• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುನಂದಾ ಪುಷ್ಕರ್‌ ಕೇಸ್ : ಮತ್ತೊಮ್ಮೆ ಚಾರ್ಜ್ ಶೀಟ್ ಸಲ್ಲಿಕೆ

By Mahesh
|

ನವದೆಹಲಿ, ಮೇ 28: ಸಂಸದ ಶಶಿ ತರೂರ್‌ ಅವರ ಪತ್ನಿ ಸುನಂದಾ ಪುಷ್ಕರ್‌ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇಂದು 3 000 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ಆಕೆಯ ಸಾವಿಗೂ ಮುನ್ನ ತನ್ನ ಗಂಡನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳಿವು ನೀಡಿರುವ ಕುರಿತು ಉಲ್ಲೇಖಿಸಿದ್ದಾರೆ.

ದೆಹಲಿ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್, ಸುನಂದಾ ಪುಷ್ಕರ್‌ ಸಾವಿನ ಪ್ರಕರಣ ಕುರಿತಾದ ತೀರ್ಪನ್ನು ಜೂನ್ 5ರಂದು ತೀರ್ಪು ನೀಡುವುದಾಗಿ ತಿಳಿಸಿದ್ದು, ತರೂರ್ ಅವರನ್ನು ಅಪರಾಧಿ ಎನ್ನಲು ಪ್ರಾಸಿಕ್ಯೂಷನ್ ಬಳಿ ಸಾಕಷ್ಟು ಸಾಕ್ಷಾಧಾರಗಳಿಲ್ಲ ಎಂಬ ಕಾರಣಕ್ಕೆ ತೀರ್ಪು ಕಾಯ್ದಿರಿಸಲಾಗಿದೆ ಎಂದಿದ್ದಾರೆ.

ಸುನಂದಾ ಪುಷ್ಕರ್‌ ಅವರ ಕೋಣೆಯಲ್ಲಿ ಸುಮಾರು 27 ಆಲ್ಪ್ರಾಕ್ಸ್ ಮಾತ್ರೆಗಳು ಪತ್ತೆಯಾಗಿದ್ದು, ಅವುಗಳಲ್ಲಿ ಎಷ್ಟು ಮಾತ್ರೆಗಳನ್ನು ಆಕೆ ಸೇವಿಸಿದ್ದಾರೆ ಎನ್ನುವ ಕುರಿತು ತಿಳಿದಿಲ್ಲ. ಆಕೆಯು ವಿಷದಿಂದಾಗಿ ಮೃತಪಟ್ಟಿದ್ದಾಳೆ. ಪ್ರಕರಣದಲ್ಲಿ ಶಶಿ ತರೂರ್‌ ಪ್ರಮುಖ ಆರೋಪಿ ಎಂದು ಕೋರ್ಟ್‌ಗೆ ತಿಳಿಸಿದ್ದರು.

ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಸಂದೇಶಗಳನ್ನು ಚಾರ್ಜ್‌ಶೀಟ್‌ನಲ್ಲಿ ಮರಣ ಪೂರ್ವ ಹೇಳಿಕೆಯನ್ನಾಗಿ ಪರಿಗಣಿಸಿದ್ದು, ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್​ ಅನ್ನು ನ್ಯಾಯಾಲಯ ಒಪ್ಪಿಕೊಂಡರೆ ಅಪರಾಧ ಪ್ರಕರಣದ ತನಿಖೆಯಲ್ಲಿ ಇದೇ ಮೊದಲ ಉದಾಹರಣೆಯಾಗಲಿದೆ.

English summary
A Special Court in the Patiala House Court in Delhi, on 28 May, reserved its decision on taking cognisance of the chargesheet, filed by the Delhi Police, in the mysterious death of Congress MP Shashi Tharoor’s wife Sunanda Pushkar, for 5 June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X