ಮೊದಲ ತಂಡಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಶುಭ ಹಾರೈಸಿದರು.

ಐದು ದಿನಗಳ ಹಿಂದೆ ಟಿಬೆಟ್, ಉತ್ತರಾಖಂಡ್ ಲಿಪುಲೇಖ್ ಮಾರ್ಗದಲ್ಲಿ ತೆರಳುವ ಮೊದಲ ತಂಡಕ್ಕೆ ಸುಷ್ಮಾ ಅವರು ಇದೇ ರೀತಿ ಶುಭ ಹಾರೈಸಿ, ಹರ ಹರ ಮಹಾದೇವ್ ಎಂದಿದ್ದರು.

ಚೀನಾ ಆಕ್ರಮಿತ ಟಿಬೇಟ್ ಭಾಗದಲ್ಲಿರುವ ಕೈಲಾಸ ಪರ್ವತವನ್ನು ಪರಿಕ್ರಮ ಮಾಡಲು ಯಾತ್ರಾರ್ಥಿಗಳು ಉತ್ತರ ಖಂಡದ ಲಿಪ್‌ಲೇಖ್ ಮಾರ್ಗದ ಮೂಲಕ ಮಾನಸ ಸರೋವರ ಯಾತ್ರೆ ಕೈಗೊಳ್ಳುತ್ತಿದ್ದಾರೆ.

ಇದು ದುರ್ಗಮ ಹಾದಿಯಾಗಿದ್ದು, ಅನೇಕ ಕಡೆ ಯಾತ್ರಾರ್ಥಿಗಳು ಹಲವು ಕಿ.ಮೀ. ಚಾರಣ ನಡೆಸಬೇಕಿದೆ. ಹಾಗಾಗಿ ವಯೋವೃದ್ಧರು ಈ ಹಾದಿಯಲ್ಲಿ ಸಾಗಲು ಸಾಕಷ್ಟು ಪ್ರಯಾಸ ಪಡಬೇಕಿದೆ.

ಆದರೆ, ಈಗ ಚೀನಾ-ಭಾರತ ನಡುವಿನ ಒಪ್ಪಂದದಿಂದಾಗಿ ಸಿಕ್ಕಿಂನ ನಾಥುಲಾ ಪಾಸ್ ಮೂಲಕ ಹಿಂದೂಗಳ ಪವಿತ್ರ ಯಾತ್ರಾಕ್ಷೇತ್ರಕ್ಕೆ ತೆರಳಬಹುದು. ಉತ್ತರಾಖಂಡ್ ನ ಲಿಪುಲೇಖ್ ಪಾಸ್ ಮಾರ್ಗವೂ ಬಳಕೆಯಲ್ಲಿರಲಿದೆ. ಜೊತೆಗೆ ನಾಥುಲಾ ಪಾಸ್ ಮಾರ್ಗವೂ ಯಾತ್ರಿಗಳಿಗೆ ಲಭ್ಯವಾಗಲಿದೆ.

ಸಿಕ್ಕಿಂ ಮಾರ್ಗದಲ್ಲಿ ಹೋಗ ಬಯಸುವ ಯಾತ್ರಿಗಳು ಗ್ಯಾಂಗ್ ಟಕ್ ನಲ್ಲಿ ಎರಡು ದಿನ ತಂಗುವುದು ಕಡ್ಡಾಯಗೊಳಿಸಲಾಗಿದೆ. ನಂತರ ಶೇರಾಥಾಂಗ್ ನಲ್ಲಿ ಮುಂದಿನೆ ನೆಲೆ ಕಾಣಬಹುದಾಗಿದೆ. ಇಲ್ಲದಿದ್ದರೆ ಶಿಗಾತ್ಸೆ ಮೂಲಕ ಕೈಲಾಸ ಮಾನಸ ಸರೋವರ ತಲುಪಬಹುದಾಗಿದೆ ಎಂದು ಸಿಕ್ಕಿಂ ಪ್ರವಾಸೋದ್ಯಮ ಇಲಾಖೆ ಹೇಳಿದೆ.

ಮೊದಲ ತಂಡ ಜೂನ್ 22ರಂದು ಚೀನಾ ಪ್ರವೇಶಿಸಲಿದೆ. ಈ ವರ್ಷ ಒಟ್ಟು 1,330 ಜನರು ಮಾನಸ ಸರೋವರ ಯಾತ್ರೆಗೆ ತೆರಳುತ್ತಿದ್ದಾರೆ. 1,660 ಮಂದಿಗೆ ಅನುಮತಿ ನೀಡಲಾಗಿತ್ತು. ಈ ಪೈಕಿ 1080 ಜನರು ಉತ್ತರಾಖಂಡ ಮಾರ್ಗದಿಂದ (60 ಜನರ ತಂಡದಂತೆ 18 ಬ್ಯಾಚ್) ಹಾಗೂ 250 ಜನರು ಸಿಕ್ಕಿಂ ರಾಜ್ಯದ ನಾಥು-ಲಾ ಮಾರ್ಗದಿಂದ (ತಲಾ 50 ಜನರ ಐದು ತಂಡಗಳು) ತೆರಳಲಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
EAM Sushma Swaraj today(Jun.16) flags off first batch of Kailash Mansarovar Yatris from new route via Nathu Lal.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more