ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಹೃತ ಹಿಂದೂ ಬಾಲಕಿಯರನ್ನು ಕುಟುಂಬಕ್ಕೆ ಮರಳಿಸಿ: ಪಾಕ್‌ಗೆ ಸುಷ್ಮಾ ತಾಕೀತು

|
Google Oneindia Kannada News

ನವದೆಹಲಿ, ಮಾರ್ಚ್ 26: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಇಬ್ಬರು ಹಿಂದೂ ಬಾಲಕಿಯರನ್ನು ಅಪಹರಿಸಿ ಬಲವಂತವಾಗಿ ಮತಾಂತರ ಮಾಡಿ ಮದುವೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಬಾಲಕಿಯರನ್ನು ಅವರ ಕುಟುಂಬಕ್ಕೆ ಮರಳಿ ಒಪ್ಪಿಸುವಂತೆ ಪಾಕಿಸ್ತಾನಕ್ಕೆ ತಾಕೀತು ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

'ಪಾಕಿಸ್ತಾನದಲ್ಲಿ ಹಿಂದೂ ಬಾಲಕಿಯರನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ. ಬಾಲಕಿಯರ ವಯಸ್ಸನ್ನು ಕೂಡ ಲೆಕ್ಕಿಸಿಲ್ಲ. ರವೀನಾಗೆ ಕೇವಲ 13 ವರ್ಷ ಮತ್ತು ರೀನಾಗೆ 15 ವರ್ಷ. ಈ ವಯಸ್ಸಿನ ಬಾಲಕಿಯರು ಮತ್ತೊಂದು ಧರ್ಮಕ್ಕೆ ಮತಾಂತರವಾಗಲು ಮತ್ತು ಮದುವೆಯಾಗಲು ಸ್ವ ಇಚ್ಛೆಯಿಂದ ನಿರ್ಧರಿಸುತ್ತಾರೆ ಎಂಬುದನ್ನು ನವ ಪಾಕಿಸ್ತಾನದ ಪ್ರಧಾನಿ ಕೂಡ ನಂಬುವುದಿಲ್ಲ' ಎಂದು ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ 'ನವ ಪಾಕಿಸ್ತಾನ್' ಘೋಷಣೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

Sushma swaraj asks Pakistan to return 2 abducted hindu girls to family

ಹಿಂದೂ ಬಾಲಕಿಯರ ಅಪಹರಣ, ಮತಾಂತರ, ಬಲವಂತದ ಮದುವೆ: ಆಕ್ರೋಶ ಹಿಂದೂ ಬಾಲಕಿಯರ ಅಪಹರಣ, ಮತಾಂತರ, ಬಲವಂತದ ಮದುವೆ: ಆಕ್ರೋಶ

ಈ ಇಬ್ಬರೂ ಬಾಲಕಿಯರಿಗೆ ನ್ಯಾಯ ದೊರಕಿಸಬೇಕು ಮತ್ತು ಕೂಡಲೇ ಅವರನ್ನು ಅವರ ಕುಟುಂಬದವರೊಂದಿಗೆ ಸೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವ ವರೆಗೂ ಪಾಕ್ ಜೊತೆ ಮಾತುಕತೆ ಇಲ್ಲ: ಸುಷ್ಮಾ ಸ್ವರಾಜ್ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವ ವರೆಗೂ ಪಾಕ್ ಜೊತೆ ಮಾತುಕತೆ ಇಲ್ಲ: ಸುಷ್ಮಾ ಸ್ವರಾಜ್

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿವಾಹ ನೋಂದಣಿ ಮಾಡಿದ ಅಧಿಕಾರಿ ಸೇರಿದಂತೆ ಏಳು ಮಂದಿಯನ್ನು ಸೋಮವಾರ ಬಂಧಿಸಿದ್ದಾರೆ.

ಪಾಕಿಸ್ತಾನಕ್ಕೆ ಜೈ ಎಂದ ಲೋಕಸಭೆ ಚುನಾವಣೆ ಅಭ್ಯರ್ಥಿಪಾಕಿಸ್ತಾನಕ್ಕೆ ಜೈ ಎಂದ ಲೋಕಸಭೆ ಚುನಾವಣೆ ಅಭ್ಯರ್ಥಿ

ಪ್ರಕರಣದ ವಿಚಾರಣೆ ನಡೆಸಿರುವ ಇಸ್ಲಾಮಾಬಾದ್ ಹೈಕೋರ್ಟ್, ಈ ಇಬ್ಬರು ಅಪ್ರಾಪ್ತ ವಯಸ್ಸಿನ ಸಹೋದರಿಯರನ್ನು ವಶಕ್ಕೆ ಪಡೆದುಕೊಂಡು ಅವರಿಗೆ ರಕ್ಷಣೆ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

English summary
External Minister Sushma Swaraj asked Pakistan to return to the family two minor girls who were abducted, forcefully converted to Islam and married.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X