ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಐಎಡಿಎಂಕೆಗೆ ಗಿಫ್ಟ್ : ಜಯಲಲಿತಾಗೆ ಜಾಮೀನು ಮಂಜೂರು

By Mahesh
|
Google Oneindia Kannada News

ನವದೆಹಲಿ, ಅ.17: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶುಕ್ರವಾರ ಶುಭ ಸುದ್ದಿ ಸಿಕ್ಕಿದೆ. ಮುಖ್ಯ ನ್ಯಾಯಮೂರ್ತಿ ಎಚ್ ಎಲ್ ದತ್ತು ಅವರಿದ್ದ ನ್ಯಾಯಪೀಠ ಜಯಲಲಿತಾ ಹಾಗೂ ಇತರೆ ಆರೋಪಿಗಳ ಜಾಮೀನು ಅರ್ಜಿಯನ್ನು ಪುರಸ್ಕರಿಸಿ ಜಾಮೀನು ಮಂಜೂರು ಮಾಡಿದೆ.

ಜಯಲಲಿತಾ ಅವರ ಪರ ಫಾಲಿ ನಾರಿಮನ್ ಅವರು ಮಂಡಿಸಿದ ವಾದವನ್ನು ಪುರಸ್ಕರಿಸಿದ ನ್ಯಾ. ದತ್ತು, ಮದನ್ ಬಿ ಲಾಕೂರ್ ಹಾಗೂ ನ್ಯಾ ಎ.ಕೆ ಶಿಕ್ರಿಹಾದ್ ಅವರಿದ್ದ ನ್ಯಾಯಪೀಠ 21 ದಿನಗಳ ಜೈಲು ವಾಸದ ನಂತರ ಬಿಡುಗಡೆ ಭಾಗ್ಯ ನೀಡಿದೆ.

ಆಲ್ ಇಂಡಿಯಾ ಅಣ್ಣಾ ಡಿಎಂಕೆ ಪಕ್ಷ ತನ್ನ 43ನೇ ಸ್ಥಾಪನಾ ದಿನಾಚರಣೆಯನ್ನು ಶುಕ್ರವಾರ ಆಚರಿಸಿಕೊಳ್ಳುತ್ತಿದೆ. 'ಅಮ್ಮ' ನಿಗೆ ಜಾಮೀನು ಸಿಗದಿದ್ದರೆ ಹುಟ್ಟುಹಬ್ಬ ಆಚರಣೆ ರದ್ದು ಮಾಡುವುದಾಗಿ ಕಾರ್ಯಕರ್ತರು ಹೇಳಿದ್ದರು. ಅದರೆ, ಈಗ ಎಐಎಡಿಎಂಕೆಗೆ ಬರ್ಥ್ ಡೇ ಗಿಫ್ಟ್ ಸಿಕ್ಕಿರುವುದರಿಂದ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿದೆ. [ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]

