ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಎಪಿ ಸಂಸದನ ವಿರುದ್ಧದ ಜಾಮೀನು ರಹಿತ ವಾರಂಟ್ ತಡೆಯಲು ಸುಪ್ರೀಂ ನಕಾರ

|
Google Oneindia Kannada News

ನವದೆಹಲಿ, ಫೆಬ್ರವರಿ 2: ದ್ವೇಷ ಭಾಷಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ರಾಜ್ಯಸಭೆ ಸಂಸದ ಸಂಜಯ್ ಸಿಂಗ್ ವಿರುದ್ಧ ಹೊರಡಿಸಲಾಗಿರುವ ಜಾಮೀನುರಹಿತ ವಾರಂಟ್‌ಗೆ ತಡೆ ನೀಡಲು ಸುಪ್ರೀಂಕೋರ್ಟ್ ಮಂಗಳವಾರ ನಿರಾಕರಿಸಿದೆ.

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಸುದ್ದಿಗೋಷ್ಠಿ ನಡೆಸಿದ ಬಳಿಕ ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ತಮ್ಮ ವಿರುದ್ಧ ದಾಖಲಾದ ಹಲವು ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಸಂಜಯ್ ಸಿಂಗ್ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಉತ್ತರ ಪ್ರದೇಶದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಂಜಯ್ ಸಿಂಗ್, ನಿರ್ದಿಷ್ಟ ಜಾತಿಯೊಂದು ಸರ್ಕಾರವನ್ನು ನಡೆಸುತ್ತಿದೆ ಎಂಬ ಭಾವನೆ ರಾಜ್ಯದ ಜನರಲ್ಲಿ ಮೂಡಿದೆ ಎಂದಿದ್ದರು.

ಅರ್ನಬ್ ಗೋಸ್ವಾಮಿ ಚಾನೆಲ್‌ಗೆ ಬ್ರಿಟನ್‌ನಲ್ಲಿ 19 ಲಕ್ಷ ರೂ ದಂಡಅರ್ನಬ್ ಗೋಸ್ವಾಮಿ ಚಾನೆಲ್‌ಗೆ ಬ್ರಿಟನ್‌ನಲ್ಲಿ 19 ಲಕ್ಷ ರೂ ದಂಡ

ಲಕ್ನೋದಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸಲು ಅಲಹಾಬಾದ್‌ನ ಹೈಕೋರ್ಟ್ ನಿರಾಕರಿಸಿತ್ತು. ಇದರಿಂದ ಸಂಜಯ್ ಸಿಂಗ್, ಜನವರಿ 21ರಂದು ಸುಪ್ರೀಂಕೋರ್ಟ್‌ನಲ್ಲಿ ಪ್ರತ್ಯೇಕ ಅರ್ಜಿಯಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದರು.

Supreme Court Refuses To Stay NBW Against AAP Sanjay Singh On Hate Speech Cases

ಬಿಜೆಪಿ ಮುಖಂಡ ರಾಜಾ ಸಿಂಗ್‌ಗೆ ನಿಷೇಧ ಹೇರಿದ ಫೇಸ್ಬುಕ್ಬಿಜೆಪಿ ಮುಖಂಡ ರಾಜಾ ಸಿಂಗ್‌ಗೆ ನಿಷೇಧ ಹೇರಿದ ಫೇಸ್ಬುಕ್

ಎಂಪಿ-ಎಂಎಲ್‌ಎ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್ ಅನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದ ಸಂಜಯ್ ಸಿಂಗ್ ಅರ್ಜಿಯನ್ನು ಉತ್ತೇಜಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಡಿಸೆಂಬರ್ 4ರಂದು ಎಂಪಿ-ಎಂಎಲ್‌ಎ ನ್ಯಾಯಾಲಯ ನೀಡಿದ್ದ ತೀರ್ಪು ಕಾನೂನು ಸ್ನೇಹಿಯಾಗಿಲ್ಲ. ತಮ್ಮ ವಿರುದ್ಧ ವಿಚಾರಣೆ ನಡೆಸುವಂತೆ ಸರ್ಕಾರ ಆದೇಶ ನೀಡಿರುವುದು ಕಾನೂನಾತ್ಮಕವಾಗಿಲ್ಲ ಎಂದು ಸಂಜಯ್ ಸಿಂಗ್ ವಾದಿಸಿದ್ದರು. ಇದನ್ನು ನ್ಯಾಯಮೂರ್ತಿ ರಾಕೇಶ್ ಶ್ರೀವಾಸ್ತವ ಅವರ ಏಕ ಸದಸ್ಯ ನ್ಯಾಯಪೀಠ ತಿರಸ್ಕರಿಸಿದೆ.

English summary
The Supreme Court has refused to stay the non bailable warrant issued against AAP Rajya Sabha MP Sanjay Singh in connection with hate speech cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X