ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಮ್ಲಜನಕ ಹಾಗೂ ಅಗತ್ಯ ಔಷಧಗಳ ಪೂರೈಕೆಗೆ ಕಾರ್ಯಪಡೆ ರಚಿಸಿದ ಸುಪ್ರೀಂ

|
Google Oneindia Kannada News

ನವದೆಹಲಿ, ಮೇ 08: ದೇಶಾದ್ಯಂತ ಆಮ್ಲಜನಕ ಪೂರೈಕೆ ಹಾಗೂ ಅಗತ್ಯ ಔಷಧಗಳ ಲಭ್ಯತೆ ಕುರಿತಂತೆ 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯನ್ನು ಸುಪ್ರೀಂಕೋರ್ಟ್ ರಚಿಸಿದೆ.

ದೇಶದ ಪ್ರಖ್ಯಾತ ವೈದ್ಯರು, ಕೇಂದ್ರ ಸಂಪುಟ ಕಾರ್ಯದರ್ಶಿ ಸೇರಿ ಇತರೆ ಸದಸ್ಯರ ಕಾರ್ಯಪಡೆಯನ್ನು ಸುಪ್ರೀಂಕೋರ್ಟ್ ಇಂದು ರಚಿಸಿದೆ.

ಈ ರಾಷ್ಟ್ರೀಯ ಕಾರ್ಯಪಡೆಯು ದೇಶದ ವಿಭಿನ್ನ ರಾಜ್ಯಗಳಿಗೆ ಆಮ್ಲಜನಕ ಪೂರೈಸುವುದು, ಹಾಗೂ ಅಗತ್ಯ ಔಷಧಿಗಳ ಲಭ್ಯತೆಯನ್ನು ಪರಾಮರ್ಶಿಸುವ ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ.

Supreme court

ಹಾಗೆಯೇ ಭವಿಷ್ಯದ ಸವಾಲುಗಳನ್ನು ಎದುರಿಸಬೇಕಾದ ತುರ್ತು ಯೋಜನೆಗಳನ್ನು ಈ ಕಾರ್ಯಪಡೆ ರೂಪಿಸಲಿದೆ.ನ್ಯಾಯಮೂರ್ತಿ ಡಿವೈ ಚಂದ್ರಚೂಡ ಹಾಗೂ ನ್ಯಾಯಮೂರ್ತಿ ಎಂಆರ್ ಷಾ ನೇತೃತ್ವದ ತ್ರಿಸದಸ್ಯ ಪೀಠವು ಈ ಆದೇಶ ನೀಡಿದೆ.

Recommended Video

Covid 19 ಪರಿಸ್ಥಿತಿಯಲ್ಲು Tax ಬರೇ ಎಳಿತಿರೋ Nirmala Sitharaman | Oneindia Kannada

ಈ ರಾಷ್ಟ್ರೀಯ ಕಾರ್ಯಪಡೆಯಲ್ಲಿ ಕರ್ನಾಟಕದ ಖ್ಯಾತ ವೈದ್ಯ ಡಾ. ದೇವಿಪ್ರಸಾದ್ ಶೆಟ್ಟಿ ಕೂಡ ಇದ್ದಾರೆ. ಕೊರೊನಾ ನಿರ್ವಹಣೆಗೆ ಸಂಬಂಧಿಸಿದಂತೆ ಆಡಳಿತಾರೂಢ ಸರ್ಕಾರಕ್ಕೆ ಈ ಕಾರ್ಯಪಡೆಯಿಂದ ನೆರವಾಗಲಿದೆ ಎನ್ನುವುದು ನ್ಯಾಯಾಲಯದ ಅಭಿಪ್ರಾಯವಾಗಿದೆ. ಹಾಗೆಯೇ ಈ ಕಾರ್ಯಪಡೆಯವ ವೈಜ್ಞಾನಿಕ ಸಲಹೆಗಳು ಸರ್ಕಾರಕ್ಕೆ ನೆರವಾಗಲಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
-ಡಾ. ಭಾಬತೋಶ್ ಬಿಸ್ವಾಸ್
-ಡಾ. ದೇವೇಂದ್ರ ಸಿಂಗ್ ರಾಣಾ
-ಡಾ. ದೇವಿ ಪ್ರಸಾದ್ ಶೆಟ್ಟಿ
-ಡಾ.ಗಗನ್ ದೀಪ್ ಕಾಂಗ್
-ಡಾ. ಜೆವಿ ಪೀಟರ್
-ಡಾ. ನರೇಶ್ ತ್ರೆಹನ್
-ಡಾ.ರಾಹುಲ್ ಪಂಡಿತ್
-ಡಾ. ಸೌಮಿತ್ರ ರಾವತ್
-ಡಾ.ಶಿವ್ ಕುಮಾರ್ ಸರಿನ್
-ಡಾ. ಜರೀರ್

English summary
The Supreme Court has set up a National Task Force (NTF) to streamline oxygen allocation to states across the country, a move that comes in the midst of the second wave of the coronavirus disease that has stressed the health care sector and sent the demand for medical oxygen among Covid-19 patients soaring.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X