ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಜಾನ್‌ ವೇಳೆ ಮತದಾನ ಸಮಯ ಬದಲಾವಣೆ ಮರುಚಿಂತನೆಗೆ ಸುಪ್ರಿಂ ಸೂಚನೆ

|
Google Oneindia Kannada News

ನವದೆಹಲಿ, ಮೇ 03: ರಂಜಾನ್ ತಿಂಗಳಿನ ಸಮಯದಲ್ಲಿ ಮತದಾನದ ಸಮಯ ಬದಲಾವಣೆ ಮಾಡುವ ಬಗ್ಗೆ ಮರುಚಿಂತನೆ ನಡೆಸಿ, ಸಮಯದ ಬದಲಾವಣೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರಿಂಕೋರ್ಟ್‌ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಮೇ 6 ರಂದು ಐದನೇ ಹಂತದ ಲೋಕಸಭೆ ಚುನಾವಣೆ ಮತದಾನ ದೇಶದ ಹಲವು ರಾಜ್ಯಗಳಲ್ಲಿ ನಡೆಯಲಿದೆ. ಮೇ 5 ರಂದು ರಂಜಾನ್ ಪವಿತ್ರ ತಿಂಗಳು ಪ್ರಾರಂಭವಾಗುತ್ತದೆ, ಮುಸ್ಲಿಂ ಸಮುದಾಯದವರು ಉಪವಾಸ ಇದ್ದು ರಂಜಾನ್ ಅನ್ನು ಆಚರಿಸುತ್ತಾರೆ.

Supreme asks EC to rethink about voting time during Ramzan

ರಂಜಾನ್ ತಿಂಗಳಿನಲ್ಲಿ ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಉಪವಾಸ ಇರುವ ಕಾರಣ, ಮುಸ್ಲಿಂರ ಆಚರಣೆಗೆ ಅಡಚಣೆಯಾಗದಂತೆ ಮತದಾನದ ಸಮಯವನ್ನು ಬದಲಾಯಿಸಬೇಕೆಂದು ಸುಪ್ರಿಂ ಕೋರ್ಟ್‌ಗೆ ಸಾಕಷ್ಟು ಹಿತಾಸಕ್ತಿ ಅರ್ಜಿಗಳು ಬಂದಿದ್ದವು, ಇವುಗಳ ವಿಚಾರಣೆ ನಡೆಸಿ ಇಂದು ಸುಪ್ರಿಂಕೋರ್ಟ್‌ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.

ಮೋದಿ, ಶಾ ವಿರುದ್ಧ ದೂರು: ಮೇ 6ರ ಒಳಗೆ ಇತ್ಯರ್ಥಕ್ಕೆ ಸುಪ್ರೀಂಕೋರ್ಟ್ ಸೂಚನೆಮೋದಿ, ಶಾ ವಿರುದ್ಧ ದೂರು: ಮೇ 6ರ ಒಳಗೆ ಇತ್ಯರ್ಥಕ್ಕೆ ಸುಪ್ರೀಂಕೋರ್ಟ್ ಸೂಚನೆ

ರಂಜಾನ್ ಮಾತ್ರವಲ್ಲದೆ, ರಾಜಸ್ಥಾನ ಮತ್ತು ಇತರ ರಾಜ್ಯಗಳಲ್ಲಿ ಬಿಸಿಲಿನ ಝಳ ಅತ್ಯಧಿಕವಾಗಿದ್ದು, ಬಿಸಿಲು ಹೆಚ್ಚಿರುವ ಕಾರಣ ಮತದಾನ ಅವಧಿಯನ್ನು ಬದಲಾಯಿಸಿ ಮತದಾರರು ಸುಲಭವಾಗಿ ಮತ ಹಾಕಲು ಅನುವು ಮಾಡಿಕೊಡಬೇಕು ಎಂದು ಸಹ ಸುಪ್ರಿಂ, ಆಯೋಗಕ್ಕೆ ಸೂಚಿಸಿದೆ.

ರಫೇಲ್: ಶನಿವಾರದೊಳಗೆ ಪ್ರತಿಕ್ರಿಯೆ ನೀಡಲು ಕೇಂದ್ರಕ್ಕೆ ಸುಪ್ರೀಂ ಸೂಚನೆರಫೇಲ್: ಶನಿವಾರದೊಳಗೆ ಪ್ರತಿಕ್ರಿಯೆ ನೀಡಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ಲೋಕಸಭೆಗೆ ಮೇ 6 , ಮೇ 12 ಮತ್ತು ಮೇ 19ರಂದು ಉಳಿದ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು , ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ. ರಂಜಾನ್ ಉಪವಾಸವು ಮೇ 5 ರಿಂದ ಪ್ರಾರಂಭವಾಗಿ ಜೂನ್ 5 ರವರೆಗೆ ನಡೆಯುತ್ತದೆ.

English summary
Supreme Court Asks EC to Rethink Poll Timing During Lok Sabha Elections According to Ramadan. Ramzan will start from May 5th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X