ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದಾತ್ಮಕ ತೀರ್ಪುಗಳನ್ನು ನೀಡಿದ ನ್ಯಾಯಮೂರ್ತಿಗೆ ಹಿನ್ನಡೆ: ಮಾನ್ಯತೆ ಶಿಫಾರಸು ವಾಪಸ್

|
Google Oneindia Kannada News

ನವದೆಹಲಿ, ಜನವರಿ 30: ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಲವು ದಿನಗಳಲ್ಲಿ ಎರಡು ವಿವಾದಾತ್ಮಕ ತೀರ್ಪುಗಳನ್ನು ನೀಡಿರುವ ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಪುಷ್ಪಾ ಗಣೇದಿವಾಲ ಅವರ ಕಾಯಮ್ಮಾತಿ ಮಾನ್ಯತೆಯ ಶಿಫಾರಸನ್ನು ಸುಪ್ರೀಂಕೋರ್ಟ್ ಕೊಲಿಜಿಯಂ ಹಿಂದಕ್ಕೆ ಪಡೆದುಕೊಂಡಿದೆ. ನ್ಯಾಯಾಂಗ ಇತಿಹಾಸದಲ್ಲಿ ಇದು ಅಪರೂಪದ ವಿದ್ಯಮಾನವಾಗಿದೆ.

ಅಂತಹ ಪ್ರಕರಣದಲ್ಲಿ ಮತ್ತಷ್ಟು ಅನುಭವಗಳು ಅಗತ್ಯವಿರುವುದರಿಂದ ಅದರ ಆಧಾರದಲ್ಲಿ ಅವರಿಗೆ ಶಾಶ್ವತ ಮಾನ್ಯತೆಯನ್ನು ನೀಡದೆ ಇರಲು ನಿರ್ಧರಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಮೂಲಗಳು ತಿಳಿಸಿವೆ.

ಪ್ಯಾಂಟ್ ಜಿಪ್ ತೆರೆಯುವುದು ಪೋಕ್ಸೋ ಅಡಿ 'ಲೈಂಗಿಕ ದೌರ್ಜನ್ಯ'ವಲ್ಲ: ಮತ್ತೊಂದು ವಿವಾದಾತ್ಮಕ ತೀರ್ಪುಪ್ಯಾಂಟ್ ಜಿಪ್ ತೆರೆಯುವುದು ಪೋಕ್ಸೋ ಅಡಿ 'ಲೈಂಗಿಕ ದೌರ್ಜನ್ಯ'ವಲ್ಲ: ಮತ್ತೊಂದು ವಿವಾದಾತ್ಮಕ ತೀರ್ಪು

'ಅವರ ವಿರುದ್ಧ ವೈಯಕ್ತಿಕ ಅಸಮಾಧಾನ ಏನೂ ಇಲ್ಲ. ಅವರಿಗೆ ಮತ್ತಷ್ಟು ಅನುಭವ ಬೇಕಾಗಿದೆ. ಅವರು ವಕೀಲರಾಗಿದ್ದಾಗ ಬಹುಶಃ ಈ ಮಾದರಿಯ ಪ್ರಕರಣಗಳನ್ನು ನಿಭಾಯಿಸಿದೆ ಇರಬಹುದು. ಅವರಿಗೆ ಅನುಭವ ಮತ್ತು ತರಬೇತಿಯ ಅಗತ್ಯವಿದೆ' ಎಂದು ಹೇಳಲಾಗಿದೆ.

 Supreme Court Collegium Withdrawn Recommendation For Bombay HC Judge Pushpa Ganediwala

ಕಾಯಂ ನ್ಯಾಯಾಧೀಶರ ನೇಮಕ ಅಥವಾ ನ್ಯಾಯಾಧೀಶರನ್ನು ಕಾಯಂಗೊಳಿಸುವ ಪ್ರಕ್ರಿಯೆ ಇದಾಗಿದ್ದು, ಕೊಲಿಜಿಯಂ ತನ್ನ ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತದೆ. ಸರ್ಕಾರ ಬಳಿಕ ಅದನ್ನು ಅನುಮೋದಿಸುತ್ತದೆ. ಆದರೆ ಕೆಲವೊಮ್ಮೆ ಶಿಫಾರಸುಗಳನ್ನು ವಿವಿಧ ಪ್ರಶ್ನೆಗಳೊಂದಿಗೆ ಕೊಲಿಜಿಯಂಗೆ ವಾಪಸ್ ಕಳುಹಿಸಲಾಗುತ್ತದೆ.

ನ್ಯಾಯಮೂರ್ತಿ ಪುಷ್ಪಾ ಗಣೇದಿವಾಲ ಅವರ ಹೆಸರನ್ನು ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠದ ಕಾಯಂ ನ್ಯಾಯಮೂರ್ತಿಯನ್ನಾಗಿ ದೃಢಪಡಿಸಲು ಸುಪ್ರೀಂಕೋರ್ಟ್ ಕೊಲಿಜಿಯಂ ಜನವರಿ 20ರಂದು ಶಿಫಾರಸು ಮಾಡಿತ್ತು. ಆದರೆ ಪುಷ್ಪಾ ಅವರು ಪೋಕ್ಸೋ ಪ್ರಕರಣಗಳಲ್ಲಿ ಇತ್ತೀಚೆಗೆ ನೀಡಿದ ಎರಡು ತೀರ್ಪುಗಳು ತೀವ್ರ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದ್ದವು.

ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ವಿವಾದ ಸೃಷ್ಟಿಸಿದ ಬಾಂಬೆ ಹೈಕೋರ್ಟ್ ತೀರ್ಪುಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ವಿವಾದ ಸೃಷ್ಟಿಸಿದ ಬಾಂಬೆ ಹೈಕೋರ್ಟ್ ತೀರ್ಪು

ಜನವರಿ 19ರಂದು ನೀಡಿದ್ದ ತೀರ್ಪಿನಲ್ಲಿ ಅವರು, ಅಪ್ರಾಪ್ತೆಯ ಎದೆಯನ್ನು ಚರ್ಮದಿಂದ ಚರ್ಮಕ್ಕೆ ಸ್ಪರ್ಶವಾಗದೆ ಇದ್ದರೆ, ಅಂದರೆ ಬಟ್ಟೆಯ ಮೇಲಿನಿಂದ ಸ್ಪರ್ಶಿಸಿದರೆ ಅದು ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯವಾಗದು ಎಂದಿದ್ದರು. ಈ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿತ್ತು. ಗುರುವಾರ ಮತ್ತೊಂದು ಆದೇಶದಲ್ಲಿ ಅವರು, ಸಂತ್ರಸ್ತೆಯ ಕೈಗಳನ್ನು ಹಿಡಿದುಕೊಳ್ಳುವುದು ಅಥವಾ ಆಕೆಯೊಂದಿಗೆ ತನ್ನ ಪ್ಯಾಂಟ್‌ನ ಜಿಪ್‌ ತೆರೆದಿರುವುದು ಲೈಂಗಿಕ ದೌರ್ಜನ್ಯದ ವ್ಯಾಖ್ಯಾನದಡಿ ಬರುವುದಿಲ್ಲ ಎಂದು ಆರೋಪಿಯನ್ನು ಖುಲಾಸೆಗೊಳಿಸಿದ್ದರು.

English summary
The Supreme Court collegium has withdrawn recommendation for permanent status of Bombay HC Nagpur bench judge Pushpa Ganediwala after controversial orders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X