ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಹೊಸದಾಗಿ 100 ವಿಮಾನ ನಿಲ್ದಾಣ ಸ್ಥಾಪನೆ!

By Nayana
|
Google Oneindia Kannada News

Recommended Video

ಭಾರತದಲ್ಲಿ ನಿರ್ಮಾಣವಾಗಲಿವೆ ನೂರು ವಿಮಾನ ನಿಲ್ದಾಣಗಳು | Oneindia Kannada

ಬೆಂಗಳೂರು, ಸೆಪ್ಟೆಂಬರ್ 5: ದೇಶದಲ್ಲಿ ಮುಂದಿನ ಹದಿನೈದು ವರ್ಷಗಳಲ್ಲಿ 100 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ ಎಂದು ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.

ನವದೆಹಲಿಯಲ್ಲಿ ವಿಮಾನಯಾನ ಶೃಂಗ ಸಭೆಯಲ್ಲಿ ಮಾತನಾಡಿದ ಅವರು ಮುಂದಿನ 15 ವರ್ಷಗಳಲ್ಲಿ 100 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದ್ದು ಒಟ್ಟು 4.2ಲಕ್ಷ ಕೋಟಿ ವೆಚ್ಚವಾಗಲಿದೆ. ಬೆಳವಣಿಗೆ ದೃಷ್ಟಿಯಲ್ಲಿ ನೋಡುವುದಾದರೆ ವಿಶ್ವದಲ್ಲಿಯೇ ಭಾರತ ವಿಮಾನಯಾನ ವಲಯ ತ್ವರಿತ ವೇಗವನ್ನು ಹೊಂದಿದೆ ಎಂದು ತಿಳಿಸಿದರು.

ಕೆಂಪೇಗೌಡ ಏರ್‌ಪೋರ್ಟ್ ಬಳಕೆದಾರರ ಶುಲ್ಕ ಸೆ.16ರಿಂದ ಕಡಿತಕೆಂಪೇಗೌಡ ಏರ್‌ಪೋರ್ಟ್ ಬಳಕೆದಾರರ ಶುಲ್ಕ ಸೆ.16ರಿಂದ ಕಡಿತ

ಜಾಗತಿಕ ಏರ್‌ಲೈನ್ಸ್ ಸಂಸ್ಥೆ ಐಎಟಿಎ ಪ್ರಕಾರ ವಿಮಾನಯಾನ ಪ್ರಯಾಣಿಕರ ಮಾರುಕಟ್ಟೆಯಲ್ಲಿ ಭಾರತವು, ಜರ್ಮನಿ, ಜಪಾನ್, ಸ್ಪೇನ್ ಹತ್ತು ವರ್ಷದಲ್ಲಿ ಹಿಂದಿಕ್ಕಲಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ತಿರುಪತಿಗೆ ಫ್ಲೈ ಬಸ್ ಆರಂಭಬೆಂಗಳೂರು ವಿಮಾನ ನಿಲ್ದಾಣದಿಂದ ತಿರುಪತಿಗೆ ಫ್ಲೈ ಬಸ್ ಆರಂಭ

ವಿಮಾನಯಾನ ಸಂಸ್ಥೆಗಳು ಈ ವರ್ಷ 13 ಸಾವಿರ ಕೋಟಿ ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಂದು ವಿಮಾನಯಾನ ಕನ್ಸೆಲ್ಟಿಂಗ್ ಸಂಸ್ಥೆಯೊಂದು ಹೇಳಿದೆ. ಪ್ರಯಾಣಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿಮಾನ ಯಾನ ಸಂಸ್ಥೆಗಳು ವಿವಿಧ ಕೊಡುಗೆಗಳನ್ನು ನೀಡಿತ್ತು.ಹಾಗಾಗಿ ಇದರಿಂದ ನಷ್ಟ ಅನುಭವಿಸಲಿದೆ ಎಂದು ತಿಳಿಸಿದೆ.

 ವಿಮಾನಯಾನದ ದರ ಅಗ್ಗ

ವಿಮಾನಯಾನದ ದರ ಅಗ್ಗ

ವಿಮಾನಯಾನ ದರವೇ ಅಗ್ಗ ಯಾಕೆಂದರೆ ಇಬ್ಬರು ವ್ಯಕ್ತಿಗಳು ಆಟೋರಿಕ್ಷಾದಲ್ಲಿ ತೆರಳಲು 10ರೂ. ವ್ಯಯಿಸುತ್ತಾರೆ, ಅವರಿಗೆ ಪ್ರತಿ ಕಿ.ಮೀಗೆ ಐದು ರೂ ಶುಲ್ಕ ಬೀಳುತ್ತದೆ. ಆದರೆ ಕಿಲೋಮೀಟರ್ ಅಂದಾಜಿನಲ್ಲಿ ವಿಮಾನದಲ್ಲಾದರೆ ಪ್ರತಿ ಕಿ.ಮೀಗೆ 4ರೂ. ಮಾತ್ರ ಬೀಳುತ್ತದೆ ಹಾಗಾಗಿ ವಿಮಾನದ ಆಟೋರಿಕ್ಷಾಗಿಂತಲೂ ಅಗ್ಗ ಎನ್ನಬಹುದು ಎಂದರು.

