ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿ.ಚಿದಂಬರಂ ಜಾಮೀನು ಅರ್ಜಿ: ಸೆಪ್ಟೆಂಬರ್ 5 ಕ್ಕೆ ಸುಪ್ರೀಂ ಆದೇಶ

|
Google Oneindia Kannada News

ನವದೆಹಲಿ, ಆಗಸ್ಟ್ 29: ಸಿಬಿಐ ವಶದಲ್ಲಿರುವ ಪಿ.ಚಿದಂಬರಂ ಅವರು ಸುಪ್ರೀಂಕೋರ್ಟ್‌ನಲ್ಲಿ ಹೂಡಿದ್ದ ಅರ್ಜಿಯ ಆದೇಶವನ್ನು ಸೆಪ್ಟೆಂಬರ್ 5 ರಂದು ನೀಡುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.

ನಿರೀಕ್ಷಣಾ ಜಾಮೀನನ್ನು ರದ್ದು ಮಾಡಿದ ದೆಹಲಿ ಹೈಕೋರ್ಟ್‌ ನ ಕ್ರಮವನ್ನು ಪ್ರಶ್ನಿಸಿ ಚಿದಂಬರಂ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಹೂಡಿದ್ದರು. ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಆದೇಶವನ್ನು ಸೆಪ್ಟೆಂಬರ್ ಐದರಂದು ನೀಡುವುದಾಗಿ ಹೇಳಿದೆ.

ಪಿ. ಚಿದಂಬರಂಗೆ ಗಾಯದ ಮೇಲೆ ಬರೆ: ಮತ್ತೆ ಸಿಬಿಐ ವಶಕ್ಕೆಪಿ. ಚಿದಂಬರಂಗೆ ಗಾಯದ ಮೇಲೆ ಬರೆ: ಮತ್ತೆ ಸಿಬಿಐ ವಶಕ್ಕೆ

ಚಿದಂಬರಂ ಅವರು ಐಎನ್‌ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಶದಲ್ಲಿದ್ದಾರೆ. ಆದರೆ ಇಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ನಿರೀಕ್ಷಣಾ ಜಾಮೀನನ್ನು ರದ್ದು ಮಾಡಲಾಗಿತ್ತು. ಅದನ್ನು ಪ್ರಶ್ನಿಸಿ ಚಿದಂಬರಂ ಅವರು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದರು.

Supreme Court Reserves Judgement For September 05 In P Chidambaram Case

ಆಗಸ್ಟ್‌ 30 ರ ವರೆಗೂ ಪಿ.ಚಿದಂಬರಂ ಅವರನ್ನು ಸಿಬಿಐಗೆ ವಶಕ್ಕೆ ನೀಡಿ ಸುಪ್ರೀಕೋರ್ಟ್ ಆಗಸ್ಟ್ 26 ರಂದು ಆದೇಶ ನೀಡಿತ್ತು. ನಾಳೆಗೆ ಅವಧಿಗೆ ಮುಕ್ತಾಯವಾಗಲಿದ್ದು, ಅವಧಿ ಮುಂದುವರೆಸಲು ಸಿಬಿಐ ಮನವಿ ಸಲ್ಲಿಸುವ ಸಾಧ್ಯತೆ ಇದೆ.

ಚಿದಂಬರಂಗೆ ಮತ್ತೆ ಸಂಕಷ್ಟ: ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಜಾಚಿದಂಬರಂಗೆ ಮತ್ತೆ ಸಂಕಷ್ಟ: ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಜಾ

ಐಎನ್‌ಎಕ್ಸ್ ಮೀಡಿಯಾ ಪ್ರಕರಣದ ವಿಚಾರಣೆಗೆಂದು ಪಿ.ಚಿದಂಬರಂ ಅವರನ್ನು ಆಗಸ್ಟ್‌ 21ರಂದು ಸಿಬಿಐ ತನ್ನ ವಶಕ್ಕೆ ತೆಗೆದುಕೊಂಡಿದೆ. ಪ್ರಸ್ತುತ ಅವರು ಸಿಬಿಐ ವಶದಲ್ಲಿಯೇ ಇದ್ದಾರೆ.

English summary
Supreme Court has changed the date from September 4 to 5. Interim protection granted by the Court to P Chidambaram in ED case also extended till September 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X