• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಾಬ್ರಿ ಮಸೀದಿ ಧ್ವಂಸ ಕೇಸ್ ತೀರ್ಪಿತ್ತ ಜಡ್ಜ್ ಯಾದವರಿಗೆ ಭದ್ರತೆ ಇಲ್ಲ!

|
Google Oneindia Kannada News

ನವದೆಹಲಿ, ನ.02: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀರ್ಪು ನೀಡಿದ್ದ ವಿಶೇಷ ನ್ಯಾಯಾಲಯ ಜಡ್ಜ್ ಎಸ್. ಕೆ ಯಾದವ್ ಅವರಿಗೆ ಭದ್ರತೆ ಒದಗಿಸುವುದಕ್ಕೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ತಿರಸ್ಕರಿಸಿದೆ. ತಮಗೆ ಭದ್ರತೆ ಒದಗಿಸುವಂತೆ ಜಡ್ಜ್ ಯಾದವ್ ಕೋರಿದ್ದರು. ಆದರೆ, ಜಸ್ಟೀಸ್ ರೋಹಿಂಗ್ಟನ್ ನಾರಿಮನ್ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ತಿರಸ್ಕರಿಸಿದೆ.

ನ್ಯಾ ಎಸ್. ಕೆ ಯಾದವ್ (60) ಅವರು 28 ವರ್ಷ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದ್ದರು. ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ, ಉಮಾಭಾರತಿ, ಮುರಳಿ ಮನೋಹರ್ ಜೋಶೀ ಸೇರಿದಂತೆ ಎಲ್ಲಾ 32 ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದರು. ಲಕ್ನೋದ ವಿಶೇಷ ನ್ಯಾಯಾಲಯದಿಂದ ಸೆ.30ರಂದು ಎಲ್ಲರಿಗೂ ಮುಕ್ತಿ ಸಿಕ್ಕಿತ್ತು.

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಪ್ರಕಟ, ಅಡ್ವಾಣಿಗೆ ಖುಲಾಸೆಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಪ್ರಕಟ, ಅಡ್ವಾಣಿಗೆ ಖುಲಾಸೆ

ಆದರೆ, 2019ರಲ್ಲೇ ನಿವೃತ್ತಿ ಹೊಂದಬೇಕಿದ್ದ ಜಡ್ಜ್ ಯಾದವ್ ಅವರು 2015ರಿಂದ ಈ ಕೇಸಿನ ವಿಚಾರಣೆ ಆಲಿಸಿ, 2020ರಲ್ಲಿ ತೀರ್ಪು ನೀಡಿದ್ದರು. ಈಗ ಭದ್ರತೆ ಮುಂದುವರೆಸುವಂತೆ ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಹಾಕಲಾಗಿತ್ತು. ಆದರೆ, ಸೆ.30ರಂದು ಬಂದಿರುವ ಪತ್ರದ ಅನ್ವಯ ಭದ್ರತೆ ಮುಂದುವರೆಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಸೆ.1ರಿಂದ ಖಾಸಗಿ ಭದ್ರತಾ ವ್ಯವಸ್ಥೆಯಲ್ಲೇ ಕೋರ್ಟ್ ಆವರಣಕ್ಕೆ ಬಂದು ಸೆ.30ರ ತನಕ ವಿಚಾರಣೆ, ತೀರ್ಪು ಎಲ್ಲವನ್ನು ನ್ಯಾ. ಯಾದವ್ ನೀಡಿದ್ದರು. ಬಿಜೆಪಿ ಮುಖಂಡರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ, ಸಂಸದರಾದ ಬ್ರಿಜ್ ಭೂಷಣ್ ಸಿಂಗ್, ಸಾಕ್ಷಿ ಮಹಾರಾಜ್, ಭೂಷಣ ಸಿಂಗ್, ಆರ್ ಎನ್ ಶ್ರೀವಾಸ್ತವ, ಲಲ್ಲು ಸಿಂಗ್ ಸೇರಿದಂತೆ 32 ಜನರ ವಿರುದ್ಧ ವಿಚಾರಣೆ ನಡೆಸಲಾಗಿತ್ತು. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್‌.ಕೆ.ಯಾದವ್‌ ಸೆಪ್ಟೆಂಬರ್‌ 16ರಂದೇ ನಿರ್ದೇಶನ ನೀಡಿದ್ದರು. ಆದರೆ, ವಯಸ್ಸು, ಕೊರೊನಾವೈರಸ್ ಹಿನ್ನೆಲೆಯಲ್ಲಿ ತೀರ್ಪು ಪ್ರಕಟವಾಗುವ ಸಂದರ್ಭದಲ್ಲಿ ಖುದ್ದು ಹಾಜರಾತಿಯಿಂದ ಕೆಲವು ನಾಯಕರು ವಿನಾಯಿತಿ ಪಡೆದುಕೊಂಡಿದ್ದರು. ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತನಿಖೆ ನಡೆಸಿದ ಸಿಬಿಐ ಒಟ್ಟು 351 ಜನ ಸಾಕ್ಷಿಗಳು ಹಾಗೂ ಸುಮಾರು 600 ಸಾಕ್ಷ್ಯಚಿತ್ರಗಳ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಇದುವರೆಗೆ ಹಾಜರುಪಡಿಸಲಾಗಿತ್ತು.

ಅಯೋಧ್ಯಾ ನಗರದ ಬಾಬ್ರಿ ಮಸೀದಿ ಧ್ವಂಸ ವಿವಾದ, ಟೈಮ್ ಲೈನ್ಅಯೋಧ್ಯಾ ನಗರದ ಬಾಬ್ರಿ ಮಸೀದಿ ಧ್ವಂಸ ವಿವಾದ, ಟೈಮ್ ಲೈನ್

   Modi ಯಿಂದ ಭಾರತೀಯರಿಗೆ ಮತ್ತೊಂದು Gift | Oneindia Kannada

   28 ವರ್ಷದಷ್ಟು ಹಳೆಯ ಪ್ರಕರಣವಾದ ಬಾಬ್ರಿ ಮಸೀದಿ ಧ್ವಂಸದ ವಾದ-ಪ್ರತಿವಾದ 2020 ಸೆಪ್ಟೆಂಬರ್ 1ರಂದು ಮುಕ್ತಾಯಗೊಂಡಿತ್ತು. ಏಪ್ರಿಲ್ ತಿಂಗಳಿನಲ್ಲಿ ತೀರ್ಪು ಪ್ರಕಟವಾಗಬೇಕಿತ್ತು. ಬದಲಿಗೆ ಸೆಪ್ಟೆಂಬರ್ 30ರಂದು ತೀರ್ಪು ಹೊರ ಬಂದಿತ್ತು.

   English summary
   The Supreme Court has refused to extend security to former special court judge Surendra Kumar Yadav, who had delivered the verdict in the 28-year-old Babri demolition case in September.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X