ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ವಿವಾದ: ಅರ್ಜಿ ವಿಚಾರಣೆಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್

|
Google Oneindia Kannada News

ನವದೆಹಲಿ, ಅಕ್ಟೋಬರ್ 29: ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಮತ್ತೊಂದು ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ.

ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಹೊಸ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿತು.

ರಫೇಲ್ ಒಪ್ಪಂದ ಪ್ರಕ್ರಿಯೆಯ ವಿವರ ಕೊಡಿ: ಕೇಂದ್ರವನ್ನು ಕೇಳಿದ ಸುಪ್ರೀಂಕೋರ್ಟ್ರಫೇಲ್ ಒಪ್ಪಂದ ಪ್ರಕ್ರಿಯೆಯ ವಿವರ ಕೊಡಿ: ಕೇಂದ್ರವನ್ನು ಕೇಳಿದ ಸುಪ್ರೀಂಕೋರ್ಟ್

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಅರ್ಜಿಗಳು ಬಂದಿದ್ದು, ಅವುಗಳ ವಿಚಾರಣೆ ನಡೆಸುತ್ತಿರುವಾಗ ಹೊಸ ಅರ್ಜಿಯನ್ನು ವಿಚಾರಣೆ ನಡೆಸುವ ಅಗತ್ಯವೇನಿದೆ ಎಂದು ರಂಜನ್ ಗೊಗೊಯ್ ಪ್ರಶ್ನಿಸಿದರು.

Supreme court rejected to hear new plea on Rafale deal

2019 ರಲ್ಲಿ ರಫೇಲ್ ಜೆಟ್ ಭಾರತಕ್ಕೆ: ಖಚಿತಪಡಿಸಿದ ಡಸಾಲ್ಟ್2019 ರಲ್ಲಿ ರಫೇಲ್ ಜೆಟ್ ಭಾರತಕ್ಕೆ: ಖಚಿತಪಡಿಸಿದ ಡಸಾಲ್ಟ್

ರಫೇಲ್ ಒಪ್ಪಂದದ ಕುರಿತಾಗಿ ವಿವಿಧ ಸಂಘಟನೆಗಳು, ವ್ಯಕ್ತಿಗಳು ಸುಪ್ರೀಂಕೋರ್ಟ್‌ನಲ್ಲಿ ಕೇಂದ್ರಸರ್ಕಾರದ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಈ ಮೊದಲು ವಿಚಾರಣೆ ಆರಂಭಿಸಿದ್ದ ನ್ಯಾಯಪೀಠ, ಪ್ರಕರಣದ ನಿರ್ಧಾರ ಕೈಗೊಳ್ಳುವಿಕೆಯ ಪ್ರಕ್ರಿಯೆಯ ವಿವರವನ್ನು ಅ. 29ರ ಒಳಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

 ಅಲೋಕ್ ಬಳಿ ರಫೇಲ್ ಡೀಲ್ ದಾಖಲೆ: ರಾಹುಲ್ ಸ್ಫೋಟಕ ಮಾಹಿತಿ ಅಲೋಕ್ ಬಳಿ ರಫೇಲ್ ಡೀಲ್ ದಾಖಲೆ: ರಾಹುಲ್ ಸ್ಫೋಟಕ ಮಾಹಿತಿ

ಅದರಂತೆ ಕೇಂದ್ರ ಸರ್ಕಾರ ಶನಿವಾರ (ಅ.27) ಸುಪ್ರೀಂಕೋರ್ಟ್‌ಗೆ ರಫೇಲ್ ಒಪ್ಪಂದದ ಪ್ರಕ್ರಿಯೆಯ ವಿವರಗಳನ್ನು ನೀಡಿತ್ತು.

English summary
The Supreme Court on Monday rejected to hear a fresh plea in connection with Rafale deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X