ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಒಪ್ಪಂದ: ಬೆಲೆ ಮತ್ತು ತಾಂತ್ರಿಕ ವಿವರ ನೀಡಲು ಸುಪ್ರೀಂಕೋರ್ಟ್ ಸೂಚನೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 31: ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಯುದ್ಧ ವಿಮಾನಗಳ ಬೆಲೆ ಮತ್ತು ತಾಂತ್ರಿಕ ವಿವರಗಳನ್ನು ಹತ್ತು ದಿನಗಳ ಒಳಗೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ರಫೇಲ್ ಯುದ್ಧ ವಿಮಾನ ಖರೀದಿಗಾಗಿ ಫ್ರಾನ್ಸ್ ಜತೆ ನಡೆಸಿದ ಒಪ್ಪಂದದ ಈ ಮಾಹಿತಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಹತ್ತು ದಿನಗಳಲ್ಲಿ ನೀಡುವಂತೆ ಅದು ಹೇಳಿದೆ. ಇದಕ್ಕೂ ಮೊದಲು ವಿಚಾರಣೆ ನಡೆಸಿದ್ದಾಗ ತಾಂತ್ರಿಕ ಹಾಗೂ ಬೆಲೆಯ ವಿವರ ಬಿಟ್ಟು ಉಳಿದ ಪ್ರಕ್ರಿಯೆ ವಿವರ ನೀಡುವಂತೆ ಹೇಳಿತ್ತು.

ರಫೇಲ್ ಒಪ್ಪಂದ ಪ್ರಕ್ರಿಯೆಯ ವಿವರ ಕೊಡಿ: ಕೇಂದ್ರವನ್ನು ಕೇಳಿದ ಸುಪ್ರೀಂಕೋರ್ಟ್ರಫೇಲ್ ಒಪ್ಪಂದ ಪ್ರಕ್ರಿಯೆಯ ವಿವರ ಕೊಡಿ: ಕೇಂದ್ರವನ್ನು ಕೇಳಿದ ಸುಪ್ರೀಂಕೋರ್ಟ್

ಒಪ್ಪಂದದ ಕೆಲವು ವಿವರಗಳನ್ನು ಸಹ ಸಾರ್ವಜನಿಕ ವೆಬ್‌ಸೈಟ್‌ಗಳಲ್ಲಿ ಬಹಿರಂಗಪಡಿಸುವಂತೆ ಕೂಡ ಅದು ನಿರ್ದೇಶಿಸಿದೆ. ಅಲ್ಲದೆ, ಯುದ್ಧ ವಿಮಾನ ತಯಾರಿಕಾ ಕಂಪೆನಿಯು ತನ್ನ ಆಫ್‌ಸೆಟ್ ಪಾಲುದಾರರೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳ ವಿವರಗಳನ್ನು ಒಪ್ಪಂದದ ವಿರುದ್ಧ ಅರ್ಜಿ ಸಲ್ಲಿಸಿರುವ ವ್ಯಕ್ತಿಗಳಿಗೆ ಒದಗಿಸುವಂತೆ ಹೇಳಿದೆ.

Supreme Court Rafale deal details of pricing and strategic details

ರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳುರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳು

ಇದಕ್ಕೂ ಮುನ್ನ ಅ.10ರಂದು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಫ್ರಾನ್ಸ್‌ನೊಂದಿಗೆ ಮಾಡಿಕೊಂಡ ಒಪ್ಪಂದದ ತಾಂತ್ರಿಕ ವಿವರ ಮತ್ತು ಬೆಲೆಗಳ ಮಾಹಿತಿಯನ್ನು ಹೊರತುಪಡಿಸಿ ಉಳಿದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಎಲ್ಲ ವಿವರಗಳನ್ನು ಅಕ್ಟೋಬರ್ 29ರ ಒಳಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಅಲೋಕ್ ಬಳಿ ರಫೇಲ್ ಡೀಲ್ ದಾಖಲೆ: ರಾಹುಲ್ ಸ್ಫೋಟಕ ಮಾಹಿತಿಅಲೋಕ್ ಬಳಿ ರಫೇಲ್ ಡೀಲ್ ದಾಖಲೆ: ರಾಹುಲ್ ಸ್ಫೋಟಕ ಮಾಹಿತಿ

ಅದರ ಅನ್ವಯ ಕೇಂದ್ರ ಸರ್ಕಾರವು ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ನಿರ್ಣಯ ಕೈಗೊಳ್ಳುವಿಕೆಯ ಪ್ರಕ್ರಿಯೆಗಳ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಅ.27ರಂದು ಸಲ್ಲಿಸಿತ್ತು.

English summary
Supreme Court on Wednesday directed Centre to give the details of Rafale deal pricing and strategic agreement in 10 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X