ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ನಿರ್ಮಾಣ ಚಟುವಟಿಕೆಗಳ ಮೇಲೆ ಸುಪ್ರೀಂಕೋರ್ಟ್ ಮರು ನಿಷೇಧ

|
Google Oneindia Kannada News

ನವದೆಹಲಿ, ನವೆಂಬರ್ 25: ನವದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕವನ್ನು ಗಮನಿಸಿದ ಸುಪ್ರೀಂ ಕೋರ್ಟ್ ಬುಧವಾರ ಮತ್ತೊಮ್ಮೆ ನಿರ್ಮಾಣ ಚಟುವಟಿಕೆಗಳ ಮೇಲಿನ ನಿಷೇಧವನ್ನು ಹೇರುವಂತೆ ಸೂಚನೆ ನೀಡಿದೆ. ಕೊಳಾಯಿ ಕೆಲಸ, ಒಳಾಂಗಣ ಅಲಂಕಾರ, ವಿದ್ಯುತ್ ಕೆಲಸ ಮತ್ತು ಮರದ ಕೆಲಸದಿಂದ ಕೂಡಿದ ನಿರ್ಮಾಣ ಚಟುವಟಿಕೆಗಳನ್ನು ಮಾತ್ರ ಮುಂದುವರಿಸಲು ಅನುಮತಿ ನೀಡಲಾಗಿದೆ.

ದೆಹಲಿಯಲ್ಲಿ ನಿರ್ಮಾಣ ಚಟುವಟಿಕೆಗಳ ಮೇಲಿನ ನಿಷೇಧದಿಂದ ಉದ್ಯೋಗ ನಷ್ಟದಂತಹ ನಷ್ಟವನ್ನು ಅನುಭವಿಸುತ್ತಿರುವ ಕಾರ್ಮಿಕರಿಗೆ ನೆರವು ನೀಡಬೇಕು. ರಾಜ್ಯ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿ ಕಾಯಿದೆ, 1996ರ ಅಡಿಯಲ್ಲಿ ಸೆಸ್‌ನಂತೆ ಸಂಗ್ರಹಿಸಲಾದ ಹಣವನ್ನು ಬಳಸಿಕೊಳ್ಳುವುದಕ್ಕೆ ನ್ಯಾಯಾಲಯವು ನಿರ್ದೇಶನ ನೀಡಿದೆ.

ನವೆಂಬರ್ 26 ರಿಂದ ದೆಹಲಿಯ ಶಾಲಾ-ಕಾಲೇಜುಗಳು ಪುನರ್ ಆರಂಭನವೆಂಬರ್ 26 ರಿಂದ ದೆಹಲಿಯ ಶಾಲಾ-ಕಾಲೇಜುಗಳು ಪುನರ್ ಆರಂಭ

ಬುಧವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ. ಸುಪ್ರೀಂಕೋರ್ಟ್ ಆದೇಶದ ಕುರಿತು ಪ್ರಮುಖ ಅಂಶಗಳನ್ನು ಮುಂದೆ ತಿಳಿಯಿರಿ.

ಸುಪ್ರೀಂಕೋರ್ಟ್ ಆದೇಶದ ಪ್ರಮುಖ ಅಂಶ

ಸುಪ್ರೀಂಕೋರ್ಟ್ ಆದೇಶದ ಪ್ರಮುಖ ಅಂಶ

"ಮಧ್ಯಂತರ ಕ್ರಮವಾಗಿ, ಮತ್ತು ಮುಂದಿನ ಆದೇಶದವರೆಗೆ, ನಾವು ಈ ಕೆಳಗಿನ ಎರಡು ಷರತ್ತುಗಳಿಗೆ ಒಳಪಟ್ಟು ಎನ್‌ಸಿಆರ್‌ನಲ್ಲಿನ ನಿರ್ಮಾಣ ಚಟುವಟಿಕೆಗಳ ಮೇಲೆ ನಿಷೇಧವನ್ನು ಪುನಃ ವಿಧಿಸುತ್ತೇವೆ," ಎಂದು ಬುಧವಾರ ಸುಪ್ರೀಂಕೋರ್ಟ್ ಆದೇಶ ನೀಡಿದೆ.

* ಕೊಳಾಯಿ ಕೆಲಸ, ಒಳಾಂಗಣ ಅಲಂಕಾರ, ವಿದ್ಯುತ್ ಕೆಲಸ ಮತ್ತು ಮರದ ಕೆಲಸದಿಂದ ಕೂಡಿದ ಮಾಲಿನ್ಯರಹಿತ ನಿರ್ಮಾಣ ಚಟುವಟಿಕೆಗಳನ್ನು ಮುಂದುವರಿಸಲು ಅನುಮತಿಸಲಾಗಿದೆ.

* ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕ ಸೆಸ್‌ನಂತೆ ಸಂಗ್ರಹಿಸಿದ ಹಣವನ್ನು ರಾಜ್ಯಗಳು ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸುವ ಅವಧಿಗೆ ಜೀವನಾಧಾರವನ್ನು ಒದಗಿಸಲು ಮತ್ತು ಆಯಾ ವರ್ಗದ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆಯಡಿಯಲ್ಲಿ ಸೂಚಿಸಲಾದ ವೇತನ ಪಾವತಿಸಲು ಬಳಸಬೇಕು.

ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ

ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ

ನವದೆಹಲಿಯಲ್ಲಿ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದ್ದರಿಂದ ಕಾರ್ಮಿಕರ ಅನಾನುಕೂಲತೆಯನ್ನು ಗಮನಿಸಿದ ರಾಜ್ಯ ಸರ್ಕಾರವು, ಸೋಮವಾರದಿಂದ ನಿರ್ಮಾಣ ಮತ್ತು ನೆಲಸಮ ಚಟುವಟಿಕೆಗಳ ಮೇಲಿನ ನಿಷೇಧವನ್ನು ತೆಗೆದುಹಾಕಿತ್ತು. ವಾಯು ಗುಣಮಟ್ಟ ಸ್ವಲ್ಪಮಟ್ಟಿಗೆ ಸುಧಾರಣೆ ಕಂಡಿದ್ದರಿಂದ ರಾಷ್ಟ್ರ ರಾಜಧಾನಿಯಲ್ಲಿ ನಿರ್ಮಾಣ ಚಟುವಟಿಕೆಗಳ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದ್ದರು. ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗವು ನವೆಂಬರ್ 21ರಂದು ಸಭೆ ನಡೆಸಿ ನಿಷೇಧವನ್ನು ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಂಡಿತು.

ಅತ್ಯಂತ ಕಳಪೆಯಿಂದ ಕಳಪೆ ವರ್ಗಕ್ಕೆ ವಾಯು ಗುಣಮಟ್ಟ

ಅತ್ಯಂತ ಕಳಪೆಯಿಂದ ಕಳಪೆ ವರ್ಗಕ್ಕೆ ವಾಯು ಗುಣಮಟ್ಟ

ಕಳೆದ ವಾರ ಇದೇ ಸಮಯದಲ್ಲಿ 403ರಷ್ಟಿದ್ದ ವಾಯು ಗುಣಮಟ್ಟ ಸೂಚ್ಯಂಕವು, ಗುರುವಾರ ಬೆಳಿಗ್ಗೆ ಹೊತ್ತಿಗೆ 290 ಆಗಿದೆ. ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಇದೀಗ ಕಳಪೆ ಹಂತಕ್ಕೆ ತಲುಪಿದೆ. ವಾಯು ಮಾಲಿನ್ಯ ಪ್ರಮಾಣ ಎಷ್ಟಿರಬೇಕು ಎಂಬುದಕ್ಕೆ ಒಂದು ಮಾನದಂಡವಿದೆ. ಅದರ ಪ್ರಕಾರ, 00-50 ಉತ್ತಮ, 51-100 ತೃಪ್ತಿದಾಯಕ, 101-200 ಮಧ್ಯಮ, 201-300 ಕಳಪೆ, 301-400 ಅತಿಕಳಪೆ, 401-500 ಅಪಾಯಕಾರಿ, ಹಾಗೂ 500 ನಂತರ ಅತಿ ಅಪಾಯಕಾರಿ ಎಂದು ಹೇಳಲಾಗುತ್ತದೆ.

ನವೆಂಬರ್ 27ರಿಂದ ಟ್ರಕ್ ಪ್ರವೇಶಕ್ಕೆ ಅನುಮತಿ ನೀಡುವ ಉಲ್ಲೇಖ

ನವೆಂಬರ್ 27ರಿಂದ ಟ್ರಕ್ ಪ್ರವೇಶಕ್ಕೆ ಅನುಮತಿ ನೀಡುವ ಉಲ್ಲೇಖ

ಅಗತ್ಯ ಸೇವೆಗಳಲ್ಲಿ ತೊಡಗಿರುವವರನ್ನು ಹೊರತುಪಡಿಸಿ ಸಂಕುಚಿತ ನೈಸರ್ಗಿಕ ಅನಿಲದಿಂದ (ಸಿಎನ್‌ಜಿ) ಚಲಿಸುವ ಟ್ರಕ್‌ಗಳು ಮತ್ತು ಟೆಂಪೋಗಳಿಗೆ ಮಾತ್ರ ನವೆಂಬರ್ 27 ರಿಂದ ದೆಹಲಿ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.

English summary
Supreme Court reimposed the ban on construction activities on Wednesday after taking note of Delhi air quality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X