ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳ, ಪಂಜಾಬ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

|
Google Oneindia Kannada News

ನವದೆಹಲಿ, ಜು.27: ಕೋವಿಡ್‌ ಸಾಂಕ್ರಾಮಿಕ ರೋಗದಲ್ಲಿ ಅನಾಥ ಮಕ್ಕಳ ಸಂಖ್ಯೆಯ ಬಗ್ಗೆ ತನ್ನ ಡೇಟಾವನ್ನು ನವೀಕರಿಸುವಲ್ಲಿನ ವಿಳಂಬದ ಬಗ್ಗೆ ಪಶ್ಚಿಮ ಬಂಗಾಳ ಮತ್ತು ಪಂಜಾಬ್ ಸೇರಿದಂತೆ ಹಲವಾರು ರಾಜ್ಯಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.

''ಕೋವಿಡ್‌ ಸಂದರ್ಭದಲ್ಲಿ ಅನಾಥ ಮಕ್ಕಳ ಕುರಿತಾದ ಡೇಟಾವನ್ನು ಬಾಲ್ ಸ್ವರಾಜ್ ವೆಬ್‌ಸೈಟ್‌ನಲ್ಲಿ ಇನ್ನೂ ಏಕೆ ಅಪ್‌ಲೋಡ್ ಮಾಡಿಲ್ಲ,'' ಎಂದು ಜಮ್ಮು ಕಾಶ್ಮೀರ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ಸರ್ಕಾರವನ್ನು ನ್ಯಾಯಾಲಯ ಕೇಳಿದೆ.

 ಪೆಗಾಸಸ್‌ ಬೇಹುಗಾರಿಕೆ: ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಸುಪ್ರೀಂ ಮೆಟ್ಟಿಲೇರಿದ ಹಿರಿಯ ಪತ್ರಕರ್ತರು ಪೆಗಾಸಸ್‌ ಬೇಹುಗಾರಿಕೆ: ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಸುಪ್ರೀಂ ಮೆಟ್ಟಿಲೇರಿದ ಹಿರಿಯ ಪತ್ರಕರ್ತರು

''ಸರಿಯಾದ ಡೇಟಾವನ್ನು ಅಪ್‌ಲೋಡ್ ಮಾಡಿ ಎನ್‌ಸಿಪಿಸಿಆರ್‌ಗೆ ಕಳುಹಿಸಲಾಗಿದೆ,'' ಎಂದು ಪಶ್ಚಿಮ ಬಂಗಾಳದ ವಕೀಲರು ವಾದಿಸುತ್ತಿದ್ದಂತೆ, ನ್ಯಾಯಾಲಯವು, ''ಹಾಗಾದರೆ ಇಡೀ ರಾಜ್ಯದಲ್ಲಿ ಕೇವಲ 27 ಮಕ್ಕಳು ಮಾತ್ರ ಅನಾಥರಾಗಿದ್ದಾರೆಂದು ನೀವು ಹೇಳುತ್ತೀರಾ? ನಿಮ್ಮ ಈ ಅಂಕಿ ಅಂಶ ಸರಿಯೇ'' ಎಂದು ಸರ್ಕಾರವನ್ನು ಪ್ರಶ್ನಿಸಿದೆ.

Supreme Court pulls up West Bengal, Punjab Govts over data on Covid orphans

"ನೀವು ಇತರ ರಾಜ್ಯಗಳಲ್ಲಿನ ಅಂಕಿಅಂಶಗಳನ್ನು ನೋಡಿದ್ದೀರಿ. ನಿಮ್ಮ ರಾಜ್ಯದಲ್ಲಿ ಕೋವಿಡ್‌ ಸೋಂಕು ಇರಲೇ ಇಲ್ಲ ಎಂಬುವುದು ಅಲ್ಲ. ಈ ಅಂಕಿಅಂಶಗಳನ್ನು ನಂಬಲು ನಾವು ನಂಬಲಾಗದು. ಏನು ಮಾಡಬೇಕೆಂದು ರಾಜ್ಯಕ್ಕೆ ಹೇಗೆ ತಿಳಿಯುತ್ತಿಲ್ಲ ಎಂಬುದು ನಮಗೆ ಅರ್ಥವಾಗುತ್ತಿಲ್ಲ," ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗೆಯೇ ಮಕ್ಕಳ ಹಕ್ಕುಗಳು ಮತ್ತು ಕಳ್ಳಸಾಗಣೆ ನಿಯಂತ್ರಣ ಕಾರ್ಯದರ್ಶಿ ನಿರ್ದೇಶನಾಲಯಕ್ಕೆ ನೋಟಿಸ್ ನೀಡಿದೆ.

