ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಸಾಂವಿಧಾನಿಕ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 26: ಆಧಾರ್ ಸಿಂಧುತ್ವ ಕುರಿತಂತೆ ಸುಪ್ರೀಂ ಕೋರ್ಟಿನಲ್ಲಿ ಇಂದು ಮಹತ್ವದ ತೀರ್ಪು ಹೊರಬಿದ್ದಿದ್ದು, ಆಧಾರ್ ಸಾಂವಿಧಾನಿಕ ಮಾನ್ಯತೆಯನ್ನು ಕೋರ್ಟ್ ಎತ್ತಿಹಿಡಿದಿದೆ.

ಆಧಾರ್ ಕಾರ್ಡ್ ಅನ್ನು ಎಲ್ಲಾ ಸರ್ಕಾರಿ ಯೋಜನೆಗಳಿಗೂ ಕಡ್ಡಾಯವಾಗಿ ಬಳಸಬೇಕು ಎಂದು ಸುಪ್ರೀಂ ಹೇಳಿದೆ.

ನಿವೃತ್ತಿಗೂ ಮುನ್ನ ದೀಪಕ್ ಮಿಶ್ರಾ ಕೈಯಲ್ಲಿ 5 ಮಹತ್ವದ ಪ್ರಕರಣ ನಿವೃತ್ತಿಗೂ ಮುನ್ನ ದೀಪಕ್ ಮಿಶ್ರಾ ಕೈಯಲ್ಲಿ 5 ಮಹತ್ವದ ಪ್ರಕರಣ

ಆದರೆ ಖಾಸಗೀ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆಧಾರ್ ಕಡ್ಡಾಯವಲ್ಲ ಎಂದು ಅದು ಹೇಳಿದೆ.

ಒಟ್ಟು 40 ಪುಟಗಳ ತೀರ್ಪಿನ ಸಾರಾಂಶವನ್ನು ನ್ಯಾ.ಎಕೆ ಸಿಕ್ರಿ ಓದಿದ್ದು, 'ಖಾಸಗೀತನದ ಹಕ್ಕು ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ' ಎಂದಿದ್ದಾರೆ.

ಪಂಚಸದಸ್ಯ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ ಎಕೆ ಸಿಕ್ರಿ, ನ್ಯಾ.ಎ ಎಂ ಖಾನ್ ವಿಲ್ಕರ್, ನ್ಯಾ.ಡಿ ವೈ ಚಂದ್ರಚೂಡ್, ನ್ಯಾ. ಅಶೋಕ್ ಭೂಷಣ್ ಅವರಿದ್ದಾರೆ.

ಸುಪ್ರೀಂ ತೀರ್ಪಿನ ನಂತರ ಯಾವ್ಯಾವುದಕ್ಕೆ ಆಧಾರ್ ಕಡ್ಡಾಯ? ಯಾವುದಕ್ಕೆ ಕಡ್ಡಾಯವಲ್ಲ? ಸುಪ್ರೀಂ ತೀರ್ಪಿನ ನಂತರ ಯಾವ್ಯಾವುದಕ್ಕೆ ಆಧಾರ್ ಕಡ್ಡಾಯ? ಯಾವುದಕ್ಕೆ ಕಡ್ಡಾಯವಲ್ಲ?

ಆಧಾರ್ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಐವರು ನ್ಯಾಯಮೂರ್ತಿಗಳಲ್ಲಿ ಮೂವರು ನ್ಯಾಯಮೂರ್ತಿಗಳು ಸಿಂಧುತ್ವವನ್ನು ಸ್ವಾಗತಿಸಿದ್ದರೆ, ಇನ್ನಿಬ್ಬರು ವಿರೋಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚಸದಸ್ಯ ಪೀಠ ಈ ಪ್ರಕರಣದ ವಿಚಾರಣೆಯನ್ನು ಕಳೆದ ಮಾರ್ಚ್ ತಿಂಗಳಿನಿಂದ ಆರಂಭಿಸಿತ್ತು.

Newest FirstOldest First
11:49 AM, 26 Sep

ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್
11:48 AM, 26 Sep

ಆಧಾರ್ ಕಾಯ್ದೆಯ ಸೆಕ್ಷೆನ್ 57 ಅನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ಖಾಸಗೀ ಕಂಪೆನಿಗಳು ಆಧಾರ್ ಕಾರ್ಡ್ ಅನ್ನು ಕೇಳುವಂತಿಲ್ಲ.
11:45 AM, 26 Sep

ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ಕೆಲ ನಿರ್ಬಂಧಗಳನ್ನೂ ಕೋರ್ಟ್ ಹೇರಿದೆ. ಆಧಾರ್ ಗೆ ಕನಿಷ್ಠ ಬಯೋಮೆಟ್ರಿಕ್ ಮಾತ್ರ ಬಳಸಬೇಕು. ವ್ಯಕ್ತಿಯ ಘನತೆಯನ್ನು ಗಮನದಲ್ಲಿಡುವುದು ಅವಶ್ಯಕ : ನ್ಯಾ. ಸಿಕ್ರಿ
11:45 AM, 26 Sep