 ದೂರದ ಪ್ರಯಾಣಕ್ಕೆ ವಿಮಾನಯಾನ ಆಯ್ಕೆ ಒಳ್ಳೆಯದು

ದೂರದ ಪ್ರಯಾಣಕ್ಕೆ ವಿಮಾನಯಾನ ಆಯ್ಕೆ ಒಳ್ಳೆಯದು

ಆಟೋರಿಕ್ಷಾಗಿಂತಲೇ ವಿಮಾನಯಾನ ಪ್ರಯಾಣ ಶುಲ್ಕ ಕಡಿಮೆ ಎನ್ನುವ ಸಚಿವರ ಮಾತಿಗೆ ಹಲವು ಆಕ್ಷೇಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅವರು ದೂರದ ಪ್ರಯಾಣಕ್ಕೆ ವಿಮಾನಯಾನ ಆಯ್ದುಕೊಂಡರೆ ಒಳ್ಳೆಯದು, ಬೇರೆ ಮಾದರಿಯ ಪ್ರಯಾಣಕ್ಕೆ ಹೋಲಿಸಿದರೆ ವಿಮಾನನಯಾನ ದರ ಕಡಿಮೆ ಇರುತ್ತದೆ.ಅದರಲ್ಲೂ ಅಲ್ಪ ದೂರದ ಪ್ರಯಾಣಕ್ಕೆ ವಿಮಾನವನ್ನೇ ಬಳಸಬಹುದು ಎಂದರು.

ಬೆಂಗಳೂರು ಏರ್ ಪೋರ್ಟ್: 3 ತಿಂಗಳಲ್ಲಿ 80 ಲಕ್ಷ ಮಂದಿ ಪ್ರಯಾಣಬೆಂಗಳೂರು ಏರ್ ಪೋರ್ಟ್: 3 ತಿಂಗಳಲ್ಲಿ 80 ಲಕ್ಷ ಮಂದಿ ಪ್ರಯಾಣ

 ಕೈಗೆಟುಕುವ ದರದಲ್ಲಿ ವಿಮಾನಯಾನಕ್ಕೆ ಕ್ರಮ

ಕೈಗೆಟುಕುವ ದರದಲ್ಲಿ ವಿಮಾನಯಾನಕ್ಕೆ ಕ್ರಮ

ವಿಮಾನಯಾನವು ಎಲ್ಲಾ ಜನತೆಯ ಕೈಗೆಟುಕುವಂತೆ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. 2013ರಲ್ಲಿ 6 ಕೋಟಿ ಜನರು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು. ಇದೀಗ 12ಕೋಟಿಗೂ ಹೆಚ್ಚು ಜನರು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಅಧ್ಯಕ್ಕೆ ದೇಶದಲ್ಲಿ 75 ವಿಮಾನ ನಿಲ್ದಾಣಗಳಿದ್ದು ಅವುಗಳನ್ನು 100ಕ್ಕೆ ಏರಿಸುವ ಚಿಂತನೆ ಇದೆ ಎಂದು ಅವರು ತಿಳಿಸಿದರು.

 2018ರಲ್ಲಿ 13ಸಾವಿರ ಕೋಟಿ ನಷ್ಟ

2018ರಲ್ಲಿ 13ಸಾವಿರ ಕೋಟಿ ನಷ್ಟ

ಈ ವರ್ಷದಲ್ಲಿ ವಿಮಾನಯಾನ ಸಂಸ್ಥೆಗಳು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದವು. ಪ್ರಯಾಣಿಕರನ್ನು ಸೆಳೆಯಲು ವಿವಿಧ ಕೊಡುಗೆಗಳನ್ನು ನೀಡಿದರೂ ಪ್ರಯಾಣಿಕರ ಸಂಖ್ಯೆಯೇನು ಹೆಚ್ಚಾಗಿರಲಿಲ್ಲ. ಆದರೆ ಸಂಸ್ಥೆಗಳಿಗೆ ಸುಮಾರು 13 ಕೋಟಿ ನಷ್ಟಅನುಭವಿಸುವ ಸಾಧ್ಯತೆ ಇದೆ ಎಂದು ವಿಮಾನಯಾನ ವಲಯದ ಕನ್ಸೆಲ್ಟಿಂಗ್ ಸಂಸ್ಥೆ ಸಿಎಪಿಎ ಇಂಡಿಯಾ ತಿಳಿಸಿದೆ.

English summary
Union minister Suresh Prabhu has assured that there will be 100 new airports in India within ten years and expected that will give boom for the economy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X