ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನರ್ಹ ಶಾಸಕರ ಅರ್ಜಿ ವಿಚಾರಣೆ ಕೆಲಕಾಲ ಮುಂದೂಡಿದ ಸುಪ್ರೀಂ

|
Google Oneindia Kannada News

Recommended Video

ಅನರ್ಹ ಶಾಸಕರ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ | Oneindia Kannada

ನವದೆಹಲಿ, ಸೆಪ್ಟೆಂಬರ್ 23: ಕಾಂಗ್ರೆಸ್ ಪರ ವಕೀಲರು ಆಗಮಿಸದ ಕಾರಣ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಕೆಲಕಾಲ ಮುಂದೂಡಿದೆ. ಕೆಲವು ಅರ್ಜಿ ವಿಚಾರಣೆ ಬಳಿಕ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸುಪ್ರೀಂಕೋರ್ಟ್‌ನಲ್ಲಿ 17 ಅನರ್ಹ ಶಾಸಕ ಅರ್ಜಿ ವಿಚಾರಣೆ ಆರಂಭವಾಗಿದೆ. 15 ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ನಿಗದಿ ಮಾಡಿರುವ ಚುನಾವಣಾ ಆಯೋಗದ ಕ್ರಮಕ್ಕೆ ತಡೆಯಾಜ್ಞೆ ನೀಡುವಂತೆ ಕೋರ್ಟ್‌ಗೆ ಮೊರೆಯಿಡಲು ಅನರ್ಹರು ತೀರ್ಮಾನಿಸಿದ್ದಾರೆ. ಹಾಗಾಗಿ ಅನರ್ಹರ ಪಾಲಿಗೆ ಇಂದು ನಿರ್ಣಾಯಕ ದಿನವಾಗಿದೆ.

ಈ ಮಧ್ಯೆ ಅನರ್ಹ ಶಾಸಕರೂ ವಕೀಲರೊಂದಿಗೆ ಚರ್ಚಿಸಿ ಚುನಾವಣಾ ಆಯೋಗದ ತೀರ್ಮಾನಕ್ಕೆ ತಡೆ ನೀಡುವಂತೆ ಮಧ್ಯಂತರ ಅರ್ಜಿ ಸಲ್ಲಿಸಲು ಕೋರಿದ್ದಾರೆ.

ಉಪ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದಿದ್ದರೆ ಸಂವಿಧಾನಬದ್ಧ ಹಕ್ಕು ಮೊಟಕುಗೊಳ್ಳಲಿದೆ. ಹೀಗಾಗಿ ಪ್ರಕರಣವನ್ನು ಆದ್ಯತೆಯ ಮೇಲೆ ವಿಚಾರಣೆಗೆ ಕೈಗೆತ್ತಿಕೊಂಡು ಇತ್ಯರ್ಥಗೊಳಿಸುವಂತೆ ಮನವಿ ಮಾಡಿಕೊಳ್ಳಲು ಬಯಸಿದ್ದಾರೆ.

ಅನರ್ಹ ಶಾಸಕರ ಚುನಾವಣೆ ಭವಿಷ್ಯ ಸುಪ್ರೀಂನಲ್ಲಿ ಇಂದು ನಿರ್ಧಾರಅನರ್ಹ ಶಾಸಕರ ಚುನಾವಣೆ ಭವಿಷ್ಯ ಸುಪ್ರೀಂನಲ್ಲಿ ಇಂದು ನಿರ್ಧಾರ

ಉಪಚುನಾವಣೆ ಈಗಾಗಲೇ ಘೋಷಣೆಯಾಗಿದ್ದು ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಹಾಗಾಗಿ ಇಂದಿನ ಸುಪ್ರೀಂ ವಿಚಾರಣೆ ಅತ್ಯಂತ ಮಹತ್ವದ್ದಾಗಿದ್ದು, ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧಿಸಬಹುದೇ ಇಲ್ಲವೆ ಎಂಬುದು ಇಂದು ನಿರ್ಣಯವಾಗಲಿದೆ.

Supreme Court To Hear Disqualified MLAs Petitions Today

ಉಪಚುನಾವಣೆಗೆ ಅನರ್ಹ ಶಾಸಕರು ಸ್ಪರ್ಧಿಸುವಂತಿಲ್ಲ ಎಂದು ಚುನಾವಣೆ ಆಯೋಗವು ಈಗಾಗಲೇ ಹೇಳಿದೆ. ಹಾಗಾಗಿ ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ಬಿಟ್ಟು ಬೇರೆ ಗತಿ ಇಲ್ಲದಾಗಿದೆ.

ಅಮಿತ್‌ ಶಾ ಭೇಟಿ ಮಾಡಿಸುವಂತೆ ಅನರ್ಹರು ಪಟ್ಟು ಹಾಕಿದರೂ ಇದು ಸಾಧ್ಯವಾಗಲಿಲ್ಲ. ಖಡಾಖಂಡಿತವಾಗಿ ಶಾ ಈ ಬೇಡಿಕೆಯನ್ನು ನಿರಾಕರಿಸಿದ್ದಾರೆ.

ಬಿಎಸ್‌ವೈರೊಂದಿಗೆ ಸಮಾಲೋಚಿಸಿದ ಶಾ ''ಎಲ್ಲಬೆಳವಣಿಗೆಗಳು ಗಮನದಲ್ಲಿದೆ. ಸೂಕ್ತ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಸಲಿಗೆ ಅವರೆಲ್ಲಾ 'ಅತೃಪ್ತ'ರಾಗಿದ್ದು ಉಪಚುನಾವಣೆ ದಿನಾಂಕ ಅನೌನ್ಸ್ ಆದಮೇಲೆಅಸಲಿಗೆ ಅವರೆಲ್ಲಾ 'ಅತೃಪ್ತ'ರಾಗಿದ್ದು ಉಪಚುನಾವಣೆ ದಿನಾಂಕ ಅನೌನ್ಸ್ ಆದಮೇಲೆ

ಹಿರಿಯ ವಕೀಲ ಮುಕುಲ್‌ ರೋಹ್ಟಗಿ ಅವರೊಂದಿಗೂ ಬಿಎಸ್‌ವೈ ಚರ್ಚಿಸಿದ್ದಾರೆ. ಅಂದಿನ ಸ್ಪೀಕರ್‌ ಸಹಜ ನ್ಯಾಯ ಪಾಲಿಸದೇ ಇರುವುದರಿಂದ ಕೋರ್ಟ್‌ನಿಂದ ತಡೆ ಸಿಗುವ ವಿಶ್ವಾಸವಿದೆ. ಚುನಾವಣೆ ಘೋಷಣೆ ಆಗಿರುವುದರಿಂದ ಸುಪ್ರೀಂಕೋರ್ಟ್‌ ಈ ಬಗ್ಗೆ ಸ್ಪಷ್ಟ ನಿಲುವು ತಳೆಯಲಿದೆ. ಗಾಳಿ ಸುದ್ದಿಗಳಿಗೆ ಕಿವಿಕೊಡಬೇಡಿ ಎಂದು ಬಿಜೆಪಿ ನಾಯಕರು ಅನರ್ಹರಿಗೆ ಧೈರ್ಯ ತುಂಬಿದ್ದಾರೆ.

English summary
Petitions of the 17 disqualified MLAs of the Congress and Janata Dal (Secular) Hearing Started.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X