• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೆಹಬೂಬಾ ಮುಫ್ತಿಯನ್ನು ಎಷ್ಟು ದಿನ ಬಂಧಿಸಿಡುತ್ತೀರಿ?: ಸುಪ್ರೀಂಕೋರ್ಟ್ ಪ್ರಶ್ನೆ

|

ನವದೆಹಲಿ, ಸೆಪ್ಟೆಂಬರ್ 29: 'ಮೆಹಬೂಬಾ ಮುಫ್ತಿ ಅವರನ್ನು ಎಷ್ಟು ದಿನ ಹೀಗೆ ವಶದಲ್ಲಿ ಇರಿಸಿಕೊಂಡಿರಲು ಸಾಧ್ಯ?' ಎಂದು ಕೇಂದ್ರ ಸರ್ಕಾರ ಹಾಗೂ ಜಮ್ಮು ಮತ್ತು ಕಾಶ್ಮೀರ ಆಡಳಿತವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.

ಕಠಿಣವಾದ ಸಾರ್ವಜನಿಕ ಸುರಕ್ಷತಾ ಕಾಯ್ದೆಯ (ಪಿಎಸ್‌ಎ) ಅಡಿ ಮೆಹಬೂಬಾ ಮುಫ್ತಿ ಅವರನ್ನು ಬಂಧನದಲ್ಲಿ ಇರಿಸಿರುವುದನ್ನು ಪ್ರಶ್ನಿಸಿ ಅವರ ಮಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿದ ಸುಪ್ರೀಂಕೋರ್ಟ್, ಇದರ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದೆ.

''ಮನೆಯೊಳಗೆ ನುಗ್ಗಿ ಹೊಡೆಯುವ ತಂತ್ರ ಚೀನಾದಿಂದ ಹೈಜಾಕ್''

ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ (ಪಿಡಿಪಿ) ಮುಖ್ಯಸ್ಥೆಯಾಗಿರುವ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಕಳೆದ ವರ್ಷದ ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ನಿರ್ಧಾರ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ರಾಜ್ಯವನ್ನು ವಿಭಜಿಸುವ ಮುನ್ನ ಮೆಹಬೂಬಾ ಮುಫ್ತಿ ಸೇರಿದಂತೆ ಅನೇಕರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಮುಫ್ತಿ ಅವರನ್ನು ಬಂಧನದಲ್ಲಿ ಇರಿಸಲಾಗಿದೆ. ಇನ್ನೂ ಎಷ್ಟು ಸಮಯ ಅವರನ್ನು ವಶದಲ್ಲಿ ಇರಿಸಿಕೊಳ್ಳಲು ಜಮ್ಮು ಮತ್ತು ಕಾಶ್ಮೀರ ಆಡಳಿತ ಬಯಸಿದೆ ಎಂದು ತನ್ನ ನಿಲುವು ತಿಳಿಸುವಂತೆ ಸುಪ್ರೀಂಕೋರ್ಟ್ ಎರಡು ವಾರಗಳ ಸಮಯ ನೀಡಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿ ವಿಚಾರಣೆಗೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ನ್ಯಾಯಪೀಠ, 'ಮುಫ್ತಿ ಅವರ ಬಂಧನದ ವಿಚಾರದಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತ ಪ್ರಸ್ತಾವವೇನು?' ಎಂದು ಪ್ರಶ್ನಿಸಿತು.

ಕಾಶ್ಮೀರದ ಮುಖಂಡರಿಗೆ ಮತ್ತೆ ಸಂಕಷ್ಟ: ಒಮರ್ ಅಬ್ದುಲ್ಲಾ, ಮುಫ್ತಿ ಮೇಲೆ ಪಿಎಸ್‌ಎ ಕಾಯ್ದೆ ಹೇರಿಕೆ

ಜಮ್ಮು ಮತ್ತು ಕಾಶ್ಮೀರದ ಇತಿಹಾಸದಲ್ಲಿ ಹಿಂಸಾಚಾರವಿದೆ. ಹೀಗಾಗಿ ಈ ಪ್ರಕರಣದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮನವಿ ಮಾಡಿದರು.

'ರಾಜ್ಯದ ಇತಿಹಾಸ ಅದ್ಭುತವಾಗಿದೆ. ಆದರೆ ಯಾರು ಏನು ಹೇಳುವುದು. ಮೇಲ್ನೋಟಕ್ಕೆ ನೀವು ಅವರ ಬಂಧನದ ಗರಿಷ್ಠ ಅವಧಿಯನ್ನು ಮೀರಿದ್ದೀರಿ' ಎಂದು ನ್ಯಾಯಪೀಠ ಹೇಳಿತು.

English summary
The Supreme Court on Tuesday asked Jammu and Kashmir administration that how long can Mehbooba Mufti be kepti in custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X