ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಐ ಪಾವತಿ: ಅಮೇಜಾನ್, ಗೂಗಲ್, ಫೇಸ್‌ಬುಕ್, ಕೇಂದ್ರ ಸರ್ಕಾರಕ್ಕೆ ನೋಟಿಸ್

|
Google Oneindia Kannada News

ನವದೆಹಲಿ, ಅಕ್ಟೋಬರ್ 15: ಯುಪಿಐ ಅಡಿಯಲ್ಲಿ ನಡೆಸಲಾಗುವ ಹಣ ವರ್ಗಾವಣೆಗಳ ದತ್ತಾಂಶ ಸುರಕ್ಷತೆಗೆ ಸಂಬಂಧಿಸಿದಂತೆ ಸಿಪಿಐ ಸಂಸದ ಬಿನೋಯ್ ವಿಸ್ವಂ ಸಲ್ಲಿಸಿದ್ದ ಅರ್ಜಿ ಪರಿಶೀಲನೆ ನಡೆಸಿದ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರ, ಗೂಗಲ್, ಅಮೇಜಾನ್ ಮತ್ತು ಫೇಸ್‌ಬುಕ್/ವಾಟ್ಸಾಪ್ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠ, 'ನಾವು ನೋಟಿಸ್ ಜಾರಿ ಮಾಡಲಿದ್ದೇವೆ. ಸಂಪೂರ್ಣ ನಿಯಂತ್ರಣ ಕ್ರಮಗಳ ಚೌಕಟ್ಟು ಅನುಷ್ಠಾನಕ್ಕೆ ಬರುವ ಮುನ್ನವೇ ಇಡೀ ಆಡಳಿತವು ಪಾವತಿ ವ್ಯವಸ್ಥೆಯನ್ನು ಆರಂಭಿಸಿವೆ ಎನ್ನುವುದು ಇಲ್ಲಿ ಗಮನಾರ್ಹವಾಗಿದೆ' ಎಂದು ಹೇಳಿತು.

ಅಂಗೈ ತೋರಿಸಿ ಹಣ ಪಾವತಿಸಿ: ಅಮೆಜಾನ್‌ನಿಂದ ಹೊಸ ತಂತ್ರಜ್ಞಾನದ ಬಳಕೆಅಂಗೈ ತೋರಿಸಿ ಹಣ ಪಾವತಿಸಿ: ಅಮೆಜಾನ್‌ನಿಂದ ಹೊಸ ತಂತ್ರಜ್ಞಾನದ ಬಳಕೆ

ವಿಸ್ವಂ ಪರವಾಗಿ ಹಾಜರಾದ ಹಿರಿಯ ವಕೀಲ ಶ್ಯಾಮ್ ದಿವಾನ್, '2018ರ ಏಪ್ರಿಲ್‌ನಲ್ಲಿ ಈ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಸೂಚನೆ ನೀಡಿದ್ದ ಆರ್‌ಬಿಐ, ಈ ಎಲ್ಲ ವೇದಿಕೆಗಳ ಮೂಲಕ ನಡೆಯುವ ವಹಿವಾಟುಗಳ ದತ್ತಾಂಶಗಳು ಭಾರತದೊಳಗೇ ಇರುವ ಸರ್ವರ್‌ನಲ್ಲಿ ಭದ್ರವಾಗಿರಬೇಕು ಎಂದು ಹೇಳಿತ್ತು. ಅದನ್ನು 2018ರ ಅಕ್ಟೋಬರ್‌ನಲ್ಲಿ ಜಾರಿಗೆ ತರಬೇಕಿತ್ತು. ಆದರೆ ಅದಿನ್ನೂ ನಡೆದಿಲ್ಲ' ಎಂದು ತಿಳಿಸಿದರು.

Supreme Court Notice To Centre, Google, Amazon, Facebook On Protection Of UPI Transactions

ವಾಟ್ಸಾಪ್ ಸಂಸ್ಥೆಯು ತನ್ನ ಪೋಷಕ ಕಂಪೆನಿ ಫೇಸ್‌ಬುಕ್‌ ಜತೆ ಡೇಟಾಗಳನ್ನು ಸಂಗ್ರಹಿಸಿಡುತ್ತದೆ. ಆದರೆ ಅದರ ಸರ್ವರ್ ಭಾರತದ ಹೊರಗೆ ಇದೆ ಎಂದು ಅವರು ಮಾಹಿತಿ ನೀಡಿದರು.

UPI Payments:ಜೂನ್‌ನಲ್ಲಿ ಸಾರ್ವಕಾಲಿಕ ದಾಖಲೆ, 2.62 ಲಕ್ಷ ಕೋಟಿ ವಹಿವಾಟುUPI Payments:ಜೂನ್‌ನಲ್ಲಿ ಸಾರ್ವಕಾಲಿಕ ದಾಖಲೆ, 2.62 ಲಕ್ಷ ಕೋಟಿ ವಹಿವಾಟು

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಭಾರತೀಯ ರಾಷ್ಟ್ರೀಯ ಪಾವತಿ ನಿಗಮಕ್ಕೂ (ಎನ್‌ಪಿಸಿಐ) ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಡೇಟಾ ಸುರಕ್ಷತೆಯ ಕುರಿತಾದ ಆರೋಪಗಳ ಬಗ್ಗೆ ಗಮನ ಹರಿಸದೆ ಕುರುಡುತನ ಪ್ರದರ್ಶಿಸುತ್ತಿವೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಅಪಾಯವಿದ್ದರೂ ಅಮೇಜಾನ್, ಗೂಗಲ್ ಮತ್ತು ವಾಟ್ಸಾಪ್‌ ಸಂಸ್ಥೆಗಳಿಗೆ ಯುಪಿಐ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯಾಚರಣೆ ನಡೆಸಲು ಅನುಮತಿ ನೀಡಿವೆ ಎಂದು ಆರ್‌ಬಿಐ ಮತ್ತು ಎನ್‌ಸಿಪಿಐ ವಿರುದ್ಧವೂ ಅರ್ಜಿದಾರರು ಆರೋಪಿಸಿದ್ದರು.

English summary
Supreme Court on Thursday issues notice to central government, google, amazon, facebook, rbi on plea over data protection of UPI transactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X