ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂಕೋರ್ಟ್ ತೀರ್ಪು: ಅನರ್ಹ ಶಾಸಕರು ಏನಂತಾರೆ?

|
Google Oneindia Kannada News

ನವದೆಹಲಿ, ನವೆಂಬರ್ 13: ಹದಿನೇಳು ಶಾಸಕರ ಅನರ್ಹತೆಯನ್ನು ಇಂದು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು, ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಆದೇಶ ನೀಡಿದೆ ಇದಕ್ಕೆ ಅನರ್ಹ ಶಾಸಕರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎನ್ನುವುದನ್ನು ನೋಡೋಣ.

ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಎನ್.ವಿ. ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ನೇತೃತ್ವದ ಪೀಠ ಇಂದು ಮಹತ್ವದ ಆದೇಶ ಪ್ರಕಟಿಸಿತು.

Live Updates : ಸುಪ್ರೀಂತೀರ್ಪು : ಅನರ್ಹರು ಚುನಾವಣಾ ಕಣಕ್ಕೆLive Updates : ಸುಪ್ರೀಂತೀರ್ಪು : ಅನರ್ಹರು ಚುನಾವಣಾ ಕಣಕ್ಕೆ

ಈ ವೇಳೆ ಚುನಾವಣೆಗೆ ಆಯ್ಕೆಯಾಗದ ಹೊರತು ಸರ್ಕಾರದಲ್ಲಿ ಯಾವುದೇ ಅಧಿಕಾರ ಹೊಂದುವಂತಿಲ್ಲ. ಸ್ಪೀಕರ್ ಅವರಿಗೆ ಅನರ್ಹತೆ ಮಾಡಲು ಮಾತ್ರ ಅಧಿಕಾರ ಇರುತ್ತದೆ ಹೊರತು ನಿರ್ಧಿಷ್ಟ ಸಮಯದವರೆಗೆ ಅನರ್ಹ ಮಾಡಲು ಅವಕಾಶ ಇಲ್ಲ ಎಂದು ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

17 ಮಂದಿ ಶಾಸಕರನ್ನು ಅನರ್ಹ ಮಾಡಿದ ಸ್ಪೀಕರ್ ನಿರ್ಧಾರ ಸರಿ. ಆದರೆ ವಿಧಾನಸಭೆ ಮುಗಿಯುವರೆಗೆ ಅನರ್ಹ ಮಾಡಿದ ಸ್ಪೀಕರ್ ನಿರ್ಧಾರ ಸರಿಯಲ್ಲ. ಹೀಗಾಗಿ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ತೀರ್ಪು ನೀಡಿದೆ.

ಅನರ್ಹ ಶಾಸಕರ ತೀರ್ಪು: ಸ್ಪೀಕರ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ಅನರ್ಹ ಶಾಸಕರ ತೀರ್ಪು: ಸ್ಪೀಕರ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಅನರ್ಹತೆಯಾದರೂ ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದು ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಈ ನಾಯಕರು ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಅನರ್ಹ ಶಾಸಕರು ಸಂತಸ ವ್ಯಕ್ತಪಡಿಸಿದ್ದಾರೆ.

ಅನರ್ಹರ ಶಾಸಕರ ಕ್ಷೇತ್ರಳಿವು

ಅನರ್ಹರ ಶಾಸಕರ ಕ್ಷೇತ್ರಳಿವು

ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ತೆರವಾದ ಕ್ಷೇತ್ರಗಳಿಗೆ 6 ತಿಂಗಳ ಒಳಗಡೆ ಚುನಾವಣೆ ನಡೆಸಬೇಕಾಗುತ್ತದೆ.

ಸಮ್ಮಿಶ್ರ ಸರ್ಕಾರದಿಂದ ಬೇಸತ್ತು ಬಂದಿದ್ದಕ್ಕೆ ಸಿಕ್ಕ ಗೆಲುವು

ಸಮ್ಮಿಶ್ರ ಸರ್ಕಾರದಿಂದ ಬೇಸತ್ತು ಬಂದಿದ್ದಕ್ಕೆ ಸಿಕ್ಕ ಗೆಲುವು

ಸಮ್ಮಿಶ್ರ ಸರ್ಕಾರದ ಆಡಳಿತದಿಂದ ಬೇಸತ್ತು ಬಂದಿದ್ದಕ್ಕೆ ಅಂತೂ ನಮಗೆ ಜಯನಗರ ಸಿಕ್ಕಿದೆ. ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಆದರೆ ನನ್ನ ಕ್ಷೇತ್ರ ಹಾಗೂ ಮಸ್ಕಿ ಕ್ಷೇತ್ರದ ಬಗ್ಗೆ ಕೆಲವು ಗೊಂದಲಗಳಿವೆ ಜಡ್ಜ್‌ಮೆಂಟ್ ಕಾಪಿ ನೋಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅನರ್ಹ ಶಾಸಕ ಮುನಿರತ್ನ ತಿಳಿಸಿದ್ದಾರೆ.

