ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟರ್ ಆಗಬೇಕಿತ್ತು, ಕೋಡರ್ ಆದೆ ಎಂದ ಸುಂದರ್ ಪಿಚೈ

By Mahesh
|
Google Oneindia Kannada News

ನವದೆಹಲಿ, ಡಿ. 17: ಭಾರತ ಪ್ರವಾಸ ಕೈಗೊಂಡಿರುವ ಗೂಗಲ್ ಸಂಸ್ಥೆ ಸಿಇಒ ಸುಂದರ್ ಪಿಚೈ ಅವರು ಗುರುವಾರದಂದು ದೆಹಲಿ ವಿಶ್ವವಿದ್ಯಾಲಯದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ಸಂವಾದದಲ್ಲಿ ಪಾಲ್ಗೊಂಡಿದ್ದರು. ಸುಂದರ್ ಅವರು ತಮ್ಮ ಬದುಕಿನ ಕನಸು,ಆಸಕ್ತಿ, ಭಾರತದ ಯುವಕರಿಂದ ವಿಶ್ವಕ್ಕೆ ಇರುವ ನಿರೀಕ್ಷೆ, ತಂತ್ರಜ್ಞಾನದ ಸಾಧ್ಯತೆ ಬಾಧ್ಯತೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡಿದರು.

ಭಾರತಕ್ಕಾಗಿ ಗೂಗಲ್ ಕಂಡಿರುವ ಕನಸುಗಳನ್ನು ಬುಧವಾರದಂದು ಬಿಚ್ಚಿಟ್ಟಿದ್ದ ಸುಂದರ್ ಅವರು ಇಂದು ದೆಹಲಿ ವಿಶ್ವ ವಿದ್ಯಾಲಯದ ಶ್ರೀರಾಮ ಕಾಲೇಜ್ ಆಫ್ ಕಾಮರ್ಸ್ ನ 2000ಕ್ಕೂ ಅಧಿಕ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪ್ರಶ್ನೆಗಳನ್ನು ಎದುರಿಸಿದರು. ಕ್ರಿಕೆಟ್ ಕಾಮೆಂಟೆಟರ್ ಹರ್ಷ ಭೋಗ್ಲೆ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.[ಭಾರತಕ್ಕಾಗಿ ಗೂಗಲ್ ಕಂಡಿರುವ ಕನಸುಗಳೇನು?]

'ನಾನು ಕ್ರಿಕೆಟರ್ ಆಗಬೇಕಿತ್ತು. ಬಾಲ್ಯದಿಂದಲೂ ನನಗೆ ಗವಾಸ್ಕರ್ ಅಂದ್ರೆ ತುಂಬಾ ಇಷ್ಟ.ಆದರೆ, ನಾನು ಕೋಡರ್ ಆದೆ ಎಂದರು. ಇದಕ್ಕೆ ಪ್ರತಿಯಾಗಿ ಕೋಡಿಂಗ್ ಮಾಡುವುದು ಕಡ್ಡಾಯವೇ ಎಂದು ಹರ್ಷ ಪ್ರಶ್ನಿಸಿದರು.

ಮತ್ತೆ ಕ್ರೀಡೆ ಬಗ್ಗೆ ಮಾತನಾಡಿ, ನನಗೆ ಕ್ರಿಕೆಟ್ ಹಾಗೂ ಫುಟ್ಬಾಲ್ ಇಷ್ಟ. ಬಾರ್ಸಿಲೋನಾ ಹಾಗೂ ಲಿಯೊನೆಲ್ ಮೆಸ್ಸಿ ಆಡುವುದು ನೋಡುವುದೇ ಆನಂದ. ಕ್ರಿಕೆಟ್ ನಲ್ಲಿ ಟಿ20 ಪಂದ್ಯಕ್ಕಿಂತ ಏಕದಿನ ಕ್ರಿಕೆಟ್ ಪಂದ್ಯವೇ ಇಷ್ಟವಾಗುತ್ತದೆ ಎಂದಾಗ ಹರ್ಷ ಅಚ್ಚರಿಗೊಂಡರು.[ಸುಂದರ್ ಪಿಚೈ- ಗೂಗಲ್ ಸಿಇಒ ಬಗ್ಗೆ ಒಂದಿಷ್ಟು]

