ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ದೇಶಾದ್ಯಂತ ಕೊವಿಡ್ ಪರೀಕ್ಷೆ ಬೆಲೆಯಲ್ಲಿ ಏಕರೂಪತೆ ಇರಲಿ'- ಸುಪ್ರೀಂಕೋರ್ಟ್

|
Google Oneindia Kannada News

ದೆಹಲಿ, ಜೂನ್ 19: ದೇಶದಾದ್ಯಂತ ಕೊರೊನಾ ವೈರಸ್ ಪರೀಕ್ಷೆಯ ಬೆಲೆಯಲ್ಲಿ ಏಕರೂಪತೆ ಕಾಪಾಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಹಲವು ರಾಜ್ಯಗಳಲ್ಲಿ ಕೊವಿಡ್ ಪರೀಕ್ಷೆಯ ಬೆಲೆಯಲ್ಲಿ ವ್ಯತ್ಯಾಸವಾಗಿದೆ. ಖಾಸಗಿ ಪ್ರಯೋಗಾಲಯಗಳಲ್ಲಿ ಕೊರೊನಾ ಪರೀಕ್ಷೆ ಮಾಡಲು ಐಸಿಎಂಆರ್ ಗರಿಷ್ಠ 4500 ರೂಪಾಯಿ ಬೆಲೆ ನಿಗದಿ ಮಾಡಲಾಗಿತ್ತು. ಆದ್ರೀಗ, ಕೆಲವು ರಾಜ್ಯಗಳು ಕೊವಿಡ್ ಪರೀಕ್ಷೆಯ ಬೆಲೆ ಇಳಿಕೆ ಮಾಡಿದೆ.

ಕೊರೊನಾ ಪರೀಕ್ಷೆ ಬೆಲೆ ಇಳಿಕೆ ಮಾಡಿದ ಮಹಾರಾಷ್ಟ್ರ ಸರ್ಕಾರ ಕೊರೊನಾ ಪರೀಕ್ಷೆ ಬೆಲೆ ಇಳಿಕೆ ಮಾಡಿದ ಮಹಾರಾಷ್ಟ್ರ ಸರ್ಕಾರ

ಮಹಾರಾಷ್ಟ್ರ, ತೆಲಂಗಾಣ, ಉತ್ತರ ಪ್ರದೇಶ ಸೇರಿದಂತೆ ಇನ್ನು ಕೆಲವು ರಾಜ್ಯಗಳು 4500 ರೂಪಾಯಿ ಬದಲಿಗೆ 2200 ರೂಪಾಯಿಗೆ ಬೆಲೆ ಇಳಿಕೆ ಮಾಡಿದೆ. ಇದು ಖಾಸಗಿ ಆಸ್ಪತ್ರೆಗಳ ವಿರೋಧಕ್ಕೆ ಕಾರಣವಾಗಿದೆ.

Maintain Uniformity Price For Covid Tests Across The Country Says Supreme Court

ಈ ಕುರಿತು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್ ಕೆ ಕೌಲ್ ಮತ್ತು ಎಂ ಆರ್ ಷಾ ಅವರನ್ನೊಳಗೊಂಡ ನ್ಯಾಯಪೀಠ ಪ್ರತಿಕ್ರಿಯಿಸಿದ್ದು 'ಎಲ್ಲ ರಾಜ್ಯಗಳಲ್ಲಿ ಕೊರೊನಾ ಪರೀಕ್ಷೆಗೆ ಏಕರೂಪತೆ ಬೆಲೆ ಇರುವಂತೆ ನೋಡಿಕೊಳ್ಳಿ' ಎಂದು ಕೇಂದ್ರಕ್ಕೆ ಸಲಹೆ ನೀಡಿದೆ. ''ಕೇಂದ್ರ ಸರ್ಕಾರ ಬಗೆಹರಿಸಬೇಕಾದ ವಿಷಯದಲ್ಲಿ ಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ'' ಎಂದು ಹೇಳಿದೆ.

ಇನ್ನು ರೋಗಿಗಳ ಆರೈಕೆಯ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಆಸ್ಪತ್ರೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲು ಆದೇಶ ಹೊರಡಿಸುವುದನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮತ್ತೊಂದೆಡೆ ಕರ್ನಾಟಕದಲ್ಲೂ ಕೊರೊನಾ ವೈರಸ್ ಪರೀಕ್ಷೆಗೆ ಸಂಬಂಧಿಸಿದಂತೆ ನೂತನ ದರ ನಿಗದಿ ಮಾಡಲು ರಾಜ್ಯ ಸರ್ಕಾರ ಚಿಂತಿಸಿದೆ. ಈ ಬಗ್ಗೆ ರಾಜ್ಯ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಮಾಹಿತಿ ನೀಡಿದ್ದಾರೆ.

English summary
Reasonable rates have to be fixed for COVID tests. There must be uniformity in this regard across the country - supreme court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X