• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

PM ಭದ್ರತಾ ಲೋಪ: ಏಕಪಕ್ಷೀಯ ವಿಚಾರಣೆ ಇಲ್ಲ- ಸುಪ್ರಿಂ

|
Google Oneindia Kannada News

ನವದೆಹಲಿ ಜನವರಿ 12: ಕಳೆದ ವಾರ ಪಂಜಾಬ್‌ನ ಫ್ಲೈ ಓವರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ 20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದ ಭದ್ರತಾ ಲೋಪದ ತನಿಖೆಯನ್ನು ನಿವೃತ್ತ ನ್ಯಾಯಮೂರ್ತಿ ಮಲ್ಹೋತ್ರಾ ಅವರ ನೇತೃತ್ವದಲ್ಲಿ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಇಂದು ತಿಳಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಪಂಜಾಬ್ ಪೊಲೀಸರು ವಿಚಾರಣೆಯ ಭಾಗವಾಗಲಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

"ಈ ಪ್ರಶ್ನೆಗಳನ್ನು ಯಾವುದೇ ಏಕಪಕ್ಷೀಯ ವಿಚಾರಣೆಯ ಮೇಲೆ ಬಿಡಲಾಗುವುದಿಲ್ಲ. ನಮಗೆ ಸ್ವತಂತ್ರ ತನಿಖೆಯ ಅಗತ್ಯವಿದೆ," ಎಂದು ಸುಪ್ರೀಂ ಕೋರ್ಟ್ ಹೇಳಿದೆ. ತನಿಖಾ ಸಮಿತಿಯು ತನ್ನ ವರದಿಯನ್ನು ಶೀಘ್ರದಲ್ಲೇ ಸಲ್ಲಿಸುತ್ತದೆ ಎಂದು ಹೇಳಿದೆ. ಸಮಿತಿಯು PM ಭದ್ರತಾ ಉಲ್ಲಂಘನೆಗೆ ಕಾರಣವೇನು? ಯಾರು ಹೊಣೆಗಾರರು ಮತ್ತು ಭವಿಷ್ಯದಲ್ಲಿ ಇಂತಹ ಲೋಪಗಳನ್ನು ತಡೆಗಟ್ಟಲು ಯಾವ ರಕ್ಷಣಾತ್ಮಕ ಕ್ರಮಗಳ ಅಗತ್ಯವಿದೆ ಎಂಬುದರ ಕುರಿತು ತನಿಖೆ ನಡೆಸುತ್ತದೆ ಮತ್ತು ಅದರ ವರದಿಯನ್ನು ಆದಷ್ಟು ಬೇಗ ಸಲ್ಲಿಸುತ್ತದೆ. ಎನ್‌ಐಎ ಮಹಾನಿರ್ದೇಶಕರು, ಚಂಡೀಗಢ ಪೊಲೀಸ್ ಮುಖ್ಯಸ್ಥರು, ಪಂಜಾಬ್ ಪೊಲೀಸ್ (ಭದ್ರತೆ) ಹೆಚ್ಚುವರಿ ಮಹಾನಿರ್ದೇಶಕರು ಮತ್ತು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ವಿಚಾರಣೆಯ ಸದಸ್ಯರಾಗಿರುತ್ತಾರೆ ಎಂದು ಕೋರ್ಟ್ ಹೇಳಿದೆ.

ಕಳೆದ ಬುಧವಾರದಂದು ರ್ಯಾಲಿಗೆ ತೆರಳುತ್ತಿದ್ದ ಪ್ರಧಾನಿ ಮೋದಿಯವರು ಪಂಜಾಬ್‌ನ ಬಟಿಂಡಾದ ಫ್ಲೈಓವರ್‌ನಲ್ಲಿ ಪ್ರತಿಭಟನಾ ರೈತರ ತಡೆಯಿಂದ ಸುಮಾರು 20 ನಿಮಿಷಗಳ ಕಾಲ ಸಿಕ್ಕಿಹಾಕಿಕೊಂಡರು. ಇದನ್ನು ಪಂಜಾಬ್ ಸರ್ಕಾರದ ಭದ್ರತಾ ಲೋಪವೆಂದು ಆಡಳಿತ ಪಕ್ಷ ದೂಷಿಸಿದೆ. ಈ ವಿಚಾರ ಭಾರೀ ರಾಜಕೀಯ ಕದನಕ್ಕೆ ಕಾರಣವಾಗಿದೆ. ಸದ್ಯ ಈ ವಿಚಾರ ಸುಪ್ರೀಂ ಕೋರ್ಟ್ ವಿಚಾರಣೆಗೊಳಪಟ್ಟಿದೆ. ಫೆಬ್ರವರಿ 14 ರ ಪಂಜಾಬ್ ಚುನಾವಣೆಯ ತೀವ್ರ ಪ್ರಚಾರದ ಮಧ್ಯದಲ್ಲಿ ಈ ಘಟನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ರಾಜಕೀಯ ಕದನವನ್ನು ಸೃಷ್ಟಿಸಿದೆ. ಪ್ರಧಾನಿಯವರ 'ಭದ್ರತಾ ಲೋಪ' ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜನವರಿ 10 ನಡೆಸಿತ್ತು. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಕೈಗೊಂಡ ಭದ್ರತಾ ಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸುರಕ್ಷಿತವಾಗಿರಿಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಸುಪ್ರೀಂಕೋರ್ಟ್ ಶುಕ್ರವಾರ ನಿರ್ದೇಶನ ನೀಡಿತ್ತು.

