• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಐಎನ್‌ಎಕ್ಸ್ ಮೀಡಿಯಾ ಪ್ರಕರಣ: ಕಾರ್ತಿ ಚಿದಂಬರಂ ವಿದೇಶ ಪ್ರಯಾಣಕ್ಕೆ ಕೋರ್ಟ್ ಅವಕಾಶ

|

ನವದೆಹಲಿ,ಫೆಬ್ರವರಿ 22: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಆರೋಪಿಯಾಗಿರುವ ಕಾರ್ತಿ ಚಿದಂಬರಂಗೆ ವಿದೇಶಕ್ಕೆ ಪ್ರಯಾಣಿಸಲು ಕೋರ್ಟ್ ಅವಕಾಶ ಮಾಡಿಕೊಟ್ಟಿದೆ.

ಸಿಬಿಐ ನ ವಿಶೇಷ ನ್ಯಾಯಾಧೀಶ ಎಂಕೆ ನಾಗ್ ಪಾಲ್ ಸಿಬಿಐಗೆ ದಾಖಲೆಗಳ ಬಗ್ಗೆ ತನಿಖೆ ನಡೆಸುವುದರ ಜೊತೆಗೆ ದಿನ ನಿತ್ಯದ ತನಿಖೆಗೆ ಪೂರಕವಾಗುವ ದತ್ತಾಂಶಗಳನ್ನು ಎನ್ಕ್ರಿಪ್ಟ್ ರೂಪದಲ್ಲಿರಿಸುವುದಕ್ಕೆ ನಿರ್ದೇಶನ ನೀಡಿದೆ.

ಆದಾಯ ತೆರಿಗೆ ವಂಚನೆ ಕೇಸ್: ಕಾರ್ತಿ ಚಿದಂಬರಂಗೆ ಸಿಹಿ ಸುದ್ದಿ

ಯುಪಿಎ ಆಡಳಿತಾವಧಿಯಲ್ಲಿ ಐಎನ್ಎಕ್ಸ್ ಮೀಡಿಯಾ ವಿದೇಶದಿಂದ 307 ಕೋಟಿ ರೂಪಾಯಿಗಳಷ್ಟು ನಿಧಿಯನ್ನು ಸ್ವೀಕರಿಸುವುದಕ್ಕೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ (ಎಫ್ ಐಪಿಬಿ) ಅನುಮತಿ ನೀಡಿದ್ದರಲ್ಲಿ ಅಧಿಕಾರ ದುರುಪಯೋಗದ ಆರೋಪ ಕೇಳಿಬಂದಿದೆ.

ಕಾರ್ತಿ ಚಿದಂಬರಂ ವಿದೇಶಕ್ಕೆ ತೆರಳಬೇಕಾದಲ್ಲಿ, 2 ಕೋಟಿ ರೂಪಾಯಿ ಮೊತ್ತದ ಠೇವಣಿ ಹಾಗೂ ವಿದೇಶ ಪ್ರವಾಸದ ಸಂಪೂರ್ಣ ವಿವರಗಳನ್ನು ನೀಡಬೇಕಾಗುತ್ತದೆ.

ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರೊನ್ನೊಳಗೊಂಡ ಐಎನ್ಎಕ್ಸ್ ಮೀಡಿಯಾ ಪ್ರಕರಣದಕ್ಕೆ ಸಂಬಂಧಪಟ್ಟಂತೆ ಸ್ವಿಸ್ ಅಧಿಕಾರಿಗಳಿಂದ ಸ್ವೀಕರಿಸಿದ್ದ ದಾಖಲೆಗಳನ್ನು ತನಿಖೆಗೆ ಒಳಪಡಿಸಲು ದೆಹಲಿ ಕೋರ್ಟ್ ಸಿಬಿಐಗೆ ಅನುಮತಿ ನೀಡಿತ್ತು.

ಆ.2019 ರಲ್ಲಿ ಸಿಬಿಐ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಬಂಧಿಸಿ, ಇತರ 13 ಮಂದಿಯ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿತ್ತು. ಇದೇ ಪ್ರಕರಣದಲ್ಲಿ ಡಿಸೆಂಬರ್ ನಲ್ಲಿ ಪಿ.ಚಿದಂಬರಂ ಗೆ ಜಾಮೀನು ದೊರೆತಿತ್ತು.

English summary
The Supreme Court on Monday allowed Congress MP Karti Chidambaram, who is facing criminal cases that are being probed by the ED and the CBI, to travel abroad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X