ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಯುರ್ವೇದ ಸ್ನಾತಕೋತ್ತರ ಪದವೀಧರರಿಗೆ ಶಸ್ತ್ರ ಚಿಕಿತ್ಸೆ ತರಬೇತಿ ನೀಡಲಾಗುತ್ತೆ

|
Google Oneindia Kannada News

ನವದೆಹಲಿ, ಫೆಬ್ರವರಿ 02: ಆಯುರ್ವೇದ ಸ್ನಾತಕೋತ್ತರ ಪದವೀಧರರಿಗೆ ಶಸ್ತ್ರ ಚಿಕಿತ್ಸೆ ತರಬೇತಿಯನ್ನು ಶೀಘ್ರ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಆಯುರ್ವೇದ ಸ್‌ನಾತಕೋತ್ತರ ಪದವೀಧರರಿಗೆ ಭಾರತೀಯ ಔಷಧ ಮಂಡಳಿ ತಿದ್ದುಪಡಿ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ 58 ಶಸ್ತ್ರ ಚಿಕಿತ್ಸೆಯ ತರಬೇತಿ ನೀಡುವ ಅವಶ್ಯಕತೆ ಇದೆ.

ಕೋರ್ಸ್ ಪೂರೈಸಿದ ಬಳಿಕ ಅವರು ವೈಯುಕ್ತಿಕವಾಗಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಲು ಸಮರ್ಥರಾಗಬೇಕಿದೆ ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.

Surgery Training For Ayurveda Post-Grads: Notification Specific To 58 Procedures, Says Govt

ಭಾರತೀಯ ಔಷಧ ಕೇಂದ್ರ ಮಂಡಳಿ (ಆಯುರ್ವೇದ ಸ್ನಾತಕೋತ್ತರ ಶಿಕ್ಷಣ) ತಿದ್ದುಪಡಿ ಅಧಿಸೂಚನೆಯಲ್ಲಿ ಸ್ನಾತಕೋತ್ತರ ಪದವೀಧರರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ನೀಡಲಾಗುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ ಸಚಿವರು ಮಾಹಿತಿ ನೀಡಿದ್ದಾರೆ.

ನಿರ್ದಿಷ್ಟ ಶಸ್ತ್ರ ಚಿಕಿತ್ಸಾ ವಿಧಾನಗಳನ್ನು ನಿರ್ವಹಿಸಲು ಆಯರ್ವೇದ ಸ್ನಾತಕೋತ್ತರಪದವೀಧರರು ಉತ್ತಮ ತರಬೇತಿ ಪಡೆದಿದ್ದಾರೆ ಎಂದು ವಿವರಿಸಿದರು.

ಅಧಿಸೂಚನೆಯು ನಿರ್ದಿಷ್ಟ ಶಸ್ತ್ರ ಚಿಕಿತ್ಸಾಕ್ರಮಗಳಿಗೆ ಸೀಮಿತವಾಗಿದ್ದು,ಇತರೆ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲು ಆಯುರ್ವೇದ ಸ್ನಾತಕೋತ್ತರ ಪದವೀಧರರಿಗೆ ಅನುಮತಿ ನೀಡಿಲ್ಲ ಎಂದು ಆಯುಷ್ ಇಲಾಖೆ ಖಾತೆಯ ಹೆಚ್ಚುವರಿ ಹೊಣೆ ವಹಿಸಿರುವ ಕಿರಣ್ ರಿಜಿಜು ತಿಳಿಸಿದ್ದಾರೆ.

English summary
Post graduate scholars of 'shalya and shalakya' need to be practically trained in 58 surgeries specified in the Indian Medicine Central Council (Post Graduate Ayurveda Education) Amendment Regulations for them to independently perform these procedures after completing course.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X