ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ ಪ್ರಕರಣವೊಂದರಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಿದ ಸುಪ್ರೀಂ

|
Google Oneindia Kannada News

ನವದೆಹಲಿ, ಜುಲೈ 3: ವಿಶೇಷ ಪ್ರಕರಣವೊಂದರಲ್ಲಿ 23 ವಾರಗಳ ಗರ್ಭಿಣಿಗೆ ಗರ್ಭಪಾತಕ್ಕೆ ಅವಕಾಶ ನೀಡುವ ಮೂಲಕ ಭಾರತೀಯ ಸರ್ವೋಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ.

ಕೋಲ್ಕತ್ತದ ಶರ್ಮಿಷ್ಠಾ ಚಕ್ರವರ್ತಿ ಎನ್ನುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಮಯದಲ್ಲಿ ಸುಪ್ರೀ, ಈ ಮಹತ್ವದ ತೀರ್ಪು ನೀಡಿದೆ. ಕೆಲವು ನ್ಯೂನತೆಗಳನ್ನು ಹೊಂದಿದ್ದ ಭ್ರೂಣ, ಹೆರಿಗೆಯ ನಂತರ ಬದುಕುವ ಸಾಧ್ಯತೆಗಳೇ ಇಲ್ಲ ಎಂಬ ವೈದ್ಯರ ಹೇಳಿಕೆಯ ಮೇರೆಗೆ ಶರ್ಮಿಷ್ಠಾ ದಂಪತಿ ಗರ್ಭಪಾತದ ನಿರದ್ಹಾರ ತೆಗೆದುಕೊಂದಿದ್ದರು. ಆದರೆ ಭಾರತದಲ್ಲಿ ಗರ್ಭಪಾತ ಕಾನೂನು ಪ್ರಕಾರ ಅಪರಾಧವಾಗಿರುವುದರಿಂದ ಶರ್ಮಿಷ್ಠಾ ನ್ಯಾಯಾಲಯದ ಮೊರೆ ಹೋಗಿದ್ದರು.

10 ವರ್ಷದ ಬಾಲಕಿಗೆ ಗರ್ಭಪಾತ ಮಾಡಲು ಒಪ್ಪಿದ ಹರ್ಯಾಣದ ನ್ಯಾಯಾಲಯ10 ವರ್ಷದ ಬಾಲಕಿಗೆ ಗರ್ಭಪಾತ ಮಾಡಲು ಒಪ್ಪಿದ ಹರ್ಯಾಣದ ನ್ಯಾಯಾಲಯ

Supreme Court allows Kolkatta woman to abort her 23 week old foetus

ಆಕೆಯ ಅಹವಾಲನ್ನು ಆಲಿಸಿದ ನ್ಯಾಯಾಲಯ ಆಕೆಯ ಆರೋಗ್ಯ ಸ್ಥಿತಿಗತಿಗಳನ್ನೂ, ಮತ್ತು ಅಹವಾಲಿನ ಸತ್ಯಾಸತ್ಯತೆಗಳನ್ನೂ ತನ್ನ ಗಮನಕ್ಕೆ ತರುವಂತೆ ಅಲ್ಲಿನ ವೈದ್ಯಕೀಯ ಮಂಡಳಿಗೆ ಆದೇಶಿಸಿತ್ತು.
ವೈದ್ಯಕೀಯ ಮಂಡಳಿ ನೀಡಿದ ವಿವರಗಳ ಅನ್ವಯ ಶರ್ಮಿಷ್ಠೆಯ ಉದರದಲ್ಲಿರುವ ಭ್ರೂಣ ಬದುಕುವುದು ಸಾಧ್ಯವಿಲ್ಲ ಎಂಬುದು ಖಾತ್ರಿಯಾಗಿ, ಗರ್ಭಪಾತ ಮಾಡುವುದಕ್ಕೆ ಅನುಮತಿ ನೀಡಿತು.

ಗರ್ಭಪಾತ, ಮಗಳ ಆರೋಪಕ್ಕೆ ಇಬ್ರಾಹಿಂ ಉತ್ತರವೇನು?ಗರ್ಭಪಾತ, ಮಗಳ ಆರೋಪಕ್ಕೆ ಇಬ್ರಾಹಿಂ ಉತ್ತರವೇನು?

ಮೇ ತಿಂಗಳಿನಲ್ಲಿ ಹರ್ಯಾಣದ ನ್ಯಾಯಾಲಯವೊಂದು, ಗರ್ಭಿಣಿಯಾಗಿದ್ದ 10 ವರ್ಷದ ಬಾಲಕಿಗೆ ಗರ್ಭಪಾತಕ್ಕೆ ಒಪ್ಪಿಗೆ ನೀಡಿತ್ತು. ತನ್ನ ಮಲೆತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿ ಗರ್ಭಧರಿಸಿದ್ದ ಪುಟ್ಟ ಬಾಲಕಿಯ ಭವಿಷ್ಯದ ದೃಷ್ಟಿಯಿಂದ ನ್ಯಾಯಾಲಯ ಈ ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The Supreme Court on July 3rd, allowed to abort a Kolkatta based woman Sharmishta Chakraborthy's more than 23-weeks pregnancy on grounds of medical concern.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X