• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿಗೆ ಕೊರಳಿಗೆ ಮತ್ತೆ ಸುತ್ತಿಕೊಳ್ಳಲಿದೆಯೇ ಗುಜರಾತ್ ಗಲಭೆ ಉರುಳು?

|

ನವದೆಹಲಿ, ನವೆಂಬರ್ 13: 2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರರಿಗೆ ಕ್ಲೀನ್ ಚಿಟ್ ನೀಡಿರುವ ವಿಶೇಷ ತನಿಖಾ ದಳದ (ಎಸ್ಐಟಿ) ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದೆ.

ಎಸ್‌ಐಟಿ ಕ್ಲೀನ್ ಚಿಟ್ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ನವೆಂಬರ್ 19ರಂದು ಕೈಗೆತ್ತಿಕೊಳ್ಳಲಿದೆ.

ಮೋದಿ ಸರ್ಕಾರದ ದೊಡ್ಡ ಹಗರಣ ರಫೆಲ್‌ ಅಲ್ಲ, ಬೆಳೆ ವಿಮೆ: ಆರೋಪ

ಗುಲ್ಬರ್ಗಾ ಸೊಸೈಟಿ ಹತ್ಯಾಕಾಂಡದಲ್ಲಿ ಮೃತಪಟ್ಟ 69 ಮಂದಿಯಲ್ಲಿ ಒಬ್ಬರಾದ ಕಾಂಗ್ರೆಸ್ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಎಸ್‌ಐಟಿಯ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿದ್ದಾರೆ.

ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್ ಮತ್ತು ದೀಪಕ್ ಗುಪ್ತಾ ಅವರನ್ನು ಒಳಗೊಂಡ ನ್ಯಾಯಪೀಠದ ಮುಂದೆ ಈ ಅರ್ಜಿ ಮಂಗಳವಾರ ವಿಚಾರಣೆಗೆ ಬಂದಿತು.

ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಎಸ್‌ಐಟಿಯನ್ನು ನಿಯೋಜಿಸಿತ್ತು. ಎಸ್‌ಐಟಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಹಿರಿಯ ಅಧಿಕಾರಿಗಳು ಮತ್ತು ಇತರೆ ರಾಜಕಾರಣಗಳು ದೋಷ ಮುಕ್ತ ಎಂದು ಹೇಳಿತ್ತು.

2002ರ ಗೋಧ್ರಾ ರೈಲಿಗೆ ಬೆಂಕಿಹಚ್ಚಿದ ಕೇಸ್,ಇಬ್ಬರಿಗೆ ಜೀವಾವಧಿ ಶಿಕ್ಷೆ

ಇದನ್ನು ಪ್ರಶ್ನಿಸಿ ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. 2017ರ ಅ.5ರಂದು ಗುಹರಾತ್ ಹೈಕೋರ್ಟ್ ಎಸ್‌ಐಟಿ ನಿರ್ಧಾರವನ್ನು ಎತ್ತಿಹಿಡಿದಿತ್ತು. ಹೀಗಾಗಿ ಝಾಕಿಯಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಅಮಿತ್ ಶಾ ನೀಡಿದ ಸಾಕ್ಷಿಗೆ ಬೆಲೆ, ಮಾಯಾ ನಿರ್ದೋಷಿ!

ಎಸ್‌ಐಟಿ ಕ್ಲೀನ್ ಚಿಟ್ ನಿರ್ಧಾರವನ್ನು ಮ್ಯಾಜಿಸ್ಟಿರಿಯಲ್ ಕೋರ್ಟ್ ಎತ್ತಿಹಿಡಿದಿತ್ತು. ಮೋದಿ ಅವರ ವಿರುದ್ಧ ಸೂಕ್ತವಾದ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂದು ಎಸ್‌ಐಟಿ ಹೇಳಿತ್ತು.

English summary
The Supreme Court has agreed to hear the plea challenging clean chit to Narendra Modi by SIT on Gujarat riot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X