ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹಮತದ ಸಲಿಂಗಕಾಮ ಅಪರಾಧವಲ್ಲ ಎಂದ ಸುಪ್ರೀಂ ಕೋರ್ಟ್

|
Google Oneindia Kannada News

Recommended Video

      ಸಲಿಂಗಕಾಮ ಅಪರಾಧವಲ್ಲ ಎಂದು ಘೋಷಿಸಿದ ಸುಪ್ರೀಂ ಕೋರ್ಟ್ | Oneindia Kannada

      ನವದೆಹಲಿ, ಸೆಪ್ಟೆಂಬರ್ 06:ಐಪಿಸಿ ಸೆಕ್ಷನ್ 377ರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಹಮತದ ಸಲಿಂಗಕಾಮ ಅಪರಾಧವಲ್ಲ ಎಂಬ ತೀರ್ಪು ನೀಡಿದೆ.

      ಭಾರತದಲ್ಲಿ ಸಲಿಂಗಕಾಮ ಅಪರಾಧ ಎಂದು ಪರಿಗಣಿಸುವ, ಭಾರತೀಯ ದಂಡಸಂಹಿತೆ(ಐಪಿಸಿ) ಸೆಕ್ಷನ್ 377ರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ

      ಹೋಟೆಲ್ ಉದ್ಯಮಿ ಕೇಶವ್ ಸೂರಿ ಅವರು ಸೆಕ್ಷನ್ 377ರ ವಿರುದ್ಧ ಅರ್ಜಿ ಸಲ್ಲಿಸಿದ್ದರು. ನಂತರ ಹಮ್ಸಫರ್ ಟ್ರಸ್ಟ್‌ನ ಅಶೋಕ್ ರಾವ್ ಕವಿ ಮತ್ತು ಆರಿಫ್ ಜಾಫರ್ ಏಪ್ರಿಲ್ 27ರಂದು ಸೆಕ್ಷನ್ ರದ್ದತಿಗೆ ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು. ಮೇ ತಿಂಗಳಿನಿಂದ ನಡೆದ ವಿಚಾರಣೆಯ ತೀರ್ಪು ಇಂದು ಹೊರಬಿದ್ದಿದೆ..

      ಏನಿದು 377 ಸೆಕ್ಷನ್? ಎಂಥ ಸಂಭೋಗ ಅಪರಾಧವಾಗುತ್ತದೆ?ಏನಿದು 377 ಸೆಕ್ಷನ್? ಎಂಥ ಸಂಭೋಗ ಅಪರಾಧವಾಗುತ್ತದೆ?

      ಕೇಂದ್ರ ಸರ್ಕಾರವೂ ಸೆಕ್ಷನ್ 377 ರದ್ದತಿಯ ಕುರಿತು ಸುಪ್ರೀಂ ಕೋರ್ಟ್ ತನ್ನ ವಿವೇಚನೆಗೆ ತೋಚಿದ್ದನ್ನು ಮಾಡಬಹುದು ಎಂದಿತ್ತು. ಇಬ್ಬರು ವಯಸ್ಕರು ಸಮ್ಮತಿಯಿಂದ ನಡೆಸುವ ಲೈಂಗಿಕ ಕ್ರಿಯೆ ಅಪರಾಧವಲ್ಲ ಎಂದು ಘೋಷಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು.

      Supreme Court Verdict on IPC Section 377

      ಐಪಿಸಿ ಸೆಕ್ಷನ್ 377 ತೀರ್ಪು: ಸುಪ್ರೀಂಕೋರ್ಟಿನತ್ತ LGBT ಗಳ ಚಿತ್ತ!ಐಪಿಸಿ ಸೆಕ್ಷನ್ 377 ತೀರ್ಪು: ಸುಪ್ರೀಂಕೋರ್ಟಿನತ್ತ LGBT ಗಳ ಚಿತ್ತ!

      Newest FirstOldest First
      12:08 PM, 6 Sep

      ಅಮುಂದಿನ ತಿಂಗಳು ಅಂದರೆ ಅಕ್ಟೋಬರ್ 2 ರಂದು ತಮ್ಮ ಸ್ಥಾನದಿಂದ ನಿವೃತ್ತರಾಗಲಿರುವ ದೀಪಕ್ ಮಿಶ್ರಾ ಅವರು ನಿವೃತ್ತಿಗೂ ಮುನ್ನ ನೀಡಿದ ಮಹತ್ವದ ತೀರ್ಪುಗಳಲ್ಲಿ ಇದೂ ಒಂದಾಗಿದೆ.
      12:06 PM, 6 Sep

