ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೋದಿ' ಬಯೋಪಿಕ್ ಬಿಡುಗಡೆ ಕುರಿತು ಸುಪ್ರೀಂ ನಲ್ಲಿ ಇಂದು ವಿಚಾರಣೆ

|
Google Oneindia Kannada News

ನವದೆಹಲಿ, ಏಪ್ರಿಲ್ 15: ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಚಲನಚಿತ್ರ "ಪಿಎಂ ನರೇಂದ್ರ ಮೋದಿ" ಬಿಡುಗಡೆಗೆ ವಿಧಿಸಿರುವ ತಡೆಯ ಬಗ್ಗೆ ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.

ದೇಶದಲ್ಲಿ ಏಪ್ರಿಲ್ 11 ರಿಂದ ಲೋಕಸಭಾ ಚುನಾವಣೆ ಆರಂಭವಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಮೋದಿ ಚಿತ್ರ ಬಿಡುಗಡೆ ಮಾಡುವುದರಿಂದ ನೀತಿ ಸಂಹಿತೆ ಉಲ್ಲಂಘಿಸಿದಂತಾಗುತ್ತದೆ ಎಂದು ದೂರಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. ಈ ದೂರನ್ನು ಸ್ವೀಕರಿಸಿದ್ದ ಆಯೋಗ ಚಿತ್ರಕ್ಕೆ ತಾತ್ಕಾಲಿಕ ತಡೆ ವಿಧಿಸಿದೆ. ಚುನಾವಣೆ ಮುಗಿಯುವವರೆಗೂ ಚಿತ್ರ ಬಿಡುಗಡೆ ಮಾಡುವಂತಿಲ್ಲ ಎಂದಿದೆ.

 'ಪಿಎಂ ನರೇಂದ್ರ ಮೋದಿ' ಚಿತ್ರ ತಂಡಕ್ಕೆ ಆಯೋಗದಿಂದ ನೋಟಿಸ್ 'ಪಿಎಂ ನರೇಂದ್ರ ಮೋದಿ' ಚಿತ್ರ ತಂಡಕ್ಕೆ ಆಯೋಗದಿಂದ ನೋಟಿಸ್

ಚುನಾವಣಾ ಆಯೋಗದ ಈ ಆದೇಶವನ್ನು ವಿರೋಧಿಸಿ ನರೇಂದ್ರ ಮೋದಿ ಚಿತ್ರ ತಂಡ ಸುಪ್ರೀಂ ಕೋರ್ಟ್ ಮೆಟ್ಟಿಲನ್ನೇರಿದ್ದು, "ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ" ಎಂದು ದೂರಲಾಗಿದೆ.

Supreme court to hear plea challenging ban on releasing PM Modi biopic

ಈ ಚಚಿತ್ರವನ್ನು ಏಪ್ರಿಲ್ 05 ರಂದು ಬಿಡುಗಡೆ ಮಾಡಲು ಸಮಯ ನಿಗದಿ ಮಾಡಲಾಗಿತ್ತು. ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಏಪ್ರಿಲ್ 12 ಕ್ಕೆ ಮುಂದೂಡಲಾಗಿತ್ತು.

ಏ.5 ರಂದೇ ನರೇಂದ್ರ ಮೋದಿ ಚಿತ್ರ ತೆರೆಗೆ, ಟ್ರೈಲರ್ ಇಲ್ಲಿದೆ ನೋಡಿ!ಏ.5 ರಂದೇ ನರೇಂದ್ರ ಮೋದಿ ಚಿತ್ರ ತೆರೆಗೆ, ಟ್ರೈಲರ್ ಇಲ್ಲಿದೆ ನೋಡಿ!

ಈ ಚಿತ್ರದಲ್ಲಿ ನರೇಂದ್ರ ಮೋದಿ ಅವರ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ಅವರು ನಟಿಸಿದ್ದು, ಒಮಂಗ್ ಕುಮಾರ್ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ. ಒಮಂಗ್ ಅವರ ಮೇರಿಕೋಮ್ ಮತ್ತು ರಸಬ್ಜಿತ್ ಚಿತ್ರಗಳು ಸಾಕಷ್ಟು ಸುದ್ದಿ ಮಾಡಿದ್ದವು. ಕಳೆದ 2018 ರಲ್ಲೇ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು, ನರೇಂದ್ರ ಮೋದಿ ಆರೆಸ್ಸೆಸ್ ನ ಸಾಮಾನ್ಯ ಪ್ರಚಾರಕರಾಗಿ ನಂತರ ಪ್ರಧಾನಿ ಹುದ್ದೆಯವರೆಗೆ ಬೆಳೆದ ಹಾದಿಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

English summary
The Supreme Court of India is set to hear a plea challenging the Election Commission’s (EC) ban on the release of the film Narendra Modi biopic on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X