ಮುಖ್ಯ ನ್ಯಾಯಮೂರ್ತಿ ಮಿಶ್ರಾ ಮತ್ತು ಖಾನ್ವಿಲ್ಕರ್ ಪರವಾಗಿ ತೀರ್ಪನ್ನು ಓದುತ್ತಿರುವ ನ್ಯಾ. ಎಕೆ ಸಿಕ್ರಿ.
11:39 AM, 26 Sep

ಐಟಿ ರಿಟರ್ನ್ಸ್ ಸಲ್ಲಿಕೆಗೆ ಆಧಾರ್ ಜೋಡಣೆ ಕಡ್ಡಾಯ-ಸುಪ್ರೀಂ ಕೋರ್ಟ್
11:38 AM, 26 Sep

ಪಾನ್ ಕಾರ್ಡ್ ಜೊತೆ ಆಧಾರ್ ಜೋಡಣೆ ಕಡ್ಡಾಯ- ಸುಪ್ರೀಂ ಕೋರ್ಟ್
11:37 AM, 26 Sep

ಯುಜಿಸಿ, ನೀಟ್ ಮತ್ತು ಸಿಬಿಎಸ್ ಇ ಪರೀಕ್ಷೆಗಳಿಗೆ ಆಧಾರ್ ಕಡ್ಡಾಯವಲ್ಲ- ಸುಪ್ರೀಂ ಕೋರ್ಟ್
Advertisement
11:34 AM, 26 Sep

ಮೊಬೈಲ್ ನಂಬರ್ ಗೆ ಆಧಾರ್ ಜೋಡಣೆ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್
11:27 AM, 26 Sep

ಶಿಕ್ಷಣೆ ಸಂಸ್ಥೆಗಳಿಗೂ ಆಧಾರ್ ಕಡ್ಡಾಯವಲ್ಲ- ಸುಪ್ರೀಂ ಕೋರ್ಟ್
11:27 AM, 26 Sep

ಖಾಸಗೀ ಕಂಪನಿಗಳು ಆಧಾರ್ ಬಳಸುವಂತಿಲ್ಲ. ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯ.
11:24 AM, 26 Sep

ಆಧಾರ್ ಪ್ರತಿ ನಾಗರಿಕನಿಗೆ ಪ್ರತ್ಯೇಕ ಗುರುತು ನೀಡುತ್ತದೆ. ಇದು ಆಧಾರ್ ದಾಖಲೆಗೂ ಮತ್ತು ಗುರುತು ಪತ್ತೆ ಹಚ್ಚಲು ಬಳಸಲಾಗುವ ಇತರ ದಾಖಲೆಗಳಿಗೂ ಇರುವ ವ್ಯತ್ಯಾಸ - ನ್ಯಾ. ಸಿಕ್ರಿ
11:24 AM, 26 Sep

ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್, ಪಾಸ್ಪೋರ್ಟ್ ಹೊಂದಿ ವ್ಯವಸ್ಥೆಯನ್ನು ದುರ್ಬಳಸಿಕೊಳ್ಳಬಹುದು. ಆದರೆ, ಒಂದಕ್ಕಿಂತ ಹೆಚ್ಚು ಬಯೋಮೆಟ್ರಿಕ್ ಮಾಹಿತಿ ಇರಲು ಸಾಧ್ಯವಿಲ್ಲ. ಆದ್ದರಿಂದ ಆಧಾರ್ ಯುನೀಕ್ ಆಗಿದೆ. ಆಧಾರ್ ಡ್ಯುಪ್ಲಿಕೇಟ್ ಮಾಡಲು ಸಾಧ್ಯವಿಲ್ಲ - ನ್ಯಾ. ಸಿಕ್ರಿ
Advertisement
11:24 AM, 26 Sep

ಪಂಚಸದಸ್ಯ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ ಎಕೆ ಸಿಕ್ರಿ, ನ್ಯಾ.ಎ ಎಂ ಖಾನ್ ವಿಲ್ಕರ್, ನ್ಯಾ.ಡಿ ವೈ ಚಂದ್ರಚೂಡ್, ನ್ಯಾ. ಅಶೋಕ್ ಭೂಷಣ್ ಅವರಿದ್ದಾರೆ.
11:24 AM, 26 Sep

