ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಂದಾ ಪುಷ್ಕರ್ ಆತ್ಮಹತ್ಯೆಯಲ್ಲ, ಕೊಲೆ : ದೆಹಲಿ ಪೊಲೀಸ್

By Mahesh
|
Google Oneindia Kannada News

ನವದೆಹಲಿ, ಜ. 6: ಕೇಂದ್ರ ಮಾಜಿ ಸಚಿವ ಶಶಿ ತರೂರ್ ಅವರು ತನ್ನ ಪತ್ನಿ ಸುನಂದಾ ಪುಷ್ಕರ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಪ್ರಕರಣಕ್ಕೆ ಮತ್ತೊಮ್ಮೆ ಟ್ವಿಸ್ಟ್ ಸಿಕ್ಕಿದೆ. ಬಿಜೆಪಿ ಮುಖಂಡ ಸುಬ್ರಮಣ್ಯನ್ ಸ್ವಾಮಿ ಅವರು ಸುನಂದಾ ಅವರದ್ದು ಸಹಜ ಸಾವಲ್ಲ, ಅದೊಂದು ಕೊಲೆ ಎಂದು ಹೇಳಿದ್ದ ಮಾತು ನಿಜವಾಗಿದೆ. ಸುನಂದಾ ಪುಷ್ಕರ್ ಹತ್ಯೆ ಮಾಡಲಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.

ಸುನಂದಾ ಪುಷ್ಕರ್ ಅವರಿಗೆ ರಷ್ಯನ್ ವಿಷ ನೀಡಿ ಹತ್ಯೆಗೈಯಲಾಗಿದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಮೊದಲಿಗೆ ಸುಬ್ರಮಣ್ಯನ್ ಸ್ವಾಮಿ ಟ್ವೀಟ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. [ಸುನಂದಾಗೆ ರಷ್ಯನ್ ವಿಷ, ಮೈತುಂಬಾ ಗಾಯ]

ಸುನಂದಾ ಅವರಿಗೆ ಇಂಜೆಕ್ಷನ್ ಮೂಲಕ ವಿಷ ಪ್ರಾಶನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸುನಂದಾ ಪುಷ್ಕರ್ ಸಾವನ್ನು ಕೊಲೆ ಪ್ರಕರಣ ಎಂದು ಪರಿಗಣಿಸಿ ಐಪಿಸಿ ಸೆಕ್ಷನ್ 302 ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಬಿಎಸ್ ಬಸ್ಸಿ ಹೇಳಿದ್ದಾರೆ.

2014 ರ ಜ.17ರಂದು ದೆಹಲಿಯ ಚಾಣಕ್ಯಪುರಿಯಲ್ಲಿರುವ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಸುನಂದಾ ಪುಷ್ಕರ್ ಮೃತದೇಹ ಪತ್ತೆಯಾಗಿತ್ತು. ಇದೊಂದು ಸಹಜ ಸಾವು, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿತ್ತು. [ಪುಷ್ಕರ್‌ ಸಾವಿನ ಹಿಂದೆ ವಿದೇಶಿಗನ ಕೈವಾಡ?]


ಸುನಂದಾ ಅವರನ್ನು ಅವರನ್ನು ಸಾವಿನ ದವಡೆಗೆ ನೂಕಿದ್ದು ಮಾತ್ರ ಅತಿಯಾದ ಮಾತ್ರೆ ಸೇವನೆ ಅದನ್ನು drug poisoning ಎಂದೂ ಕರೆಯುತ್ತಾರೆ ಎಂದು ಏಮ್ಸ್ ವೈದ್ಯಾಧಿಕಾರಿಗಳು ಹೇಳಿದ್ದಾರೆ. ಆದರೆ, ಇದರ ಬೆನ್ನಲ್ಲೆ ಸುನಂದಾ ಅವರ ಮೈಮೇಲೆ ಆಗಿದ್ದ ಗಾಯಗಳು ಬೇರೆ ಕಥೆಯನ್ನೇ ಹೇಳಿತ್ತು.

