ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ಕೊಟ್ಟ ಸುಮಲತಾ ಅಂಬರೀಶ್

|
Google Oneindia Kannada News

ಮಾರ್ಚ್ 31: ಮಾರಣಾಂತಿಕ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ನಟಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿ ನೀಡಿದ್ದಾರೆ.

ಮಂಡ್ಯ ಜಿಲ್ಲಾ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಈ ಹಣವನ್ನು ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸುಮಲತಾ ಅಂಬರೀಶ್ ಸೂಚಿಸಿದ್ದಾರೆ.

ಕೊರೊನಾ ವಿರುದ್ಧ ಹೋರಾಟ: 4 ತಿಂಗಳ ವೇತನ ನೀಡಿದ ಸಂಸದೆ ಸುಮಲತಾ ಕೊರೊನಾ ವಿರುದ್ಧ ಹೋರಾಟ: 4 ತಿಂಗಳ ವೇತನ ನೀಡಿದ ಸಂಸದೆ ಸುಮಲತಾ

"ದೇಶವನ್ನೇ ಕೊರೊನಾ ಆತಂಕಕ್ಕೀಡು ಮಾಡಿದೆ. ಸಾವು-ನೋವುಗಳು ಸಂಭವಿಸುತ್ತಿವೆ. ಹಾಗಾಗಿ ಈ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಈ ಹೊತ್ತಿನಲ್ಲಿ ಜನರ ಸಂಕಷ್ಟಗಳಿಗೆ ಮಿಡಿಯಬೇಕಾಗಿದ್ದು ನಮ್ಮ ಜವಾಬ್ದಾರಿ ಕೂಡ.

Sumalatha Ambareesh gives 1 Crore rupees to PM Relief fund

ಒಬ್ಬ ಸಂಸದೆಯಾಗಿ ಸರ್ಕಾರದ ಜೊತೆ ಕೈ ಜೋಡಿಸಿದ್ದೇನೆ. ಮಂಡ್ಯ ಜಿಲ್ಲಾ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಒಂದು ಕೋಟಿ ರೂಪಾಯಿಯನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ" ಎಂದಿದ್ದಾರೆ ಸುಮಲತಾ ಅಂಬರೀಶ್.

ಸಂಸದರ ಪ್ರದೇಶಾಭಿವೃದ್ಧಿ ನಿಧಿಯ ಜೊತೆಗೆ ವಾರದ ಹಿಂದೆಯಷ್ಟೇ ವೈಯುಕ್ತಿಕವಾಗಿ ತಮ್ಮ ಎರಡು ತಿಂಗಳ ವೇತನವನ್ನು (ಎರಡು ಲಕ್ಷ ರೂಪಾಯಿ) ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಸುಮಲತಾ ಅಂಬರೀಶ್ ನೀಡಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೂ ಕೂಡ ಎರಡು ತಿಂಗಳ ಮಾಸಿಕ ವೇತನ (ಎರಡು ಲಕ್ಷ ರೂಪಾಯಿ)ವನ್ನು ಸುಮಲತಾ ಅಂಬರೀಶ್ ಕೊಟ್ಟಿದ್ದಾರೆ.

ಮಂಡ್ಯದ ಮಿಮ್ಸ್ ಬೋಧಕ ಆಸ್ಪತ್ರೆಗೆ ವೆಂಟಿಲೇಟರ್ ಮತ್ತು ಅಗತ್ಯ ಸಲಕರಣೆಗಳ ಖರೀದಿಗಾಗಿ ಸಂಸದರ ನಿಧಿಯಿಂದ ಈಗಾಗಲೇ ಐವತ್ತು ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲು ಸುಮಲತಾ ಅಂಬರೀಶ್ ಸೂಚನೆ ಕೊಟ್ಟಿದ್ದಾರೆ.

English summary
Mandya MP Sumalatha Ambareesh gives 1 Crore rupees to PM Relief fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X