ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಂಕು ನಿವಾರಕ ಸುರಂಗ ನಿಷೇಧ ಏಕಿಲ್ಲ?: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 7: ಕೊರೊನಾ ವೈರಸ್ ಸೋಂಕು ಭಾರತದಲ್ಲಿ ಹರಡಲು ಆರಂಭವಾದಾಗ ಬಹುತೇಕ ಕಡೆ ಸೋಂಕು ನಿವಾರಕ ಸುರಂಗ ಮಾರ್ಗಗಳನ್ನು ಸ್ಥಾಪಿಸಲಾಗಿತ್ತು. ಈ ಸೋಂಕು ನಿವಾರಕ ಕೃತಕ ಸುರಂಗ ಮಾರ್ಗಗಳನ್ನು ಏಕೆ ಇನ್ನೂ ನಿಷೇಧಿಸಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

Recommended Video

Corona ಅಂಕಿ ಅಂಶಗಳಲ್ಲಿ ಕಂಡ ಏಕೈಕ ಪಾಸಿಟಿವ್ ಸುದ್ದಿ | Oneindia Kannada

ಸೋಂಕಿನಿಂದ ಮುಕ್ತಗೊಳ್ಳುವ ಉದ್ದೇಶದಿಂದ ನಿರ್ಮಿಸಲಾದ ಸೋಂಕು ನಿವಾರಕ ಮಾರ್ಗಗಳನ್ನು ಬಳಸುವುದು ಪ್ರಾಯೋಗಿಕವಾಗಿ ಮತ್ತು ಮಾನೋ ವೈಜ್ಞಾನಿಕವಾಗಿ ಹಾನಿಕರ ಎಂದು ಕೇಂದ್ರ ಸರ್ಕಾರದ ಪ್ರತಿಕ್ರಿಯೆಗೆ ಸುಪ್ರೀಂಕೋರ್ಟ್ ಈ ಪ್ರಶ್ನೆ ಕೇಳಿದೆ.

ಕೋವಿಡ್ ಬಂದ ಮಕ್ಕಳ ಹೃದಯಕ್ಕೆ ತೀವ್ರ ಹಾನಿ: ಕಳವಳ ಮೂಡಿಸುವ ವರದಿಕೋವಿಡ್ ಬಂದ ಮಕ್ಕಳ ಹೃದಯಕ್ಕೆ ತೀವ್ರ ಹಾನಿ: ಕಳವಳ ಮೂಡಿಸುವ ವರದಿ

ಸೋಂಕು ನಿವಾರಕ ಮಾರ್ಗಗಳ ಬಳಕೆ, ಸ್ಥಾಪನೆ, ತಯಾರಿಕೆ ಮತ್ತು ಜಾಹೀರಾತುಗಳನ್ನು ತಕ್ಷಣದಿಂದಲೇ ನಿಷೇಧಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿತ್ತು. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್. ಸುಭಾಷ್ ರೆಡ್ಡಿ ಮತ್ತು ಎಂಆರ್ ಶಾ ಅವರನ್ನು ಒಳಗೊಂಡ ತ್ರಿಸದಸ್ಯ ನ್ಯಾಯಪೀಠವು ಕೇಂದ್ರ ಗೃಹ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯಗಳಿಗೆ ಆಗಸ್ಟ್‌ನಲ್ಲಿ ನೋಟಿಸ್‌ಗಳನ್ನು ಜಾರಿ ಮಾಡಿತ್ತು. ಮುಂದೆ ಓದಿ.

ಸೋಂಕು ನಿವಾರಕ ಸುರಕ್ಷಿತವಲ್ಲ

ಸೋಂಕು ನಿವಾರಕ ಸುರಕ್ಷಿತವಲ್ಲ

ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಪೀಠದ ಮುಂದೆ ಕೇಂದ್ರ ಸರ್ಕಾರವು, ಸೋಂಕು ನಿವಾರಕ ಸುರಂಗ ಮಾರ್ಗಗಳು ದೈಹಿಕ ಹಾಗೂ ಮಾನಸಿಕವಾಗಿ ಹಾನಿಕಾರಕ. ಹೀಗಾಗಿ ಜನರು ಈ ಸುರಂಗಗಳನ್ನು ಬಳಕೆ ಮಾಡದಂತೆ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿತು.

