• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇವಾಲಯದ ನಿರ್ವಹಣೆ ಭಕ್ತರಿಗೆ ಸೇರಿದ್ದು, ಸರ್ಕಾರಕ್ಕಲ್ಲ: ಸುಪ್ರೀಂ ಮಹತ್ವದ ಆದೇಶ

|

ನವದೆಹಲಿ, ಏಪ್ರಿಲ್ 09: ದೇವಾಲಯಗಳ ನಿರ್ವಹಣೆಯ ಹೊಣೆ ಭಕ್ತರಿಗೆ ಸೇರಿದ್ದು, ಸರ್ಕಾರಕ್ಕಲ್ಲ ಎಂಬ ಮಹತ್ವದ ಆದೇಶವನ್ನು ಸೋಮವಾರ ಸುಪ್ರೀಂ ಕೋರ್ಟ್ ನೀಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಒಡಿಶಾದ ಪುರಿಯ ಜಗನ್ನಾಥ ಮಂದಿರದ ಆಡಳಿತ ಮಂಡಳಿಯ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಈ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್ ನೀಡಿದ್ದು, ಕೋಟ್ಯಂತರ ಭಕ್ತರಿಗೆ ಇದು ಸಿಹಿಸುದ್ದಿ ಎನ್ನಿಸಿದೆ.

ಶಿರಸಿಯಲ್ಲಿ ದೇವಾಲಯದ ಗೋಡೆ ಧ್ವಂಸಗೊಳಿಸಿ ಕಳಶ ಕದ್ದೊಯ್ದ ಕಿಡಿಗೇಡಿಗಳು

ಪುರಿಯ ಜಗನ್ನಾಥ ಮಂದಿರದಲ್ಲಿ ಇಲ್ಲಿನ ಆಡಳಿತ ಮಂಡಳಿ ಸ್ವಚ್ಛತೆಯನ್ನು ಕಾಪಾಡುತ್ತಿಲ್ಲ ಜೊತೆಗೆ ಭಕ್ತರನ್ನು ಸರಿಯಾಗಿ ನಡೆಸಿಕೊಳ್ಳಲಾಗುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ದೂರಿದ್ದ ಪ್ರಕರಣದ ವಿಚಾರಣೆಯನ್ನು ಸೋಮವಾರ ಸುಪ್ರೀಂ ಕೋರ್ಟ್ ನಡೆಸಿತ್ತು.

ಈ ಸಂದರ್ಭದಲ್ಲಿ 2014 ರ ತಮಿಳುನಾಡಿನ ಚಿದಂಬರಂನ ನಟರಾಜ ದೇವಾಲಯದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿತು.

ಜನಗನ್ನಾಥ ಮಂದಿರದ ಭಕ್ತರಿಂದ ದೂರು

ಜನಗನ್ನಾಥ ಮಂದಿರದ ಭಕ್ತರಿಂದ ದೂರು

ಪುರಿಯ ಜಗನ್ನಾಥ ಮಂದಿರದಲ್ಲಿ ಸರ್ಕಾರದ ಅಡಿಯಲ್ಲಿರುವ ಆಡಳಿತ ಮಂಡಳಿಯು ದೇವಾಲಯದ ಸ್ವಚ್ಛತೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ. ಮತ್ತು ಭಕ್ತರ ಮೇಲೆ ಆಡಳಿತ ಮಂಡಳಿಯ ಸದಸ್ಯರು ಸದಾ ಕಿರುಕುಳ ನೀಡಿ, ಅಗೌರವ ತೋರುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು.

ನ್ಯಾಯಮೂರ್ತಿಗಳು ಹೇಳಿದ್ದೇನು?

ನ್ಯಾಯಮೂರ್ತಿಗಳು ಹೇಳಿದ್ದೇನು?

"ಚಿದಂಬರಂನ ನಟರಾಜ ದೇವಾಲಯದ ಪ್ರಕರಣವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಸರ್ಕಾರದ ಅಧಿಕಾರಿಗಳೇ ಏಕೆ ದೇವಾಲಯವನ್ನು ನಡೆಸಬೇಕು ಎಂಬುದು ನನಗೆ ಅರ್ಥವಾಗುತ್ತಿಲ್ಲ. ತಮಿಳುನಾಡಿನಲ್ಲಿ ಎಷ್ಟೋ ದೇವಾಲಯಗಳಲ್ಲಿ ವಿಗ್ರಹ ಕಳ್ಳತನದಂಥ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಹಾಗಾದರೆ ದೇವಾಲಯ ವನಿರ್ವಹಿಸುವ ಸರ್ಕಾರಿ ಅಧಿಕಾರಿಗಳು ಆಗ ಏನು ಮಾಡುತ್ತಿರುತ್ತಾರೆ? ಧಾರ್ಮಿಕ ಭಾವನೆಗಳು ಒತ್ತಟ್ಟಿಗಿರಲಿ, ಅದನ್ನು ಹೊರತುಪಡಿಸಿಯೂ ಈ ವಿಗ್ರಹಗಳು ಎಷ್ಟು ಬೆಲೆ ಬಾಳುತ್ತವೆ ಎಂಬುದು ಅವರಿಗೆ ತಿಳಿದಿಲ್ಲವೇ? ಎಂದು ನ್ಯಾ.ಎಸ್ ಎ ಬೊಬ್ದೆ ಪ್ರಶ್ನಿಸಿದರು.

