ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಅರುಣ್ ಜೇಟ್ಲಿ ಕೈಲಿ ಸನ್ ಟಿವಿ ಭವಿಷ್ಯ?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜೂ.8: ಮಾರನ್ ಬ್ರದರ್ಸ್ ಒಡೆತನದ ಸನ್ ನೆಟ್ವರ್ಕ್ಸ್ ಸಂಸ್ಥೆಯ ಟಿವಿ ಚಾನೆಲ್ ಹಾಗೂ ಎಫ್ ಎಂ ವಾಹಿನಿಗೆ ಭದ್ರತಾ ಅನುಮತಿ ನೀಡಲು ನಿರಾಕರಿಸಿರುವ ಗೃಹ ಸಚಿವಾಲಯ ಈಗ ಲೈಸನ್ಸ್ ರದ್ದುಪಡಿಸಲು ಮುಂದಾಗಿದೆ. ಸನ್ ನೆಟ್ವರ್ಕ್ ಲೈಸನ್ಸ್ ರದ್ದು ಮಾಡುವ ಬಗ್ಗೆ ನಿರ್ಧರಿಸುವಂತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದೆ.

ಈಗ ಮಾರನ್ ಬ್ರದರ್ಸ್ ಒಡೆತನದ ಟಿವಿ ಚಾನೆಲ್ ಹಾಗೂ ಎಫ್ ಎಂ ವಾಹಿನಿಗಳ ಭವಿಷ್ಯ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅರುಣ್ ಜೇಟ್ಲಿ ಕೈಲಿದೆ. ಕಳೆದ ವರ್ಷ ಕೂಡಾ ಗೃಹ ಸಚಿವಾಲಯ ಸುಮಾರು 40ಕ್ಕೂ ಅಧಿಕ ಎಫ್ ಎಂ ವಾಹಿನಿಗಳಿಗೆ ಅನುಮತಿ ನೀಡಲು ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. [ಸನ್ ನೆಟ್ವರ್ಕ್ 33 ಟಿವಿ ವಾಹಿನಿ, 45 ಎಫ್ ಎಂ ಬಂದ್?]

Arun Jaitley

ಲೈಸನ್ಸ್ ರದ್ದು: ಸನ್ ನೆಟ್ವರ್ಕ್ ಜಾಲದ ಟಿವಿ ಹಾಗೂ ಎಫ್ ಎಂ ವಾಹಿನಿಗಳಿಗೆ ಭದ್ರತಾ ಅನುಮತಿ ನೀಡಲು ನಿರಾಕರಿಸಿದ್ದೇಕೆ? ಎಂಬುದರ ಬಗ್ಗೆ ವಿಸ್ತೃತ ವರದಿಯನ್ನು ಗೃಹ ಸಚಿವಾಲಯ ತಯಾರಿಸಿದೆ. ಇದರ ಪ್ರತಿಯನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಕಳಿಸಲಾಗಿದ್ದು, ಲೈಸನ್ಸ್ ರದ್ದು ಪಡಿಸಬಾರದೇಕೆ? ಎಂದು ಪ್ರಶ್ನಿಸಲಾಗಿದೆ. [ಲೈಸನ್ಸ್ ರದ್ದು ಭೀತಿ, ನೆಲ ಕಚ್ಚಿದ ಸನ್ ಟಿವಿ ಷೇರು]

ಭ್ರಷ್ಟಾಚಾರ, ಮನಿ ಲಾಂಡ್ರಿಂಗ್ ಹಾಗೂ ಅಕ್ರಮವಾಗಿ ಟೆಲಿಕಾಂ ಸಂಪರ್ಕ ಹೊಂದಿದ ಆರೋಪ ಇರುವುದರಿಂದ ಸನ್ ನೆಟ್ವರ್ಕ್ ಸಲ್ಲಿಸಿದ ಲೈಸನ್ ನವೀಕರಣ ಅರ್ಜಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಪ್ರಕರಣಗಳ ವಿಚಾರಣೆ ಜಾರಿಯಲ್ಲಿರುವ ತನಕ ಸನ್ ಟಿವಿಗೆ ಭದ್ರತಾ ಅನುಮತಿ ನೀಡಲು ಗೃಹ ಸಚಿವಾಲಯ ನಿರಾಕರಿಸಿದೆ.

ಸನ್ ಟಿವಿ ಏನು ಮಾಡಬಹುದು?: ಮೊದಲಿಗೆ ಲೈಸನ್ಸ್ ನವೀಕರಣಕ್ಕಾಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮೊರೆ ಹೋಗಬಹುದು. ಲೈಸನ್ಸ್ ಸಿಕ್ಕ ಮೇಲೆ, ಈ ಸಚಿವಾಲಯದ ನೆರವಿನಿಂದ ಪುನಃ ಗೃಹ ಸಚಿವಾಲಯಕ್ಕೆ ಅರ್ಜಿ ಹಾಕಬಹುದು. ಕೊನೆಯದಾಗಿ ಕಳೆದ ಬಾರಿಯಂತೆ ಈ ಬಾರಿ ಕೂಡಾ ಕೋರ್ಟ್ ಮೆಟ್ಟಿಲೇರಬಹುದು. (ಒನ್ ಇಂಡಿಯಾ ಸುದ್ದಿ)

English summary
The Ministry of Home Affairs which refused to issue a security clearance to the Sun TV network's 33 channels may also request the Information and Broadcasting Ministry to cancel their licenses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X