ಸುನಂದಾ ಪತಿ ಶಶಿ ತರೂರ್ ನಿರಾಕರಣೆ

ಸುನಂದಾ ಪತಿ ಶಶಿ ತರೂರ್ ನಿರಾಕರಣೆ

ಸುಬ್ರಮಣ್ಯ ಸ್ವಾಮಿ ಆರೋಪವನ್ನು ಸುನಂದಾ ಪತಿ ಶಶಿ ತರೂರ್ ನಿರಾಕರಿಸಿದ್ದರು. ಸುನಂದಾರದು ಆತ್ಮಹತ್ಯೆಯಲ್ಲ ಹತ್ಯೆ ಎನ್ನುವ ಕುರಿತು ಸ್ವಾಮಿ ಬಳಿ ದಾಖಲೆಗಳಿದ್ದರೆ ಅದನ್ನು ಪ್ರದರ್ಶಿಸಲಿ ಎಂದು ಸವಾಲು ಹಾಕಿದ್ದರು. ಜತೆಗೆ ಸ್ವಾಮಿ ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವುದನ್ನು ಬಿಟ್ಟೇ ಬಿಟ್ಟಿದ್ದೇನೆ ಎಂದು ತರೂರ್ ಹೇಳಿದ್ದರು.

ಹೊಸ ವರದಿ ಎಲ್ಲವನ್ನು ಬಯಲು ಮಾಡಿತು

ಹೊಸ ವರದಿ ಎಲ್ಲವನ್ನು ಬಯಲು ಮಾಡಿತು

ಸುನಂದಾ ಮಣಿಕಟ್ಟಿನ ಮೇಲೆ ಇಂಜೆಕ್ಷನ್ ಗುರುತು ಇತ್ತು. ದೇಹದಿಂದ ದುರ್ಗಂಧ ಪೂರಿತ ಗಾಳಿ ಹೊರ ಬಂದಿತ್ತು. ಗಾಯಗಳು ಬಲವಾಗಿ ಒತ್ತಡ ಹೇರಿದ್ದರಿಂದ ಆಗಿದೆ. ಗಾಯದ ಸಂಖ್ಯೆ 10 ಇಂಜೆಕ್ಷನ್ ಗುರುತಿನಿಂದ ಆಗಿದೆ.

ಒಟ್ಟಾರೆ 15 ಗಾಯಗಳು ದೇಹದ ಮೇಲಿದೆ. ಎಲ್ಲವೂ ಸಾವಿನ ಸಮಯಕ್ಕೂ 12 ಗಂಟೆಯೊಳಗೆ ಆಗಿವೆ. ಗಾಯ ಸಂಖ್ಯೆ 12 ಹಲ್ಲಿನ ಕಡಿತದಿಂದ ಆಗಿದೆ. ಚುಚ್ಚುಮದ್ದು ಬಗ್ಗೆ ವಿಸೇರಾ(viscera) ವರದಿ ಹೆಚ್ಚಿನ ಮಾಹಿತಿ ನೀಡಲಿದೆ ಎಂದು ಡಾ. ಸುಧೀರ್ ಗುಪ್ತ ಹೇಳಿದ್ದರು. ಅದರಂತೆ ವಿಷವಿರುವ ಅಂಶ ಪತ್ತೆಯಾಗಿದ್ದು ಪ್ರಕರಣಕ್ಕೆ ಹೊಸ ತಿರುವು ನೀಡಿತು.

ದೆಹಲಿಯ ಏಮ್ಸ್ ವೈದ್ಯರು ನೀಡಿದ ಪ್ರಾಥಮಿಕ ವರದಿ

ದೆಹಲಿಯ ಏಮ್ಸ್ ವೈದ್ಯರು ನೀಡಿದ ಪ್ರಾಥಮಿಕ ವರದಿ

ಸುನಂದಾ ಅವರು ಮದ್ಯ ಸೇವಿಸಿರಲಿಲ್ಲ, ಮಾತ್ರೆ ಸೇವಿಸಿದ್ದಾರೆ: ದೆಹಲಿಯ ಏಮ್ಸ್ ವೈದ್ಯರ ಪ್ರಕಾರ ಸುನಂದಾ ಅವರ ಅಟಾಪ್ಸಿ ನಡೆಸಿದ ಮೇಲೆ ಆಕೆ ಆಲ್ಕೋಹಾಲ್ ಸೇವಿಸಿಲ್ಲ ಎಂದು ತಿಳಿದು ಬಂದಿದೆ.