      ಸಲಿಂಗಕಾಮ ಅಪರಾಧ ಎಂದಿದ್ದ ಸೆಕ್ಷನ್ 377 ಅಡಿಯಲ್ಲಿ ಈ ಅಪರಾಧಕ್ಕೆ 10 ವರ್ಷಗಳ ಕಾಲ ಜೈಲುಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಿತ್ತು.
      12:03 PM, 6 Sep

      ತೀರ್ಪು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ.ರೋಹಿಂಟನ್ ನಾರಿಮನ್, ನ್ಯಾ. ಎ.ಎಂ.ಖಾನ್ವಿಲ್ಕರ್, ನ್ಯಾ.ಡಿವೈ ಚಂದ್ರಚೂಡ ಮತ್ತು ನ್ಯಾ.ಇಂದು ಮಲ್ಹೋತ್ರಾ
      11:59 AM, 6 Sep

      ಸುಪ್ರೀಂ ಕೋರ್ಟ್ ತೀರ್ಪಿನಿಂದ ನಿರಾಳರಾದ ಸಲಿಂಗಕಾಮಿಗಳು. ತೀರ್ಪು ಕೇಳಿ ಸಂಭ್ರಮಾಚರಣೆ
      11:58 AM, 6 Sep

      ಪ್ರತಿಯೊಬ್ಬರೂ ತಮ್ಮ ಗುರುತನ್ನು ಸಂರಕ್ಷಿಸಿಕೊಳ್ಳುವುದು ಬದುಕಿನಲ್ಲಿ ಅಗತ್ಯ: ದೀಪಕ್ ಮಿಶ್ರಾ
      11:57 AM, 6 Sep

      ಜುಲೈ 17 ಕ್ಕೆ ಅಂತ್ಯಕೊಂದಿದ್ದ ಅರ್ಜಿ ವಿಚಾರಣೆಯ ತೀರ್ಪು ಇಂದು ಪ್ರಕಟ
      11:56 AM, 6 Sep

      ಸಲಿಂಗ ಹೋರಾಟವನ್ನು ಅಪರಾಧ ಎಂದು ಕರೆಯುವುದು ತಪ್ಪು: ಸುಪ್ರೀಂ ಕೋರ್ಟ್
      Advertisement
      11:56 AM, 6 Sep

      ಪರಸ್ಪರ ಎಲ್ಲರ ಹಕ್ಕನ್ನೂ ಗೌರವಿಸುವುದು ಮುಖ್ಯ-ಸುಪ್ರೀಂ ಕೋರ್ಟ್
      11:55 AM, 6 Sep

      ಎಲ್ಲಾ ಸಾಮಾನ್ಯ ಜನರಂತೆಯೇ ಸಲಿಂಗಿಗಳಿಗೂ ಹಕ್ಕಿದೆ-ಸುಪ್ರೀಂ ಕೋರ್ಟ್
      11:53 AM, 6 Sep

      ಸಲಿಂಗಕಾಮಿಗಳ ಹೋರಾಟಕ್ಕೆ ಕೊನೆಗೂ ಸಂದ ಜಯ
      11:52 AM, 6 Sep

      ಐವರು ನ್ಯಾಯಾಧೀಶರನ್ನೊಳಗೊಂಡಿದ್ದ ಪೀಠದಿಂದ ಮಹತ್ವದ ತೀರ್ಪು
      11:51 AM, 6 Sep

      ಘನತೆ ಮತ್ತು ಖಾಸಗೀತನ ಬಹಳ ಮುಖ್ಯ: ದೀಪಕ್ ಮಿಶ್ರಾ
      Advertisement
      11:46 AM, 6 Sep

      ಸೆಕ್ಷನ್ 377ರ ಪ್ರಕಾರ ನಿಸರ್ಗ ಸಹಜವಲ್ಲದ ಲೈಂಗಿಕತೆ ಅಪರಾಧ. ಆದರೆ ಇದು ಸ್ತ್ರೀ ಸಲಿಂಗ ಕಾಮಿಗಳು, ಲೈಂಗಿಕ ಅಲ್ಪಸಂಖ್ಯಾತರು ಅಥವಾ ಯಾವುದೇ ನಿರ್ದಿಷ್ಟ ಸಮುದಾಯದ ಬಗ್ಗೆಯಾಗಲೀ ಯಾವುದೇ ಅಭಿಪ್ರಾಯ ನೀಡುವುದಿಲ್ಲ.

      English summary
      Homosexuality not a crime, says CJI Dipak Misra while delivering verdict of Section 377.The Supreme Court (SC) pronounces its verdict on pleas challenging the validity of section 377 of the Indian Penal Code (IPC) on Thursday(September 06)
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X