ಕ್ಲಾಸ್ 12th ನಲ್ಲಿ ಎಷ್ಟು ಮಾರ್ಕ್ಸ್ ತಗೊಂಡಿದ್ರಿ ಎಂಬ ಪ್ರಶ್ನೆ ಕೇಳಿ ನಗೆ ಚೆಲ್ಲಿದ ಪಿಚೈ, ಎಸ್ ಆರ್ ಸಿಸಿ ಕಾಲೇಜಿನಲ್ಲಿ ಅಡ್ಮಿಷನ್ ಆಗೋಕೆ ಸಾಧ್ಯವಿಲ್ಲದ್ದಷ್ಟು ಎಂದು ಜಾಣತನದ ಉತ್ತರ ನೀಡಿದರು. ಇನ್ನಷ್ಟು ಕುತೂಹಲಕಾರಿ ಪ್ರಶ್ನೆ ಹಾಗೂ ಉತ್ತರಗಳು ಮುಂದೆ..

ಕೋಡಿಂಗ್ ಕಡ್ಡಾಯ ಮಾಡಬೇಕಾಗಿಲ್ಲ

ಕೋಡಿಂಗ್ ಕಡ್ಡಾಯ ಮಾಡಬೇಕಾಗಿಲ್ಲ

ಕೋಡಿಂಗ್ ಕಡ್ಡಾಯ ಮಾಡಬೇಕಾಗಿಲ್ಲ.ಆದರೆ, ಕೋಡಿಂಗ್ ಮಾಡುವವರನ್ನು ಉತ್ಸಾಹಿಸಬೇಕು ಎಂದು ಉತ್ತರಿಸಿದರು. ಕೋಡಿಂಗ್ ಗೊತ್ತಿಲ್ಲದವರಿಗೆ ನಿಮ್ಮಲ್ಲಿ ಕೆಲಸ ಸಿಗುತ್ತಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ ನಾವು ಕಂಪ್ಯೂಟರ್ ಸೈನ್ಸ್ ಪದವೀಧರರಲ್ಲದೆ ಇತರೆ ವಿಷಯಗಳಲ್ಲಿ ಪರಿಣತಿ ಹೊಂದಿರುವವರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದರು.

ಆಂಡ್ರಾಯ್ಡ್ ಓಎಸ್ ಗೆ ಭಾರತೀಯ ಹೆಸರುಗಳು ಏಕಿಲ್ಲ?

ಆಂಡ್ರಾಯ್ಡ್ ಓಎಸ್ ಗೆ ಭಾರತೀಯ ಹೆಸರುಗಳು ಏಕಿಲ್ಲ?

ಆಂಡ್ರಾಯ್ಡ್ ಎನ್ ವರ್ಷನ್ ಭಾರತೀಯ ಹೆಸರು ಬಳಸಬಹುದು. ಆನ್ ಲೈನ್ ಸಮೀಕ್ಷೆ ನಡೆಸಲಾಗುವುದು. ಜನಾಭಿಪ್ರಾಯದಂತೆ ಭಾರತೀಯ ತಿಂಡಿ ತಿನಿಸಿನ ಹೆಸರು ಇಡಬಹುದು ಎಂದರು. ಆಂಡ್ರಾಯ್ಡ್ ನಲ್ಲಿ ಇಲ್ಲಿ ತನಕ ಐಸ್ ಕ್ರೀಂ ಸ್ಯಾಂಡ್ ವಿಚ್, ಕಿಟ್ ಕ್ಯಾಟ್, ಜೆಲ್ಲಿ ಬೀನ್, ಲಾಲಿಪಾಪ್ ಹೆಸರುಗಳನ್ನು ಇಡಲಾಗಿದೆ.

ಉದ್ಯಮಿಗಳನ್ನು ಗುರುತಿಸುವುದು ಹೇಗೆ?

ಉದ್ಯಮಿಗಳನ್ನು ಗುರುತಿಸುವುದು ಹೇಗೆ?