ಕೊರೊನಾಗೆ ಹಿಂದಿನ 'ಮರ್ಯಾದೆ' ಈಗಿಲ್ಲ: ಜನರ ಈ ಡೋಂಟ್ ಕೇರ್ ಗೆ 6 ಕಾರಣಗಳುಕೊರೊನಾಗೆ ಹಿಂದಿನ 'ಮರ್ಯಾದೆ' ಈಗಿಲ್ಲ: ಜನರ ಈ ಡೋಂಟ್ ಕೇರ್ ಗೆ 6 ಕಾರಣಗಳು

ಮಂಗಳವಾರ ನಿರ್ದೇಶನ

ಮಂಗಳವಾರ ನಿರ್ದೇಶನ

'ಅದು ಕೆಟ್ಟದಾಗಿದ್ದರೆ ಮತ್ತೇಕೆ ಕೇಂದ್ರ ಸರ್ಕಾರ ಸೋಂಕು ನಿವಾರಕ ಸುರಂಗಗಳನ್ನು ನಿಷೇಧಿಸುತ್ತಿಲ್ಲ?' ಎಂದು ನ್ಯಾಯಪೀಠ ಕೇಳಿತು.

ಸೋಂಕು ನಿವಾರಕ ಸುರಂಗಗಳ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಂಗಳವಾರ ಸೂಕ್ತ ನಿರ್ದೇಶನವನ್ನು ಹೊರಡಿಸಲಿದೆ ಎಂದು ಸಾಲಿಸಿಟರ್ ಜನರಲ್ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದರು.

ಕಾನೂನು ವಿದ್ಯಾರ್ಥಿಯ ಅರ್ಜಿ

ಕಾನೂನು ವಿದ್ಯಾರ್ಥಿಯ ಅರ್ಜಿ

ಮನುಷ್ಯರನ್ನು ಸೋಂಕಿನಿಂದ ನಿವಾರಿಸಲು ಅವರ ಮೇಲೆ ಕೀಟನಾಶಕ ಅಥವಾ ಸಾವಯವ ಸೋಂಕು ನಿವಾರಕಗಳನ್ನು ಚಿಮ್ಮಿಸುವಂತಹ ಸುರಂಗಗಳನ್ನು ಬಳಸುವ, ಸ್ಥಾಪಿಸುವ, ಉತ್ಪಾದಿಸುವ ಮತ್ತು ಜಾಹೀರಾತು ನೀಡುವುದನ್ನು ನಿಷೇಧಿಸಬೇಕು ಎಂದು ಕಾನೂನು ವಿದ್ಯಾರ್ಥಿ ಗುರ್ಸಿಮ್ರಾನ್ ಸಿಂಗ್ ನರುಲಾ ಅರ್ಜಿ ಸಲ್ಲಿಸಿದ್ದರು.

ವಿಜ್ಞಾನಿಗಳೇ ಎಚ್ಚರಿಸಿದ್ದಾರೆ

ವಿಜ್ಞಾನಿಗಳೇ ಎಚ್ಚರಿಸಿದ್ದಾರೆ

ಸೋಂಕು ನಿವಾರಕ ಸುರಂಗಗಳು ಪರಿಣಾಮಕಾರಿಯಲ್ಲ ಮತ್ತು ಅವು ಹಾನಿಕಾರಕ ಎಂದು ಜಗತ್ತಿನಾದ್ಯಂತ ವಿಜ್ಞಾನಿಗಳು ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ್ದಾರೆ. ವೈರಸ್ ಹರಡುವುದನ್ನು ಈ ಮಾರ್ಗಗಳು ತಡೆಗಟ್ಟಬಲ್ಲವು ಎಂದು ತಪ್ಪಾಗಿ ಬಿಂಬಿಸಲಾಗಿದೆ. ಈ ಸುರಂಗಗಳಲ್ಲಿ ಮನುಷ್ಯರ ಮೇಲೆ ಚಿಮ್ಮಿಸುವ ಸೋಂಕು ನಿವಾರಕ ಔಷಧಗಳು ಆರೋಗ್ಯಕ್ಕೆ ಅಪಾಯಕಾರಿಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಬೆಂಗಳೂರಿನಲ್ಲಿ ದಾಖಲಾಯಿತು ಆಘಾತಕಾರಿ ಕೊವಿಡ್19 ಪ್ರಕರಣಬೆಂಗಳೂರಿನಲ್ಲಿ ದಾಖಲಾಯಿತು ಆಘಾತಕಾರಿ ಕೊವಿಡ್19 ಪ್ರಕರಣ

English summary
The Supreme Court has questioned the centre, why the government has not banned disinfection tunnels after centre replies these tunnels are harmful.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X