ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಸ್ಥಾನ: ರೀಟ್ವೀಟ್ ಮಾಡಿ ತಾನೂ ಆಕಾಂಕ್ಷಿ ಎಂದರೇ ಸ್ವಾಮಿ?

|
Google Oneindia Kannada News

ನವದೆಹಲಿ, ಮೇ 30: ಭಾರತದ ಹದಿನೈದನೇ ಪ್ರಧಾನಿಯಾಗಿ ಇಂದು ಸಂಜೆ(ಮೇ 30) ಪ್ರಮಾಣ ವಚನ ಸ್ವೀಕರಿಸಲಿರುವ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಯಾರೆಲ್ಲ ಸ್ಥಾನ ಪಡೆಯಬಹುದು ಎಂಬುದು ಭಾರೀ ಕುತೂಹಲ ಕೆರಳಿಸಿದೆ.

ಆರ್ಥಿಕತಜ್ಞ ಸುಬ್ರಮಣಿಯನ್ ಸ್ವಾಮಿ ಹಾಗೆ ಟ್ವೀಟ್ ಮಾಡಿದ್ದೇಕೆ?ಆರ್ಥಿಕತಜ್ಞ ಸುಬ್ರಮಣಿಯನ್ ಸ್ವಾಮಿ ಹಾಗೆ ಟ್ವೀಟ್ ಮಾಡಿದ್ದೇಕೆ?

ಈ ನಡುವೆ ಸುಬ್ರಮಣಿಯನ್ ಸ್ವಾಮಿ ಅವರು ಮಾನವ ಸಂಪನ್ಮೂಲ ಇಲಾಖೆಯ ಸಚಿವರಾಗಲಿ ಎಂದು ವ್ಯಕ್ತಿಯೊಬ್ಬರು ಮಾಡಿದ ಟ್ವೀಟ್ ಅನ್ನು ಸ್ವಾಮಿ ರೀಟ್ವೀಟ್ ಮಾಡಿದ್ದು, ತಾವೂ ಸಚಿವ ಸ್ಥಾನದ ಆಕಾಂಕ್ಷಿ ಎಂಬುದನ್ನು ಸ್ವಾಮಿ ಈ ಮೂಲಕ ವ್ಯಕ್ತಪಡಿಸಿದ್ದಾರೆ.

ಮೋದಿ ಜತೆ ಇಂದು 50-60 ಸಚಿವರ ಪ್ರಮಾಣವಚನ ಸಾಧ್ಯತೆ ಮೋದಿ ಜತೆ ಇಂದು 50-60 ಸಚಿವರ ಪ್ರಮಾಣವಚನ ಸಾಧ್ಯತೆ

ರಾಮಚಂದ್ರ ಆರ್ ಎಂಬುವವರು ತಮ್ಮ ರಾಮ್ ಸೇತು ಎಂಬ ಟ್ವಿಟ್ಟರ್ ಖಾತೆಯಿಂದ ಸುಬ್ರಮಣಿಯನ್ ಸ್ವಾಮಿ ಅವರನ್ನು ಟ್ಯಾಗ್ ಮಾಡಿ, "ಸರ್, ನೀವು ಎನ್ ಡಿಎ ಸರ್ಕಾರದಲ್ಲಿ ಸಕ್ರಿಯ ಸ್ಥಾನ ಪಡೆದು ಮಾನವ ಸಂಪನ್ಮೂಲ ಇಲಾಖೆ ಸಚಿವರಾಗಿ, ಆಗ ಶಾಲಾ ಪಠ್ಯ ಪುಸ್ತಕಗಳನ್ನು ಬದಲಿಸಿಬಹುದು" ಎಂದಿದ್ದರು.

ಈ ಟ್ವೀಟ್ ಅನ್ನು ಸುಬ್ರಮಣಿಯನ್ ಸ್ವಾಮಿ ರೀಟ್ವೀಟ್ ಮಾಡಿದ್ದಾರೆ.

Subramanian Swamy retweets tweet which seeks cabinet berth for him

ಬುಧವರಾವಷ್ಟೇ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಹೊಸ ಎನ್ ಡಿಎ ಸರ್ಕಾರದಲ್ಲಿ ತಮಗೆ ಯಾವುದೇ ಜವಾಬ್ದಾರಿಗಳು ಬೇಡ. ತಾವು ಆರೋಗ್ಯದ ಕಡೆ ಗಮನ ನೀಡಬೇಕು ಎಂಬ ಹೇಳಿಕೆ ನೀಡಿದ್ದರು. ಈ ಬೆಳವಣಿಗೆಗೆ ಪ್ರತಿಕ್ರಿಯೆ ನೀಡಿದ್ದ ಸ್ವಾಮಿ, "ನಾನು ಚೌಕಿದಾರ್ ಅಲ್ಲ, ಬದಲಾಗಿ 'ಮಜದೂರ್' (ಕಾರ್ಮಿಕ). ಏಕೆಂದರೆ, ಬಿಜೆಪಿ ಪರವಾಗಿ ಎಷ್ಟೆಲ್ಲ ಕೇಸುಗಳನ್ನು ಫೈಟ್ ಮಾಡಿ ಪಕ್ಷಕ್ಕಾಗಿ ಬಹುಮಹಡಿ ಕಟ್ಟಡ ನಿರ್ಮಿಸಿದ್ದೇನೆ. ಆದರೆ, ನನಗೇ ಐಷಾರಾಮಿ ಬಂಗಲೆ ಸಿಗುತ್ತಿಲ್ಲ. ಹೀಗೆ ಯಾಕಾಗುತ್ತದೆಂದು ಮಹಾಭಾರತ ಯುದ್ಧದ ನಂತರ ಕೃಷ್ಣನೇ ಅರ್ಜುನನಿಗೆ ವಿವರಿಸಿದ್ದ ಎಂದಿದ್ದರು. ಈ ಒಗಟಿನ ಟ್ವೀಟ್ ಅವರ ಮನಸ್ಸಿನಲ್ಲಿ ಸಚಿವ ಸ್ಥಾನದ ಇಂಗಿತ ಇರುವುದನ್ನೂ, ಮತ್ತು ಪಕ್ಷದಲ್ಲಿ ಮೂಲೆಗುಂಪಾಗುತ್ತಿರುವ ಆತಂಕವನ್ನೂ ವ್ಯಕ್ತಪಡಿಸಿತ್ತು.

English summary
Senior BJP leader Sumbramanian Swamy retweets a tweet in which a person told, He should become HRD minister in NDA government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X