ಭಾರತದಲ್ಲಿ ಒಂದು ಸಣ್ಣ ಟೀ ಅಂಗಡಿಯವ ಕೂಡಾ ಉದ್ಯಮಿಯಾಗಿರುತ್ತಾನೆ. ಅವನಿಗೆ ತನ್ನದೇ ಆದ ಲೆಕ್ಕಾಚಾರ ಇತಿ ಮಿತಿ ಇರುತ್ತದೆ. ಸಿಲಿಕಾನ್ ವ್ಯಾಲಿಯಲ್ಲಿ ಅನೇಕ ಕಂಪನಿಗಳು ಹುಟ್ಟಿ ಸಾಯುತ್ತಿರುತ್ತವೆ. ಆದರೆ, ಗೆಲುವಿನ ಪ್ರಮಾಣ ಅಧಿಕವಾಗಿರುತ್ತದೆ. ಜಾಗತಿಕ ಮಟ್ಟಕ್ಕೆ ಅಪೀಲ್ ಆಗುವಂಥ ಉದ್ಯಮಿಗಳು ಭಾರತದಲ್ಲಿದ್ದಾರೆ. ಕಳೆದ ವರ್ಷ ಇಲ್ಲಿಗೆ ಬಂದಾಗಲೇ ನನಗೆ ಈ ಬಗ್ಗೆ ತಿಳಿಯಿತು.

ಯಾವ ಸ್ಮಾರ್ಟ್ ಫೋನ್, ಫೋನ್ ಮೊದಲು ಖರೀದಿಸಿದ್ರಿ?

ಯಾವ ಸ್ಮಾರ್ಟ್ ಫೋನ್, ಫೋನ್ ಮೊದಲು ಖರೀದಿಸಿದ್ರಿ?

ಬಹುಶಃ 1995ರಲ್ಲಿ ಮೋಟೋರೋಲಾ ಕಂಪನಿ ಫೋನ್ ಖರೀದಿಸಿದೆ. 2006ರಲ್ಲಿ ಮೊದಲ ಬಾರಿಗೆ ಸ್ಮಾರ್ಟ್ ಫೋನ್ ಬಳಸಿದೆ. ಈಗ ಮನೆಯಲ್ಲಿ ಸುಮಾರು 15-30 ಬಗೆಯ ಸ್ಮಾರ್ಟ್ ಫೋನ್ ಗಳಿವೆ ಎಂದರು.

ಭಾರತೀಯ ಮಹಿಳೆಯರ ಮೇಲೆ ಗೂಗಲ್ ಕಣ್ಣು

ಭಾರತೀಯ ಮಹಿಳೆಯರ ಮೇಲೆ ಗೂಗಲ್ ಕಣ್ಣು

ಭಾರತೀಯ ಮಹಿಳೆಯರ ಮೇಲೆ ಗೂಗಲ್ ವಿಶೇಷ ಕಾಳಜಿ ವಹಿಸುತ್ತಿದೆ. ಮನೆಯಲ್ಲಿ ಹೆಣ್ಣೊಂದು ಕಲಿತರೆ ಮನೆ ಮಂದಿಗೆಲ್ಲ ಅರಿವು ಮೂಡುತ್ತದೆ. ಇಂಟರ್ನೆಟ್ ಸಾಥಿ ಯೋಜನೆ ಮೂಲಕ ಗ್ರಾಮೀಣ ಮಹಿಳೆಯರಿಗೆ ಇಂಟರ್ನೆಟ್ ತಲುಪಿಸಲಾಗುತ್ತದೆ. ಮುಂದಿನ 30 ವರ್ಷಗಳಲ್ಲಿ ದೈನಂದಿನ ಬದುಕಿನ ಭಾಗವಾಗಿ ಗೂಗಲ್ ನಿರ್ವಹಿಸಲಿದೆ.

ಕನಸಿನ ಹಿಂದೆ ಓಡುವುದನ್ನು ಕಲಿತುಕೊಳ್ಳಿ

ಕನಸಿನ ಹಿಂದೆ ಓಡುವುದನ್ನು ಕಲಿತುಕೊಳ್ಳಿ

ಕನಸಿನ ಹಿಂದೆ ಓಡುವುದನ್ನು ಕಲಿತುಕೊಳ್ಳಿ, ತಂತ್ರಜ್ಞಾನ ಜಗತ್ತಿನಲ್ಲಿ ಎಲ್ಲವೂ ತ್ವರಿತಗತಿಯಲ್ಲಿ ಬದಲಾಗುತ್ತಿರುತ್ತದೆ.

English summary
Cricket and soccer are two sports I follow. I don't enjoy T20 as much as I enjoy one day test matches Said Google CEO Sundar Pichai. Sundar Pichai had a interactive session at Delhi University's Shri Ram College of Commerce. Here are the highlights of the session hosted by Harsha Bhogle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X