Supreme court grants bail to Jayalalithaa and others in DA case

ಸುಪ್ರೀಂಕೋರ್ಟ್ ತೀರ್ಪಿನ ಸಾರಾಂಶ:
* ಕರ್ನಾಟಕ ಹೈಕೋರ್ಟಿಗೆ ಜಯಾ ಪರ ವಕೀಲರು ಮೇಲ್ಮನವಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಲು ಡಿಸೆಂಬರ್ 18 ಕಡೆಯ ದಿನಾಂಕ.
* 35 ಸಾವಿರ ಪುಟಗಳ ದಾಖಲೆಯನ್ನು ಪುಸ್ತಕ ರೂಪದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು.
* ವಾದ ಮಂಡಿಸಿದ ಮತ್ತು ತೀರ್ಪು ನೀಡಿದ ಯಾವುದೇ ನ್ಯಾಯವಾದಿಗಳು ಅಥವಾ ನ್ಯಾಯಾಧೀಶರಿಗೆ ಅಗೌರವವಾಗುವಂತಹ ಘಟನೆಗಳು ಆಗಬಾರದು.
* ಡಿ.18ರ ನಂತರ ಒಂದು ದಿನ ತಡವಾದರೂ ಅಂದು ಜಾಮೀನು ರದ್ದಾಗುತ್ತದೆ. ಈ ಷರತ್ತುಗಳನ್ನು ತಪ್ಪಿದ್ದಲ್ಲಿ ಜೈಲುಶಿಕ್ಷೆ ಜಾರಿಯಾಗಲಿದೆ.
* ಡಿ.18ರ ತನಕ ಜಯಲಲಿತಾ ಅವರು ಮನೆಯಲ್ಲೇ ಉಳಿಯಬೇಕು. ಯಾವುದೇ ಕಾರ್ಯಕರ್ತರು, ಪಕ್ಷದ ಮುಖಂಡರೊಡನೆ ಸಭೆ, ಚರ್ಚೆ ನಡೆಸುವಂತಿಲ್ಲ. [ಜಯಲಲಿತಾ ಅವರಿಗೆ ಶಿಕ್ಷೆ ಆಗಿದ್ದೇಕೆ?]
* ಜಯಲಲಿತಾ ಅವರ ಅಭಿಮಾನಿಗಳು ಶಾಂತಿ ಕಾಪಾಡಿಕೊಳ್ಳಬೇಕು. ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟರೇ ನೀವೆ ಹೊಣೆಗಾರರಾಗುತ್ತೀರಿ.
* ಜಯಾ ಅವರ ಅನಾರೋಗ್ಯ ಹಾಗೂ ನಿರಂತರ ಚಿಕಿತ್ಸೆ ಪಡೆಯಬೇಕಾದ ಸಮಸ್ಯೆ ಇರುವುದರಿಂದ ಗೃಹ ಬಂಧನಕ್ಕೆ ಸಮಾನವಾದ ಷರತ್ತುಗಳನ್ನು ವಿಧಿಸಿ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.
* ಬೇರೆ ಬೇರೆ ವ್ಯಕ್ತಿಗಳಿಗೆ ಜಾಮೀನು ಮಂಜೂರಾಗಿರುವುದನ್ನು ಉಲ್ಲೇಖಿಸಿದ ನಾರಿಮನ್, ಜಯಾ ಅವರು ಮಹಿಳೆಯಾಗಿದ್ದು, ಎಐಎಡಿಎಂಕೆ ಕಾರ್ಯಕರ್ತರನ್ನು ನಿಯಂತ್ರಿಸಲು ಜಯಾ ಅವರಿಗೆ ಜಾಮೀನು ನೀಡುವುದೇ ಪರಿಹಾರ ಎಂದು ವಾದಿಸಿದರು.
* ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಾ ವಿರುದ್ಧ ನಾಲ್ಕು ವರ್ಷ ಶಿಕ್ಷೆ ಹಾಗೂ 100 ಕೊಟಿ ರು ದಂಡ ಆದೇಶ ನೀಡಿದ್ದ ಸಿಬಿಐ ವಿಶೇಷ ನ್ಯಾಯಾಲಯ ಆದೇಶವನ್ನು ಸುಪ್ರೀಂಕೋರ್ಟ್ ಅಮಾನತ್ತಿನಲ್ಲಿಟ್ಟಿದೆ.
* ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ ಅವರನ್ನು ದೂರುದಾರನಾಗಿ ಒಪ್ಪಿಕೊಂಡ ದತ್ತು ಅವರಿದ್ದ ನ್ಯಾಯಪೀಠ ವಾದ ಆಲಿಸಿತು. ಜಾಮೀನು ರದ್ದು ಮಾಡಿದ್ದ ನ್ಯಾ ಕುನ್ಹಾ ಕನ್ನಡಿಗರು ಎಂದು ಜಯಾ ಬೆಂಬಲಿಗರು ಪ್ರತಿಭಟನೆ ಮಾಡಿದ್ದಾರೆ ಎಂದು ಸ್ವಾಮಿ ಮಂಡಿಸಿದ ವಾದ ಆಲಿಸಿದ ನ್ಯಾ. ದತ್ತು ಅವರು 'ನಾನು ಕೂಡಾ ಕನ್ನಡಿಗ..' ಎಂದು ಹೇಳಿದರು. [ಆದೇಶದ ಪ್ರತಿ ಓದಿ]

ಕೇಸ್ ಹಿಸ್ಟರಿ: ಭ್ರಷ್ಟಾಚಾರ ಪ್ರಕರಣ ತುಂಬಾ ಗಂಭೀರವಾಗಿದ್ದು, ಈ ಸಂದರ್ಭದಲ್ಲಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಲು ಸಾಧ್ಯವಿಲ್ಲ' ಎಂದು ಕಾರಣ ಹೇಳಿ ಕರ್ನಾಟಕ ಹೈಕೋರ್ಟ್ ನ್ಯಾ. ಎ.ವಿ ಚಂದ್ರಶೇಖರ್ ಅವರು ಅ.7ರಂದು ಅಕ್ರಮ ಅಸ್ತಿ ಪ್ರಕರಣದಲ್ಲಿ ಜಯಲಲಿತಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು. ಜೊತೆಗೆ ಈ ಪ್ರಕರಣದಲ್ಲಿ ವಿಶೇಷ ಕೋರ್ಟ್ ನೀಡಿರುವ ಶಿಕ್ಷೆ ಪ್ರಮಾಣ ಆದೇಶ ರದ್ದು ಮಾಡಲು ನಿರಾಕರಿಸಿದ್ದರು.

ಜಗನ್ ಮೋಹನ್ ರೆಡ್ಡಿ ಕೇಸ್, ಅಸಾರಾಮ್ ಬಾಪು ಕೇಸ್ ನಂತರ ಜಯಾ ಕೇಸಿನಲ್ಲಿ ಜಾಮೀನು ಕೊಡಿಸಲು ಸಾಧ್ಯವಾಗದ ಕಾರಣ ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರು ಸುಪ್ರೀಂಕೋರ್ಟಿನಲ್ಲಿ ಜಯಾ ಪರ ವಾದಿಸಲು ಮುಂದಾಗಿಲ್ಲ. ಹೀಗಾಗಿ ಈ ಹಿಂದೆ ಜಯಾ ಪರ ವಾದಿಸಿದ್ದ ಹರೀಶ್ ಸಾಳ್ವೆ ಅವರನ್ನೇ ಕರೆ ತರಲಾಗುತ್ತದೆ ಎನ್ನಲಾಗಿತ್ತು. ಅದರೆ, ನ್ಯಾ ಫಾಲಿ ನಾರಿಮನ್ ವಾದ ಮಂಡಿಸುವುದು ಖಾತ್ರಿಯಾಗಿದೆ. [ಸೋಲೊಪ್ಪಿಕೊಂಡ ರಾಮ್?]

English summary
The Supreme Court today(Oct.17) granted bail to former Tamil Nadu chief minister Jayalalithaa and Jaya's close aide Sasikala and her relatives VN Sudhakaran, who is disowned foster-son of Jaya, and Ilavarasi. It is AIADMK's 43rd Foundation Day on Friday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X