ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲವೇ ವಾರಗಳಲ್ಲಿ ಅನೇಕ ಕಾಂಗ್ರೆಸ್ಸಿಗರು ಜೈಲಿಗೆ: ಸ್ವಾಮಿ ಭವಿಷ್ಯ

|
Google Oneindia Kannada News

ನವದೆಹಲಿ, ಫೆಬ್ರವರಿ 8: ದೇಶದಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಕಳೆದ ಐದು ವರ್ಷದಲ್ಲಿ ಮೋದಿ ಸರ್ಕಾರ ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಟೈಮ್ಸ್ ನೌ ನ್ಯೂಸ್‌ ಜತೆ ಮಾತನಾಡಿರುವ ಅವರು ಕಾಂಗ್ರೆಸ್‌ನ ವಿರುದ್ಧ ವಾಗ್ದಾಳಿ ನಡೆಸಿದರು.

'ಪ್ರಿಯಾಂಕಾ ಗಾಂಧಿ ಮಾನಸಿಕ ಕಾಯಿಲೆ ಇದೆ, ರಾಜಕೀಯಕ್ಕೆ ಸರಿ ಹೊಂದಲ್ಲ''ಪ್ರಿಯಾಂಕಾ ಗಾಂಧಿ ಮಾನಸಿಕ ಕಾಯಿಲೆ ಇದೆ, ರಾಜಕೀಯಕ್ಕೆ ಸರಿ ಹೊಂದಲ್ಲ'

'ನನ್ನ ವೈಯಕ್ತಿಕ ಪ್ರಯತ್ನದಿಂದಲೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇನ್ನೂ ಅನೇಕರನ್ನು ಜಾಮೀನು ಪಡೆದುಕೊಳ್ಳುವ ರೀತಿ ಮಾಡಿದ್ದೇನೆ. ಅದನ್ನೇ ಪ್ರಧಾನಿಯವರು 'ಬೇಲ್ ಗಾಡಿ' ಎಂದು ಕರೆದಿರುವುದು. ಅದು 'ಜೈಲ್ ಗಾಡಿ' ಆಗಿ ಬದಲಾಗಲು ಕ್ಷಣಗಳು ಸಾಕು. ಪಿ ಚಿದಂಬರಂ ಅವರಂತಹ ಇತರರು ಏರ್‌ಸೆಲ್ ಮ್ಯಾಕ್ಸಿಸ್ ಪ್ರಕರಣ ಹಾಗೂ ಐಎನ್‌ಎಕ್ಸ್ ಮೀಡಿಯಾ ಪ್ರಕರಣಗಳಲ್ಲಿ ನಾನು ಸಲ್ಲಿಸಿದ ಅರ್ಜಿ ಆಧಾರದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ' ಎಂದು ಸ್ವಾಮಿ ಹೇಳಿದರು.

Subramanian Swamy on Congress leaders Bail gadi will becomes jail gadi in a matter of time

ವಿಚಾರಣೆ ಮತ್ತು ಭ್ರಷ್ಟರನ್ನು ಹಿಡಿಯುವ ಕೆಲಸದ ವೇಗ ಸುಧಾರಣೆಯಾಗಿದೆ ಎಂದು ಸ್ವಾಮಿ ತಿಳಿಸಿದರು.

 ರಾಮಸೇತು ಬಗ್ಗೆ ಹೇಳುತ್ತಾ ನೆಹರೂ-ಎಡ್ವಿನಾ ಸಂಬಂಧದ ಬಗ್ಗೆ ಸ್ವಾಮಿ ಟ್ವೀಟ್ ರಾಮಸೇತು ಬಗ್ಗೆ ಹೇಳುತ್ತಾ ನೆಹರೂ-ಎಡ್ವಿನಾ ಸಂಬಂಧದ ಬಗ್ಗೆ ಸ್ವಾಮಿ ಟ್ವೀಟ್

'ಈ ಪ್ರಕರಣಗಳು ಚುರುಕಾಗಿವೆ. ಚುನಾವಣೆ ಹತ್ತಿರ ಬರುತ್ತಿರುವ ಕಾರಣಕ್ಕೆ ಈ ಚುರುಕು ಪಡೆದಿಲ್ಲ. ಮುಮದಿನ ಕೆಲವು ವಾರಗಳಲ್ಲಿ ಅನೇಕ ಕಾಂಗ್ರೆಸ್ಸಿಗರು ಜೈಲಿಗೆ ಹೋಗುವುದನ್ನು ನೀವು ನೋಡುತ್ತೀರಿ. ಅದು ಬಹಳ ಬೇಗನೆ ಆಗಬಹುದು' ಎಂದು ಹೇಳಿದರು.

English summary
BJP leader Subramanian Swamy said that, its only a matter of time before the 'bail gadi' becomes 'jail-gadi'. A lot of Congressmen in Jail in the coming weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X