ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನರ್ಹ ಶಾಸಕರ ಕುರಿತು ಸುಪ್ರೀಂ ತೀರ್ಪು: ಅನರ್ಹರ ಪರ ವಕೀಲ ಹೇಳಿದ್ದೇನು?

|
Google Oneindia Kannada News

ನವದೆಹಲಿ, ನವೆಂಬರ್ 13: ಅನರ್ಹ ಶಾಸಕರು ನೇರವಾಗಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ತಪ್ಪಲ್ಲ ಕಾನೂನು ಬದ್ಧವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿರುವುದಾಗಿ ಅನರ್ಹರ ಪರ ವಕೀಲ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಬುಧವಾರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇದು ಅನರ್ಹ ಶಾಸಕರಿಗೆ ದೊರೆತ ಜಯವಾಗಿದೆ.

ಅನರ್ಹತೆ ಎಂಬುದೇ ಒಂದು ಕಳಂಕ: ಸ್ಪೀಕರ್ ರಮೇಶ್ ಕುಮಾರ್ ಅನರ್ಹತೆ ಎಂಬುದೇ ಒಂದು ಕಳಂಕ: ಸ್ಪೀಕರ್ ರಮೇಶ್ ಕುಮಾರ್

ಸುಪ್ರೀಂಕೋರ್ಟ್ ಶಾಸಕರ ಅನರ್ಹತೆಯನ್ನು ಎತ್ತಿ ಹಿಡಿದೆ. ಅನರ್ಹ ಶಾಸಕರಿಗೆ ಮುಂಬರುವ ಚುನಾವಣೆಯಲ್ಲಿ ನಿಲ್ಲಲು ಅವಕಾಶ ನೀಡಿದೆ. ಆದರೆ ಅವರು ಚುನಾವಣೆಯಲ್ಲಿ ಗೆಲ್ಲದೆ ಯಡಿಯೂರಪ್ಪ ಮಂತ್ರಿ ಮಂಡಲದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸುವಂತಿಲ್ಲ ಎನ್ನುವುದು ಕೂಡ ಸ್ಪಷ್ಟವಾಗಿದೆ.

Supreme Court Verdict On Disqualified MLA What Lawyer Says

ಅನರ್ಹತೆ ಹಾಗೆಯೇ ಇದೆ ಆದರೆ ಅನರ್ಹತೆಯ ಅವಧಿಯನ್ನು ನಿರ್ಧರಿಸುವ ಅಧಿಕಾರ ಸ್ಪೀಕರ್‌ಗೆ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಸ್ಪೀಕರ್ ನೀಡಿದ್ದ ಆದೇಶದಲ್ಲಿ ಶಾಸಕರ ಅನರ್ಹತೆಯನ್ನು 2023ರವರೆಗೆ ಉಲ್ಲೇಖಿಸಲಾಗಿತ್ತು. ಆದರೆ ಆ ಆದೇಶವನ್ನು ತಪ್ಪು ಎಂದಿರುವ ಕೋರ್ಟ್ , ಅನರ್ಹತೆ ಅವಧಿ ನಿರ್ಧರಿಸುವ ಹಕ್ಕು ಸ್ಪೀಕರ್‌ಗೆ ಇಲ್ಲ ಎಂದು ಹೇಳಿದೆ.

English summary
Disqualified MLA Pro Lawyer Sandeep Patil said that, It is not wrong for isqualified MLAs to apply directly to the Supreme Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X