ಚುನಾವಣೆ ಘೋಷಣೆಯಾಗಿರುವುದು 15 ಕ್ಷೇತ್ರಕ್ಕೆ ಮಾತ್ರ

ಚುನಾವಣೆ ಘೋಷಣೆಯಾಗಿರುವುದು 15 ಕ್ಷೇತ್ರಕ್ಕೆ ಮಾತ್ರ

ಕೇವಲ 15 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಆದರೆ ತೀರ್ಪು ಬರುವಾಗ ಮಾತ್ರ 17 ಅನರ್ಹ ಶಾಸಕರಿಗೂ ಅನವ್ಯವಾಗುವಂತಹ ತೀರ್ಪನ್ನು ನೀಡಿದ್ದಾರೆ. ಇದು ಸ್ವಲ್ಪ ಗೊಂದಲ ಉಂಟು ಮಾಡಿದೆ ಎಂದು ಮುನಿರತ್ನ ಹೇಳಿಕೆ ನೀಡಿದ್ದಾರೆ.

ಹುಣಸೂರಿನಿಂದ ಎಚ್‌ ವಿಶ್ವನಾಥ್ ಸ್ಪರ್ಧೆ

ಹುಣಸೂರಿನಿಂದ ಎಚ್‌ ವಿಶ್ವನಾಥ್ ಸ್ಪರ್ಧೆ

ಹುಣಸೂರಿನಿಂದ ಸ್ಪರ್ಧಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಮೊದಲು ಎಲ್ಲಾ ಅನರ್ಹ ಶಾಸಕರು ಸೇರಿ ಸಭೆ ಕರೆದು ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಸುಪ್ರೀಂಕೋರ್ಟ್ ತೀರ್ಪು ನಮಗೆಲ್ಲರಿಗೂ ಸಂತಸ ತಂದಿದೆ ಎಂದು ಎಚ್‌.ವಿಶ್ವನಾಥ್ ತಿಳಿಸಿದ್ದಾರೆ.

ಚುನಾವಣೆಯಲ್ಲಿ ನಿಲ್ಲಲು ಎಲ್ಲಾ ಸಿದ್ಧತೆ

ಚುನಾವಣೆಯಲ್ಲಿ ನಿಲ್ಲಲು ಎಲ್ಲಾ ಸಿದ್ಧತೆ

ಚುನಾವಣೆಯಲ್ಲಿ ನಿಲ್ಲಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದು ಗಂಟೆಗಳಿಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅಲ್ಲಿಯವರೆಗೂ ಯಾವ ಹೇಳಿಕೆಯನ್ನು ನೀಡುವುದಿಲ್ಲ. ಎಲ್ಲದಕ್ಕಿಂತಲೂ 2023ರವರೆಗೆ ಯಾರೂ ಚುನಾವಣೆಯಲ್ಲಿ ನಿಲ್ಲಲು ಅವಕಾಶ ಇಲ್ಲ ಎಂದು ಹೇಳಲಾಗಿತ್ತು. ಆಗ ಅವರ ಕುಟುಂಬದಿಂದ ಯಾರನ್ನಾದರೂ ನಿಲ್ಲಿಸುವ ಕುರಿತು ಚಿಂತೆ ಶುರುವಾಗಿತ್ತು.ಈಗ ಸ್ವಲ್ಪ ನಿರಾಳವಾಗಿದೆ ಎಂದು ಬೈರತಿ ಭಸವರಾಜು ಹೇಳಿದ್ದಾರೆ.

ನಾನು ಸ್ಪರ್ಧಿಸುತ್ತೇನೆ , ಆದರೆ ಎಲ್ಲಿಂದ ಎಂದು ಗೊತ್ತಿಲ್ಲ

ನಾನು ಸ್ಪರ್ಧಿಸುತ್ತೇನೆ , ಆದರೆ ಎಲ್ಲಿಂದ ಎಂದು ಗೊತ್ತಿಲ್ಲ

ನಾನು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ನಿರ್ಧಾರ ಮಾಡಿದ್ದೇನೆ ಆದರೆ ಎಲ್ಲಿಂದ ನಿಲ್ಲಬೇಕು ಎನ್ನುವ ಕುರಿತು ಇನ್ನೂ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

English summary
Disqualified MLAs reaction over Supremecourt Verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X