ಕರಾವಳಿಯ ಶಿವಾಲಯಗಳಲ್ಲಿ ಕಳೆಕಟ್ಟಿದ ಮಹಾಶಿವರಾತ್ರಿಯ ಸಂಭ್ರಮ

ದೇವಾಲಯಕ್ಕೆ ಸ್ವಾತಂತ್ರ್ಯವಿರೋಲ್ಲ!

ದೇವಾಲಯಕ್ಕೆ ಸ್ವಾತಂತ್ರ್ಯವಿರೋಲ್ಲ!

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಗೋವರ್ಧನ ಮಠದ ಜಗದ್ಗುರು ಶ್ರೀ ನಿಶ್ಚಲಾನಂದ ಸರಸ್ವತಿ ಅವರ ಪರವಾಗಿ ಸುಚಿತ್ ಮೊಹಂತಿ ಎಂಬ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಿದರು.ದೇವಾಲಯದ ಆಡಳಿತದ ಹೊಣೆಯನ್ನು ಸರ್ಕಾರಕ್ಕೆ ನೀಡುವುದರಿಂದ ದೊಡ್ಡ ಕಾರ್ಯಕ್ರಮಗಳಲ್ಲಿ ಕಾಲ್ತುಳಿತದಂಥ ಸಮಸ್ಯೆಯನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಮಠದ ಇತರ ಭಕ್ತಾದಿಗಳೂ ಆಡಳಿತ ಮಂಡಳಿಯಲ್ಲಿರುವ ಸರ್ಕಾರಿ ಆಧಿಕಾರಿಗಳ ಮಾತನ್ನು ಕೇಳಬೇಕು. ಆದರೆ ದೇವಾಲಯದ ಬಗ್ಗೆ ಮಾಹಿತಿ ಬಲ್ಲ, ಮತ್ತು ಜವಾಬ್ದಾರಿಯುತವಾಗಿ ಸನ್ನಿವೇಶವನ್ನು ನಿಯಂತ್ರಿಸಬಲ್ಲ, ಆಡಳಿತ ನಿರ್ವಹಿಸಬಲ್ಲ ಭಕ್ತರು ಆಡಳಿತ ಮಂಡಳಿಯಲ್ಲಿದ್ದರೆ ಇಂಥ ಸಮಸ್ಯೆಯಾಗುವುದಿಲ್ಲ ಎಂದು ಮೊಹಂತಿ ಹೇಳಿದದರು.

ಭಕ್ತರಿಗೇ ಜವಾಬ್ದಾರಿ

ಭಕ್ತರಿಗೇ ಜವಾಬ್ದಾರಿ

ಜಗದ್ಗುರು ಶ್ರೀ ನಿಶ್ಚಲಾನಂದ ಸರಸ್ವತಿ ಅವರಿಗೆ ಇಂಥ ಸನ್ನಿವೇಶವನ್ನು ನಿಭಾಯಿಸುತ್ತೇನೆ ಎಂಬ ಧೈರ್ಯವಿದ್ದರೆ, ಅಷ್ಟು ಪ್ರಭಾವಶಾಲಿಯೂ ಅವರಾಗಿದ್ದರೆ, ಅವರೇ ದೇವಾಲಯದ ಆಡಳಿತದ ಹೊಣೆ ಹೊತ್ತುಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿತು. ಸುಪ್ರೀಂ ಕೋರ್ಟ್ ನ ಈ ಆದೇಶವನ್ನು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರೂ ಒಪ್ಪಿಕೊಂಡರು. ಈ ಜಾತ್ಯತೀತ ದೇಶದಲ್ಲಿ ಒಂದು ಸರ್ಕಾರ ದೇವಾಲಯದ ಆಡಳಿತವನ್ನು ನೋಡಿಕೊಳ್ಳುವುದು ಎಂದರೆ ಸರಿಯೇ ಎಂದು ಅವರು ಪ್ರಶ್ನಸಿದರು.

ಮೈಸೂರಿನಲ್ಲಿ ಶಿವನಾಮ ಸ್ಮರಣೆ :ತ್ರಿನೇಶ್ವರ ಸ್ವಾಮಿಗೆ ಚಿನ್ನದ ಕೊಳಗ ಧಾರಣೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a historical move, Supreme court of India on Monday said, temples should be managed by devotees, not government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more