ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಎ ವಿರುದ್ಧ ಅರ್ಜಿ: ಸುಪ್ರೀಂಕೋರ್ಟ್‌ನಲ್ಲಿ ಬುಧವಾರದಿಂದ ವಿಚಾರಣೆ

|
Google Oneindia Kannada News

ನವದೆಹಲಿ, ಜನವರಿ 22: ಸಿಎಎ (ಪೌರತ್ವ ಕಾಯ್ದೆ) ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರದಿಂದ ಕೈಗೆತ್ತಿಕೊಳ್ಳಲಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ನೇತೃತ್ವದ ಪೀಠವು ಪೌರತ್ವ ಕಾಯ್ದೆ ವಿರೋಧದಲ್ಲಿ ಸಲ್ಲಿಕೆ ಆಗಿರುವ ಅರ್ಜಿಗಳನ್ನು ವಿಚಾರಣೆ ನಡೆಸಲಿದೆ.

ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥನ ಮೇಲೆ 1 ಕೋಟಿ ರು ಮಾನಹಾನಿ ಪ್ರಕರಣಬಿಜೆಪಿ ಐಟಿ ಸೆಲ್‌ ಮುಖ್ಯಸ್ಥನ ಮೇಲೆ 1 ಕೋಟಿ ರು ಮಾನಹಾನಿ ಪ್ರಕರಣ

ಪೌರತ್ವ ಕಾಯ್ದೆ ವಿರುದ್ಧ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರ ಜೊತೆಗೆ ಕೇರಳ, ರಾಜಸ್ಥಾನ ರಾಜ್ಯ ಸರ್ಕಾರಗಳೂ ಸಹ ಅರ್ಜಿ ಸಲ್ಲಿಸಿವೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕುರಿತಂತೆ ಸುಪ್ರೀಂಕೋರ್ಟ್ ಡಿಸೆಂಬರ್ 18 ರಂದು ಕೇಂದ್ರ ಸರ್ಕಾರಕ್ಕೆ ನೊಟೀಸ್ ನೀಡಿತ್ತು.

Supreme Court Will Hear Pleas Challenging CAA From Wednesday

ಜನವರಿ 9 ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಗೆ ಒಪ್ಪದಿದ್ದ ಸುಪ್ರೀಂಕೋರ್ಟ್, ದೇಶವು ಕಷ್ಟದ ಪರಿಸ್ಥಿತಿಯಲ್ಲಿದೆ, ಮೊದಲು ಹಿಂಸಾಚಾರ ನಿಲ್ಲಲಿ ನಂತರ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತೇವೆ ಎಂದಿತ್ತು. ಅಂತೆಯೇ ಪ್ರತಿಭಟನೆಗಳು ಸ್ವಲ್ಪ ಕಡಿಮೆ ಆದ ನಂತರ ಈಗ ವಿಚಾರಣೆ ಕೈಗೆತ್ತಿಕೊಂಡಿದೆ.

ಎಷ್ಟೇ ಪ್ರತಿಭಟನೆ ಮಾಡಿ, ಸಿಎಎಯಿಂದ ಹಿಂದೆ ಸರಿಯುವ ಮಾತೇ ಇಲ್ಲ: ಅಮಿತ್ ಶಾಎಷ್ಟೇ ಪ್ರತಿಭಟನೆ ಮಾಡಿ, ಸಿಎಎಯಿಂದ ಹಿಂದೆ ಸರಿಯುವ ಮಾತೇ ಇಲ್ಲ: ಅಮಿತ್ ಶಾ

ಕೇಂದ್ರವು ತಂದ ಕಾಯ್ದೆಗೆ ಡಿಸೆಂಬರ್ 12 ರಂದು ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಈ ಕಾಯ್ದೆಯು ಭಾರಿ ಚರ್ಚೆ ಹುಟ್ಟುಹಾಕಿದ್ದು, ಈ ಕಾಯ್ದೆಯು ಸಂವಿಧಾನ ವಿರೋಧಿ ಎಂದು ವಿಪಕ್ಷಗಳು ಆರೋಪಿಸಿವೆ. ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್ ಕಾಯ್ದೆಯ ಕುರಿತು ನೀಡುವ ತೀರ್ಪು ಬಹುಮುಖ್ಯವಾಗಿದೆ.

English summary
Supreme court will hear plea challenging CAA from wednesday. Many pleas were submitted to supreme court. ಸಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X