ಆದರೆ, ಮಾನಸಿಕ ಒತ್ತಡ ನಿವಾಕರ ಸೆಡಟಿವ್ ಸೈಕೋಆಕ್ಟಿವ್ ಡ್ರಗ್ Alprazolam ಸೇವಿಸಿರುವುದು ಪತ್ತೆಯಾಗಿದೆ. ಹೋಟೆಲ್ ರೂಮಿನಲ್ಲೂ ಕೂಡಾ Alprax ನ ಒಂದು ಸ್ಟ್ರಿಪ್ ಸಿಕ್ಕಿದೆ. ಅತಿಯಾದ ಮಾತ್ರೆ ಸೇವನೆಯಿಂದ ಸಾವು ಸಂಭವಿಸಿದೆ.

ಆಸ್ತಿ ನನಗೆ ಬೇಡ ಎಂದಿದ್ದ ಶಶಿ ತರೂರ್

ಆಸ್ತಿ ನನಗೆ ಬೇಡ ಎಂದಿದ್ದ ಶಶಿ ತರೂರ್

ಸುನಂದಾ ಪುಷ್ಕರ್ ಗೆ ಸಂಬಂಧಿಸಿದ ಸ್ಥಿರಾಸ್ತಿಯಾಗಲಿ, ಚರಾಸ್ಥಿಯನ್ನಾಗಲಿ ನಾನು ಪಡೆದುಕೊಂಡಿಲ್ಲ. ನಾನು ಈ ಬಗ್ಗೆ ಆಕೆಯ ಮಗನನ್ನು ಕೇಳಿಲ್ಲ. ಸುನಂದಾ ಸಾವಿನ ಬಗ್ಗೆ ಯಾವುದೇ ತನಿಖೆ ನಡೆದರೂ ನಾನೇನು ಅಡ್ಡಿಪಡಿಸಲ್ಲ ಎಂದು ಕೇಂದ್ರ ಮಾಜಿ ಸಚಿವ ಶಶಿ ತರೂರ್ ಅವರು ಕೇರಳದ ಕೋರ್ಟಿಗೆ ಹೇಳಿದ್ದರು. ಹೀಗಾಗಿ ಶಶಿ ಅವರನು ಆರೋಪಿಯನ್ನಾಗಿಸಿದರೂ ಕೊಲೆಯ ಉದ್ದೇಶ ಸ್ಪಷ್ಟವಾಗಿರಲಿಲ್ಲ

ಮೆಹರ್- ತರಾರ್ ಟ್ವೀಟ್ ಕಿರಿಕಿರಿ

ಮೆಹರ್- ತರಾರ್ ಟ್ವೀಟ್ ಕಿರಿಕಿರಿ

ಶಶಿ ಅವರ ರಾಜಕೀಯ ನಿಲುವು ನನಗಿಷ್ಟ. ಆದರೆ, ಸುನಂದಾ ಆರೋಪಗಳಲ್ಲಿ ಹುರುಳಿಲ್ಲ ಎಂದು ಲಾಹೋರ್ ಮೂಲದ ಮೆಹರ್ ತರಾರ್ ಟ್ವೀಟ್ ಮಾಡಿದ್ದರು. ಟ್ವಿಟ್ಟರ್ ನಲ್ಲಿ ಇಬ್ಬರ ನಡುವೆ ಶಶಿಗಾಗಿ ನಡೆದ ಕಿತ್ತಾಟದ ಬಳಿಕೆ ಸುನಂದಾ ಸಾವನ್ನಪ್ಪಿದ್ದರು. ಅದರೆ, ಸುನಂದಾ ಸಾವಿಗೆ ಸಂಬಂಧಿಸಿದಂತೆ ಮೆಹರ್ ಅವರನ್ನು ಇದುವರೆವಿಗೂ ಪ್ರಶ್ನಿಸಿಲ್ಲ.

ಡೈಲಿ ಟೈಮ್ಸ್ ನಲ್ಲಿ ಸಹಾಯಕ ಸಂಪಾದಕಿಯಾಗಿದ್ದ ಮೆಹರ್ ಗೃಹಿಣಿಯಾಗಿದ್ದು ಒಂದು ಮಗುವಿನ ತಾಯಿಯಾಗಿದ್ದಾರೆ. ಶಶಿ ಇಷ್ಟಪಟ್ಟಿದ್ದಕ್ಕೆ ಆಕೆಯನ್ನು ಐಎಸ್ ಐ ಏಜೆಂಟ್ ಎಂದು ಸುನಂದಾ ಜರೆದಿದ್ದರು.

English summary
The Delhi Police Commissioner has confirmed that Sunanda Pushkar has been murdered and a case of murder has been registered against unknown assailants under Section 302.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X