"ಆಧಾರ್ ಮಾಹಿತಿಯನ್ನು ತಿರುಚಲು ಸಾಧ್ಯವಿಲ್ಲ. ನಕಲಿ ಆಧಾರ್ ಕಾರ್ಡ್ ಸೃಷ್ಟಿಯೂ ಸಾಧ್ಯವಿಲ್ಲ. ನಕಲಿ ಆಧಾರ್ ಕಾರ್ಡ್ ಸೃಷ್ಟಿಸಲು ಸಾಧ್ಯವಿದ್ದರೆ ಅದನ್ನು ತಡೆಗಟ್ಟಲು ಯತ್ನಿಸಿ" ಎಂದು ನ್ಯಾಯಾಲಯ ಹೇಳಿದೆ.
11:24 AM, 26 Sep

'ಆಧಾರ್ ಮೇಲಿನ ದಾಳಿ ಸಂವಿಧಾನಕ್ಕೆ ವಿರುದ್ಧವಾದುದು. ಆದರೆ ಸಮಾಜದ ಹಿತದೃಷ್ಟಿಯಿಂದ ಕೆಲವು ನಿರ್ಬಂಧಗಳು ಅಗತ್ಯ. ಯೋಜನೆಗಳ ಫಲಾನುಭವಿಗಳಿಗೆ ಆಧಾರ್ ನಿಂದ ಉಪಯೋಗವಾಗುತ್ತಿದೆ' ಎಂದು ಕೋರ್ಟ್ ಹೇಳಿದೆ.
11:23 AM, 26 Sep

'ಆಧಾರ್ ಮೇಲಿನ ದಾಳಿ ಸಂವಿಧಾನಕ್ಕೆ ವಿರುದ್ಧವಾದುದು. ಆದರೆ ಸಮಾಜದ ಹಿತದೃಷ್ಟಿಯಿಂದ ಕೆಲವು ನಿರ್ಬಂಧಗಳು ಅಗತ್ಯ. ಯೋಜನೆಗಳ ಫಲಾನುಭವಿಗಳಿಗೆ ಆಧಾರ್ ನಿಂದ ಉಪಯೋಗವಾಗುತ್ತಿದೆ' ಎಂದು ಕೋರ್ಟ್ ಹೇಳಿದೆ.
11:22 AM, 26 Sep

ಆಧಾರ್ ದಮನಕ್ಕೊಳಗಾದ ಸಮುದಾಯಕ್ಕೆ ಹೆಗ್ಗುರುತಿನ ಜೊತೆಗೆ ಅಧಿಕಾರವನ್ನೂ ನೀಡುತ್ತದೆ. ನಮ್ಮ ಗೌಪ್ಯತೆಯನ್ನು ಆಧಾರ್ ಬಯಲು ಮಾಡುತ್ತದೆ ಎಂಬುದು ವಾದವಾಗಿತ್ತು. ಆದರೆ, ಗೌಪ್ಯತೆಯ ಹಕ್ಕು ಗೌರವದಿಂದ ಬದುಕುವ ಹಕ್ಕನ್ನೂ ನೀಡುತ್ತದೆ - ನ್ಯಾ. ಸಿಕ್ರಿ

12 ಅಂಕಿಗಳ ಆಧಾರ್ ಸಂಖ್ಯೆಯನ್ನು ಬಹುಮುಖ್ಯ ದಾಖಲೆಗಳೊಂದಿಗೆ ಜೋಡಿಸುವುದರಿಂದ ಖಾಸಗಿ ಮಾಹಿತಿ ಸೋರಿಕೆಯಾಗುವ ಸಂಭವವಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದಿದೆ. ಖಾಸಗೀತನ ಮೂಲಭೂತ ಹಕ್ಕು ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿರುವುದು ಆಧಾರ್ ಕಡ್ಡಾಯ ಕ್ರಮದಿಂದ ಖಾಸಗೀತನಕ್ಕೆ ಧಕ್ಕೆಯಾಗುತ್ತದೆ ಎಂಬ ಆರೋಪಕ್ಕೆ ಪುಷ್ಟಿ ನೀಡಿದಂತಾಗಿತ್ತು.

ಇನ್ನುಮುಂದೆ ಕಾಲೇಜುಗಳಲ್ಲೇ ಸಿಗುತ್ತೆ ಆಧಾರ್ ಕಾರ್ಡ್ ಇನ್ನುಮುಂದೆ ಕಾಲೇಜುಗಳಲ್ಲೇ ಸಿಗುತ್ತೆ ಆಧಾರ್ ಕಾರ್ಡ್

Supreme court verdict on validity of Aadhaar

ಸಿಜೆಐ ದೀಪಕ್ ಮಿಶ್ರಾ ಅವರು ನಿವೃತ್ತಿ(ಅ.2 ರಂದು)ಗೂ ಮುನ್ನ ತೀರ್ಪ ನೀಡುತ್ತಿರುವ ಮಹತ್ವದ ಪ್ರಕರಣಗಳಲ್ಲಿ ಇದೂ ಒಂದಾಗಿದೆ.

English summary
Aadhaar headed by Chief Justice of India (CJI) Dipak Misra will begin hearing a number of petitions filed challenging the validity of the identification number.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X