ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣ್ಮಿಟುಕಿಸಿದರೂ ಕೇಸು ಹಾಕ್ತೀರಾ, ಬೇರೆ ಕೆಲ್ಸ ಇಲ್ವಾ? ಸುಪ್ರೀಂ ಪ್ರಶ್ನೆ

|
Google Oneindia Kannada News

Recommended Video

ಪ್ರಿಯಾ ವಾರಿಯರ್, ಕಣ್ಮಿಟಿಕಿಸಿದ ಹುಡುಗಿಗೆ ಕೋಟ್‌ ನಿಂದ ಸಿಕ್ತು ಮುಕ್ತಿ | Oneindia kannada

ನವದೆಹಲಿ, ಆಗಸ್ಟ್ 31: 'ನಿಮಗೆ ಬೇರೆ ಕೆಲಸ ಇಲ್ವಾ?' ಪ್ರಿಯಾ ವಾರಿಯರ್ ವಿರುದ್ಧ ಕೇಸು ದಾಖಲಿಸಿದ ತೆಲಂಗಾಣ ಸರ್ಕಾರವನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ತರಾಟೆಗೆ ತೆಗೆದುಕೊಂಡ ರೀತಿ ಇದು!

ಪ್ರಿಯಾ ವಾರಿಯರ್ ವಿರುದ್ಧದ ತನಿಖೆಗೆ ತಡೆ ನೀಡಿದ ಸುಪ್ರೀಂಕೋರ್ಟ್ಪ್ರಿಯಾ ವಾರಿಯರ್ ವಿರುದ್ಧದ ತನಿಖೆಗೆ ತಡೆ ನೀಡಿದ ಸುಪ್ರೀಂಕೋರ್ಟ್

ಸಿನಿಮಾವೊಂದರಲ್ಲಿ ಕಣ್ಮಿಟುಕಿಸಿದ್ದ ಪ್ರಿಯಾ ವಾರಿಯರ್ ವಿರುದ್ಧ ಕೆಲವರು ನೀಡಿದ್ದ ದೂರನ್ನು ತೆಲಂಗಾಣ ಪೊಲೀಸರು ಸ್ವೀಕರಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪ್ರಿಯಾ ವಾರಿಯರ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ವಜಾಗೊಳಿಸಿದೆ. ಈ ಮೂಲಕ ಕಣ್ಮಿಟುಕು ಸುಂದರಿ ನಿರಾಳವಾಗಿದ್ದಾರೆ.

ಕಣ್ ಮಿಟುಕು ಸುಂದರಿ ಪ್ರಿಯಾ ಬರೆದಳು ಹೊಸ ದಾಖಲೆಕಣ್ ಮಿಟುಕು ಸುಂದರಿ ಪ್ರಿಯಾ ಬರೆದಳು ಹೊಸ ದಾಖಲೆ

ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಚಿತ್ರವೊಂದರ ಹಾಡಿನಲ್ಲಿ ಕಣ್ಮಿಟುಕಿಸಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ಆಕೆ ಒಂದೇ ದಿನದಲ್ಲಿ ಸೆಲೆಬ್ರಿಟಿ ಆಗಿದ್ದರು. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. 18 ವರ್ಷದ ಪ್ರಿಯಾ ವಾರಿಯರ್ ಅವರ 'ಓರು ಅದರ್ ಲವ್' ಎಂಬ ಮಲಯಾಳಿ ಚಿತ್ರದ ಈ ಹಾಡು ಕೆಲವು ನಿರ್ದಿಷ್ಟ ಸಮುದಾಯದ ಮತೀಯರಿಗೆ ನೋವುಂಟು ಮಾಡುವಂತಿದೆ ಎಂದು ದೂರಲಾಗಿತ್ತು.

ಸನ್ನಿಲಿಯೋನ್ ಪದಚ್ಯುತಿ, ಪ್ರಿಯಾ ಪ್ರಕಾಶ್ ಗೆ ಪಟ್ಟಾಭಿಷೇಕ!ಸನ್ನಿಲಿಯೋನ್ ಪದಚ್ಯುತಿ, ಪ್ರಿಯಾ ಪ್ರಕಾಶ್ ಗೆ ಪಟ್ಟಾಭಿಷೇಕ!

Supreme Court rejects case against actor Priya Varrier

"ಒಂದು ಚಿತ್ರದಲ್ಲಿ ಯಾರೋ ಒಬ್ಬರು ಹಾಡುತ್ತಾರೆ. ಅವರ ವಿರುದ್ಧ ಕೇಸು ದಾಖಲಿಸೋಕೆ ನಿಮಗೇನು ಬೇರೆ ಕೆಲಸವಿಲ್ಲವೇ" ಎಂದು ಮುಖಕ್ಕೆ ಹೊಡೆದಂತೆ ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, ಇಂಥ ಪ್ರಕರಣಗಳನ್ನು ದಾಖಲಿಸಿಕೊಳ್ಳುವ ಮುನ್ನ ಯೋಚಿಸಿ ಎಂಬ ಸೂಚನೆಯನ್ನೂ ನೀಡಿದೆ.

English summary
Supreme Court rejects casa against Wink girl Priya Varrier, who is a Malayali actor. 'you have no other job?' chief justice questions Telangana government about this case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X