ಇದನ್ನು 'ಲಾಯರ್ಸ್​ ವಾಯ್ಸ್​' ಎಂಬ ಸಂಘಟನೆ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತ್ತು.

ಈ ಹಿಂದೆ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಬಿಜೆಪಿ ಆಡಳಿತದಲ್ಲಿರುವ ಕೇಂದ್ರ ಮತ್ತು ಪಂಜಾಬ್‌ನ ಕಾಂಗ್ರೆಸ್ ಸರ್ಕಾರದ ವಿಚಾರಣೆ ನಡೆಸಿತು. ವಿಚಾರಣೆಯಲ್ಲಿ ಪ್ರಧಾನಿ ಮೋದು ಅವರ ಆಗಮನದ ವೇಳೆ ಸಂಪೂರ್ಣ ಭದ್ರತಾ ವೈಫಲ್ಯವಾಗಿದೆ ಎಂದು ಕೇಂದ್ರವು ವಾದದ ಸಮಯದಲ್ಲಿ ನ್ಯಾಯಾಲಯಕ್ಕೆ ತಿಳಿಸಿದೆ. ಈ ಮಾರ್ಗದಲ್ಲಿ ಪ್ರತಿಭಟನಾಕಾರರು ಇದ್ದಾರೆ ಎಂಬ ಬಗ್ಗೆ ರಾಜ್ಯ ಸರ್ಕಾರ ಪ್ರಧಾನಿಯವರ ಭದ್ರತಾ ಪಡೆಗೆ ಯಾವುದೇ ಮಾಹಿತಿ ನೀಡಿಲ್ಲ ಎಂದರು.

Supreme Court Forms Panel On PM Security Breach
   Dravid ಹಾಗು Virat ಇಬ್ಬರಿಗೂ ಈಗ Pantರದ್ದೇ ಚಿಂತೆ | Oneindia Kannada

   ಆದರೆ ಪಂಜಾಬ್ ಸರ್ಕಾರ ಈ ಆರೋಪವನ್ನು ತಳ್ಳಿ ಹಾಕಿದೆ. ಪ್ರಧಾನಮಂತ್ರಿಯವರ ಆಗಮನದ ವೇಳೆ ಕೊನೆಯ ಕ್ಷಣದಲ್ಲಿ ವಿಮಾನ ಬಿಟ್ಟು ರಸ್ತೆ ಮೂಲಕ ಆಗಮಿಸುವ ಬದಲಾವಣೆಯಾಗಿದೆ. ಇದರಲ್ಲಿ ತನ್ನ ಪಾತ್ರವಿಲ್ಲ ಎಂದು ಪಂಜಾಬ್ ಸರ್ಕಾರ ಹೇಳಿದೆ. ಅವರು ಮೂಲತಃ ಹೆಲಿಕಾಪ್ಟರ್ ಮೂಲಕ ಸ್ಥಳಕ್ಕೆ ಆಗಮಿಸುತ್ತಿದ್ದರು. ಆದರೆ ಹವಾಮಾನ ಬದಲಾವಣೆ ಕಾರಣ ರಸ್ತೆ ಮೂಲಕ ಚಲಿಸಲು ನಿರ್ಧರಿಸಿದರು ಎಂದು ಪಾಂಜಾಬ್ ಸರ್ಕಾರ ಹೇಳಿಕೊಂಡಿದೆ. ಪ್ರಧಾನಿ ಮೋದಿ ಉದ್ದೇಶಿಸಲಿರುವ ರ್ಯಾಲಿಯಲ್ಲಿ ಜನಸಮೂಹದ ಮುಜುಗರವನ್ನು ಮುಚ್ಚಿಕೊಳ್ಳಲು ಬಿಜೆಪಿ ಭದ್ರತಾ ಉಲ್ಲಂಘನೆಯ ಆರೋಪವನ್ನು ಬಳಸಿಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

   English summary
   Investigations into the security breach that left Prime Minister Narendra Modi stuck on a flyover in Punjab for 20 minutes last week will be headed by a retired judge, Justice Indu Malhotra, the Supreme Court said today.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion