ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ಬಾಂಬೆ ಹೈಕೋರ್ಟ್ ವಿವಾದಾತ್ಮಕ ತೀರ್ಪಿಗೆ ಸುಪ್ರೀಂ ತಡೆ

|
Google Oneindia Kannada News

ನವದೆಹಲಿ, ಜನವರಿ 27: ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ನೀಡಿದ್ದ ವಿವಾದಾತ್ಮಕ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿಯ ಸ್ತನಗಳನ್ನು ಆಕೆಯ ಉಡುಪಿನ ಮೇಲಿಂದ ಸ್ಪರ್ಶಿಸಿದರೆ ಅದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಚರ್ಮದಿಂದ ಚರ್ಮದ ಸ್ಪರ್ಶ ಮಾತ್ರ ಪೋಕ್ಸೋ ಕಾಯ್ದೆಯಡಿ ಅಪರಾಧವಾಗಿ ಪರಿಗಣಿಸಲಾಗುತ್ತದೆ ಎಂದು ನಾಗಪುರ ಪೀಠ ನೀಡಿದ್ದ ತೀರ್ಪು ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ವಿವಾದ ಸೃಷ್ಟಿಸಿದ ಬಾಂಬೆ ಹೈಕೋರ್ಟ್ ತೀರ್ಪುಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ವಿವಾದ ಸೃಷ್ಟಿಸಿದ ಬಾಂಬೆ ಹೈಕೋರ್ಟ್ ತೀರ್ಪು

ಬಾಲಕಿಯ ಎದೆಗಳನ್ನು ಆರೋಪಿಯು ಆಕೆಯ ಉಡುಪಿನ ಮೇಲಿನಿಂದ ಸವರಿದ್ದ. ಹೀಗಾಗಿ ಇದನ್ನು ಪೋಕ್ಸೋದ ಕಠಿಣ ಕಾಯ್ದೆಗಳಡಿ ಅಪರಾಧ ಎಂದು ಪರಿಗಣಿಸಲು ಆಗುವುದಿಲ್ಲ ಎಂದಿದ್ದ ಬಾಂಬೆ ಹೈಕೋರ್ಟ್, ಆತನಿಗೆ ಕೆಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ರದ್ದಗೊಳಿಸಿ ಆತನನ್ನು ಖುಲಾಸೆಗೊಳಿಸಿತ್ತು. ಇದನ್ನು ಬಾಲಕಿಯ ತಾಯಿ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.

 Supreme Court Stays Nagpur Bench Of Bombay High Courts Skin To Skin Order Under Pocso Act

ಮುಂಬೈ ಮೂಲದ ಆರೋಪಿ ಸತೀಶ್ ಬಂಡು ರಗ್ಡೆ 2016ರಲ್ಲಿ 12 ವರ್ಷದ ಬಾಲಕಿಗೆ ಸೀಬೆ ಹಣ್ಣು ನೀಡುವ ನೆಪದಲ್ಲಿ ಮನೆಗೆ ಕರೆದೊಯ್ದು ಆಕೆಯ ಎದೆಯನ್ನು ಒತ್ತುವುದು ಮತ್ತು ಸಲ್ವಾರ್ ಕಳಚುವ ಪ್ರಯತ್ನ ಮಾಡುತ್ತಿದ್ದ. ಇದೇ ಸಮಯಕ್ಕೆ ಅಲ್ಲಿಗೆ ಧಾವಿಸಿದ್ದ ಬಾಲಕಿಯ ತಾಯಿ ಈ ಘಟನೆಯನ್ನು ಗಮನಿಸಿ, ದೂರು ಸಲ್ಲಿಸಿದ್ದರು. ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಐವರು ಸಾಕ್ಷಿಗಳು ಮತ್ತು ಪೊಲೀಸರ ಹೇಳಿಕೆ ಪರಿಗಣಿಸಿ ಕೆಳ ನ್ಯಾಯಾಲಯವು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿತ್ತು.

ಆದರೆ, ಇದನ್ನು ಆತ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ. ಪೋಕ್ಸೋ ಕಾಯ್ದೆಯ ಸೆಕ್ಷನ್ 8 ಮತ್ತು ಐಪಿಸಿ ಸೆಕ್ಷನ್ 354ರ ಅಡಿ ಲೈಂಗಿಕ ದೌರ್ಜನ್ಯದ ಶಿಕ್ಷೆ ಎಂದು ಪರಿಗಣಿಸಲು, ಲೈಂಗಿಕ ಉದ್ದೇಶದೊಂದಿಗೆ ಕೃತ್ಯ ಎಸಗಿರಬೇಕು. ಇದರಲ್ಲಿ ಪರಸ್ಪರ ಗುಪ್ತಾಂಗಗಳ ಸ್ಪರ್ಶ, ಮಗುವಿನ ಎದೆ ಸ್ಪರ್ಶದಂತಹ ಬಲತ್ಕಾರದ ಚಟುವಟಿಕೆಗಳು ನಡೆದಿರಬೇಕು. ಲೈಂಗಿಕ ದೌರ್ಜನ್ಯದ ವ್ಯಾಖ್ಯಾನದ ಪ್ರಕಾರ ಲೈಂಗಿಕ ಬಯಕೆ ಉದ್ದೇಶದೊಂದಿಗೆ ನಡೆಸುವ ದೈಹಿಕ ಸಂಪರ್ಕ ಇರಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ಲೈಂಗಿಕ ಉದ್ದೇಶವಿಲ್ಲದ ಪ್ರೇಮ ನಿವೇದನೆಯ ಸ್ಪರ್ಶ ದೌರ್ಜನ್ಯವಲ್ಲ: ಹೈಕೋರ್ಟ್ಲೈಂಗಿಕ ಉದ್ದೇಶವಿಲ್ಲದ ಪ್ರೇಮ ನಿವೇದನೆಯ ಸ್ಪರ್ಶ ದೌರ್ಜನ್ಯವಲ್ಲ: ಹೈಕೋರ್ಟ್

ಹೀಗಾಗಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) ಸೆಕ್ಷನ್ 8ರ ಅಡಿ ಕೆಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಪುಷ್ಪಾ ವಿ. ಗಣೇಡಿವಾಲಾ ಜ. 19ರಂದು ವಜಾಗೊಳಿಸಿದ್ದರು. ಆತನಿಗೆ ಸಾದಾ ಶಿಕ್ಷೆ ವಿಧಿಸಿದ್ದರು.

English summary
The Supreme Court on Wednesday has stayed a order by Nagpur bench of Bombay High Court which acquits accused under POCSO Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X