ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರುಷರ ಮದುವೆ ಕನಿಷ್ಠ ವಯಸ್ಸು ಇಳಿಕೆ ಅರ್ಜಿ ವಜಾ, 25 ಸಾವಿರ ದಂಡ

|
Google Oneindia Kannada News

Recommended Video

ಪುರುಷರ ಮದುವೆ ಕನಿಷ್ಠ ವಯಸ್ಸು ಇಳಿಕೆ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ | Oneindia Kannada

ನವದೆಹಲಿ, ಅಕ್ಟೋಬರ್ 22: ಪುರುಷರಿಗೆ ಮದುವೆಗಾಗಿ ಕಾನೂನು ಪ್ರಕಾರ ನಿಗದಿ ಆಗಿರುವ ಕನಿಷ್ಠ ವಯಸ್ಸನ್ನು ಕಡಿತಗೊಳಿಸಬೇಕು ಎಂದು ಹಾಕಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿದೆ. ಪುರುಷರಿಗೆ ಮದುವೆಗೆ ಕನಿಷ್ಠ 21 ವರ್ಷ ಆಗಿರಬೇಕು ಎಂಬುದು ಸದ್ಯಕ್ಕೆ ಇರುವ ಕಾನೂನು.

ಮಹಿಳೆಯರಿಗೆ ಇರುವಂತೆಯೇ ಪುರುಷರಿಗೆ ಮದುವೆ ಕನಿಷ್ಠ ವಯಸ್ಸನ್ನು 18ಕ್ಕೆ ಇಳಿಸಬೇಕು ಎಂದು ಅರ್ಜಿ ಹಾಕಲಾಗಿತ್ತು. ಇಂಥ ಅರ್ಜಿ ಹಾಕಿದ್ದಕ್ಕಾಗಿ ವಕೀಲರಿಗೆ 25 ಸಾವಿರ ರುಪಾಯಿ ದಂಡ ವಿಧಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ಎಸ್.ಕೆ.ಕೌಲ್ ಅವರನ್ನು ಒಳಗೊಂಡ ಪೀಠವು ಅರ್ಜಿಯನ್ನು ವಜಾಗೊಳಿಸಿದೆ.

ಗಂಡಿನ ಮದುವೆ ವಯಸ್ಸು 18ಕ್ಕೆ ಇಳಿಸಿ: ಕಾನೂನು ಆಯೋಗ ಕೇಂದ್ರಕ್ಕೆ ಶಿಫಾರಸ್ಸುಗಂಡಿನ ಮದುವೆ ವಯಸ್ಸು 18ಕ್ಕೆ ಇಳಿಸಿ: ಕಾನೂನು ಆಯೋಗ ಕೇಂದ್ರಕ್ಕೆ ಶಿಫಾರಸ್ಸು

ವಕೀಲ ಅಶೋಕ್ ಪಾಂಡೆ ಹಾಕಿದ್ದ ಈ ಅರ್ಜಿಯಲ್ಲಿ 'ಸಾರ್ವಜನಿಕ ಹಿತಾಸಕ್ತಿಯಿಲ್ಲ' ಎಂದು ಹೇಳಲಾಗಿದೆ. ಭಾರತದಲ್ಲಿ ಮತದಾನ ಮಾಡಲು ಕನಿಷ್ಠ ವಯಸ್ಸು ಹದಿನೆಂಟು. ಆದರೆ ಮದುವೆಗೆ ಇಪ್ಪತ್ತೊಂದು ವರ್ಷ ಆಗಿರಲೇ ಬೇಕು ಎಂಬುದು ಆಕ್ಷೇಪಾರ್ಹವಾದ ಅಂಶ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

Supreme Court dismisses PIL for lowering marriageable age of male

ಯಾರಾದರೂ ಹದಿನೆಂಟು ವರ್ಷದ ವ್ಯಕ್ತಿ ಇಂಥ ವಿಚಾರವಾಗಿ ನಮ್ಮ ಬಳಿ ಅರ್ಜಿ ಹಾಕಿಕೊಂಡರೆ ಆಗ ನೀವು (ಅಶೋಕ್ ಪಾಂಡೆ) ಠೇವಣಿ ಇಟ್ಟ ಹಣವನ್ನು ಆತನಿಗೆ ನೀಡುತ್ತೇವೆ ಎಂದು ಪೀಠ ಹೇಳಿದೆ. ಇಂಥ ಅರ್ಜಿ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸುವುದಿಲ್ಲ ಮತ್ತು ಅಂಥ ವ್ಯಕ್ತಿಗಳಿದ್ದರೆ ಕೋರ್ಟ್ ಗೆ ಬರಬಹುದು ಎಂದು ಹೇಳಲಾಗಿದೆ.

19 ವರ್ಷದ ಯುವತಿ ಜತೆಗೆ ಇಷ್ಟವಿರದ ಮದುವೆ ಮಾಡಿಸಿದರೆಂದು ಯುವಕ ದೂರು19 ವರ್ಷದ ಯುವತಿ ಜತೆಗೆ ಇಷ್ಟವಿರದ ಮದುವೆ ಮಾಡಿಸಿದರೆಂದು ಯುವಕ ದೂರು

ವಿವಾಹ ಕಾಯ್ದೆ ಹಾಗೂ ಹಿಂದೂ ವಿವಾಹ ಕಾಯ್ದೆ ಪುರುಷರಿಗೆ ಮದುವೆಗೆ ಕನಿಷ್ಠ ವಯಸ್ಸಿನ ಬಗ್ಗೆ ತಿಳಿಸುತ್ತದೆ. ಈಗಿರುವ ಕಾನೂನು ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

ಮಕ್ಕಳ ಸಹಾಯವಾಣಿಗೆ ಕರೆ, ತಪ್ಪಿತು ಬಾಲ್ಯ ವಿವಾಹಮಕ್ಕಳ ಸಹಾಯವಾಣಿಗೆ ಕರೆ, ತಪ್ಪಿತು ಬಾಲ್ಯ ವಿವಾಹ

ಹದಿನೆಂಟನೇ ವಯಸ್ಸಿಗೆ ಎಲ್ಲ ಪುರುಷ ಹಾಗೂ ಮಹಿಳೆಯರು ಮತದಾನದ ಹಕ್ಕು ಪಡೆದು, ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದೇ ವಯಸ್ಸಿಗೆ ಯಾವುದೇ ವ್ಯಕ್ತಿಯನ್ನು 'ಬಾಲಾಪರಾಧಿ' ಎಂದು ಪರಿಗಣಿಸುವುದಿಲ್ಲ ಎಂದು ಅಶೋಕ್ ಪಾಂಡೆ ತಮ್ಮ ಅರ್ಜಿಯಲ್ಲಿ ಹೇಳಿದ್ದರು.

English summary
The Supreme Court on Monday dismissed a PIL seeking that the legal marriageable age for men be brought down from 21 to 18 years, as for women, and imposed a fine of Rs 25,000 on a lawyer for filing such a plea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X