ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಮದ್ಯದಂಗಡಿ ತೆರೆಯಲು ಸುಪ್ರೀಂಕೋರ್ಟ್ ಅನುಮತಿ

|
Google Oneindia Kannada News

ದೆಹಲಿ, ಮೇ 15: ತಮಿಳುನಾಡಿನಲ್ಲಿ ಮದ್ಯದಂಗಡಿ ತೆರೆಯಬಾರದು ಎಂದು ಸೂಚಿಸಿದ್ದ ಮದ್ರಾಸ್ ಹೈಕೋರ್ಟ್‌ ಆದೇಶವನ್ನು ಸುಪ್ರೀಂಕೋರ್ಟ್ ತಡೆ ಹಿಡಿದಿದೆ. ಈ ಮೂಲಕ ತಮಿಳುನಾಡಿನಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ಸಿಕ್ಕಿದೆ.

ಕೊರೊನಾ ವೈರಸ್‌ ಲಾಕ್‌ಡೌನ್‌ ಹಿನ್ನೆಲೆ ಮದ್ಯದಂಗಡಿ ತೆರೆದರೆ, ಸಾಮಾಜಿಕ ಅಂತರವನ್ನು ಕಾಪಾಡಲು ಸಾಧ್ಯವಿಲ್ಲ, ಸೋಂಕು ಹರಡುವುದಕ್ಕೆ ಅವಕಾಶ ಕೊಟ್ಟಂತೆ ಎಂದು ಮದ್ರಾಸ್ ನ್ಯಾಯಾಲಯದಲ್ಲಿ ಮೇ 8 ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಮದ್ಯದಂಗಡಿ ಮುಚ್ಚಲು ಮದ್ರಾಸ್ ಹೈ ಕೋರ್ಟ್ ಆದೇಶಮದ್ಯದಂಗಡಿ ಮುಚ್ಚಲು ಮದ್ರಾಸ್ ಹೈ ಕೋರ್ಟ್ ಆದೇಶ

ಅರ್ಜಿ ವಿಚಾರಣೆ ಮಾಡಿದ್ದ ಮದ್ರಾಸ್ ಹೈಕೋರ್ಟ್ ಅಂಗಡಿಗಳನ್ನು ಮುಚ್ಚಬೇಕು, ಆನ್‌ಲೈನ್‌ ಮಾತ್ರ ಮಾರಾಟ ಮಾಡಬೇಕು ಎಂದು ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.

Supreme Court Allows To Sale Liquor In Shops At Tamilnadu

ತಮಿಳುನಾಡು ಸರ್ಕಾರದ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ, ಮದ್ಯದಂಗಡಿ ತೆರೆಯುವ ತೀರ್ಮಾನ ಸರ್ಕಾರಕ್ಕೆ ಬಿಟ್ಟಿದ್ದು ಎಂದು ಹೇಳುವ ಮೂಲಕ ಮದ್ರಾಸ್ ಕೋರ್ಟ್ ಆದೇಶಕ್ಕೆ ತಡೆ ನೀಡಿದೆ. ನಾಲ್ಕು ವಾರದ ಬಳಿಕ ಈ ಅರ್ಜಿ ವಿಚಾರಣೆ ಮತ್ತೆ ಸುಪ್ರೀಂಕೋರ್ಟ್ ಅಂಗಳಕ್ಕೆ ಬರಲಿದೆ.

ಈ ಮೊದಲು ಲಾಕ್‌ಡೌನ್‌ ನಡುವೆ ತಮಿಳುನಾಡು ಸರ್ಕಾರ ಮದ್ಯದಂಗಡಿ ತೆರೆದಾಗ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿಪಕ್ಷ ನಾಯಕ ಸ್ಟಾಲೀನ್, ನಟ ಕಮಲ್ ಹಾಸನ್, ರಜನಿಕಾಂತ್ ಸೇರಿದಂತೆ ಹಲವರು ಖಂಡಿಸಿದ್ದರು.

English summary
Supreme Court stays Madras HC order directing shutting of liquor shops in the tamilandu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X