ಈ ಸಂದರ್ಭದಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗದಲ್ಲಿ ಅನಾಥ ಮಕ್ಕಳ ಸಂಖ್ಯೆಯ ಬಗ್ಗೆ ಪರಿಶೀಲನೆ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ ಎಂದು ವಕೀಲರು ಹೇಳಿದ್ದಾರೆ. "ಪ್ರಕ್ರಿಯೆ ನಡೆಯುತ್ತದೆ ಎಂಬ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಬೇಡಿ. ಬಿಟ್ಟರೆ ನೀವು ಪರಿಶೀಲಿಸಲು ವರ್ಷಗಳು ತೆಗೆದುಕೊಳ್ಳುತ್ತೀರಿ. ಮಕ್ಕಳನ್ನು ಅಸಹಾಯಕರಾಗಿ ಬಿಡಲಾಗುತ್ತದೆಯೇ?," ಎಂದು ಮತ್ತೆ ಸರ್ಕಾರಗಳನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಯುಎಪಿಎ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರುಯುಎಪಿಎ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು

ಅಂಕಿಅಂಶಗಳು ಸರಿಯಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಪಂಜಾಬ್ ಸರ್ಕಾರವನ್ನು ಕೂಡಾ ತರಾಟೆಗೆ ತೆಗೆದುಕೊಂಡಿದೆ. "ನೀವು ತಳಮಟ್ಟದಲ್ಲಿ ಮಾಹಿತಿಯನ್ನು ಪಡೆಯುವ ಮಾರ್ಗಗಳನ್ನು ತರಬೇಕು. ಜಿಲ್ಲಾ ಮಟ್ಟದಲ್ಲಿ ಸಿಡಬ್ಲ್ಯುಸಿಗಳ ಮುಂದೆ ಹಾಜರಾಗುವ ಮಕ್ಕಳ ಮಾಹಿತಿಯನ್ನು ಮಾತ್ರ ಅವಲಂಬಿಸಲಾಗುವುದಿಲ್ಲ," ಎಂದು ಸುಪ್ರೀಂ ಕೋರ್ಟ್ ಪಂಜಾಬ್‌ಗೆ ತಿಳಿಸಿದೆ.

"ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಬಗ್ಗೆ ನಮಗೆ ಮಾಹಿತಿ ಸಿಗದಿದ್ದರೆ, ಅವರನ್ನು ನೋಡಿಕೊಳ್ಳಲು ಯಾವುದೇ ಮಾರ್ಗವಿಲ್ಲ," ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪಂಜಾಬ್ ಪರ ವಾದಿಸಿದ ವಕೀಲರು, "ನಮ್ಮಲ್ಲಿ 73 ಅನಾಥ ಮಕ್ಕಳಿದ್ದಾರೆ ಎಂಬುದು ನಮ್ಮ ಇಲಾಖೆಗೆ ಖಚಿತವಾಗಿದೆ. ಕೋವಿಡ್‌ನಿಂದಾಗಿ ಪೋಷಕರು ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ 33 ಮಕ್ಕಳ ಡೇಟಾವನ್ನು ಅಪ್‌ಲೋಡ್ ಮಾಡಲಾಗಿದೆ. ಉಳಿದ 40 ಮಂದಿ ಕೋವಿಡ್ ಅಲ್ಲದ ಕಾರಣಗಳಿಂದ ಸಾವನ್ನಪ್ಪಿದರು," ಎಂದು ಹೇಳಿದ್ದಾರೆ.

ಈ ವೇಳೆ ತಳಮಟ್ಟದಲ್ಲಿ ಅನಾಥ ಮಕ್ಕಳ ಸಂಖ್ಯೆಯನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಪಂಜಾಬ್ ಸರ್ಕಾರಕ್ಕೆ ಸೂಚಿಸಿದೆ. ಮತ್ತೊಂದೆಡೆ, ನವೀಕರಿಸಿದ ಮಾಹಿತಿಯನ್ನು ಸಲ್ಲಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಜಮ್ಮು ಮತ್ತು ಕಾಶ್ಮೀರ ಅಧಿಕಾರಿಗಳಿಗೆ ನಿರ್ದೇಶಿಸಿದೆ.

(ಒನ್‌ಇಂಡಿಯಾ ಸುದ್ದಿ)

English summary
The Supreme Court on Tuesday pulled up several states, including West Bengal and Punjab, over the delay in updating its data on the number of children orphaned in the pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X