ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್‌ಡಿಡಿ-ಸುಬ್ರಮಣಿಯನ್ ಸ್ವಾಮಿ ಉಪಹಾರ: ಇಡ್ಲಿ-ವಡೆ, ದೋಸೆ ಜೊತೆ ರಾಜಕೀಯ ಲೆಕ್ಕಾಚಾರ!

|
Google Oneindia Kannada News

ನವದೆಹಲಿ, ನವೆಂಬರ್ 30: ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಸಂಸದ ಸುಬ್ರಮಣಿಯನ್ ಸ್ವಾಮಿಯವರ ಇತ್ತೀಚಿನ ರಾಜಕೀಯ ನಡುವಳಿಕೆಗಳು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿ ಕೊಡುತ್ತಿವೆ. ಮಂಗಳವಾರ ಅವರು ಮಾಡಿರುವ ಟ್ವೀಟ್ ಇದಕ್ಕೆ ಮತ್ತಷ್ಟು ಪುಷ್ಟಿ ಒದಗಿಸುವಂತಿದೆ.

"ಇಂದು ಬೆಳಗ್ಗೆ ನನ್ನ ದೀರ್ಘಕಾಲದ ಆತ್ಮೀಯ ಸ್ನೇಹಿತ ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡರ ಆಹ್ವಾನದ ಮೇರೆಗೆ ದೋಸೆ, ಇಡ್ಲಿ ಮತ್ತು ವಡೆ ಉಪಹಾರಕ್ಕಾಗಿ ತೆರಳಿದ್ದು, ಬಹಳ ಸಂತೋಷವಾಗಿದೆ. ಹಳೆಯ ಕಾಲ ಮತ್ತು ಭವಿಷ್ಯದ ಬೆಳವಣಿಗೆ ಬಗ್ಗೆ ಈ ವೇಳೆ ಇಬ್ಬರೂ ಚರ್ಚಿಸಿದೆವು," ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಭಾರತೀಯ ಜನತಾ ಪಕ್ಷದ ಮೇಲ್ಪಕ್ತಿ ನಾಯಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಸಂಸದ ಸುಬ್ರಮಣಿಯನ್ ಸ್ವಾಮಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡನೇ ಅವಧಿ ಸರ್ಕಾರದ ಬಗ್ಗೆ ಹಲವು ಬಾರಿ ಟೀಕಿಸಿದ್ದರು. ಇಂಥ ಬೆಳವಣಿಗೆಗಳ ಮಧ್ಯೆ ಕಳೆದ ತಿಂಗಳು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಅವರನ್ನು ಕೈಬಿಡಲಾಗಿತ್ತು.

Subramanian Swamy meets Former PM HD Deve Gowda

"ಟಿಎಂಸಿ ಸೇರಬೇಕಿಲ್ಲ, ನಾನು ಮಮತಾ ಪರ":

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರನ್ನು ಸುಬ್ರಮಣಿಯನ್ ಸ್ವಾಮಿ ಭೇಟಿ ಮಾಡಿದ್ದರು. ಈ ಬೆಳವಣಿಗೆಯು ಸಾಕಷ್ಟು ರಾಜಕೀಯ ಲೆಕ್ಕಾಚಾರಗಳಿಗೆ ದಾರಿ ಮಾಡಿಕೊಟ್ಟಿತ್ತು. ದೀದಿ ಭೇಟಿ ಬಳಿಕ ಸುಬ್ರಮಣಿಯನ್ ಸ್ವಾಮಿ ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡಿದರು. ನೀವು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೇರುತ್ತೀರಾ ಎಂಬ ಪ್ರಶ್ನೆಗೆ ನಗುನಗುತ್ತಾ ಉತ್ತರಿಸಿದ ಅವರು, ಟಿಎಂಸಿ ಸೇರಬೇಕು ಅಂತೇನಿಲ್ಲ, ನಾನು ಯಾವುಗಲೂ ಮಮತಾ ಬ್ಯಾನರ್ಜಿ ಪರವಾಗಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದರು.

ನಮ್ಮ ಹೋರಾಟ ರಾಜಕೀಯ ರಂಗದಲ್ಲಿ ಮಾತ್ರ:

ಕಳೆದ ಅಕ್ಟೋಬರ್‌ನಲ್ಲಿ ನಡೆಯಲಿರುವ ಜಾಗತಿಕ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಲು ರೋಮ್‌ಗೆ ಭೇಟಿ ನೀಡಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಅನುಮತಿ ನಿರಾಕರಿಸಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಸ್ವಾಮಿ ಟೀಕಿಸಿದ್ದರು. ಅಲ್ಲದೇ ತಮ್ಮ ರಾಜಕೀಯ ನಿಲುವನ್ನು ಟೀಕಿಸುವ ಟ್ವೀಟ್ ಸಂದೇಶಕ್ಕೆ ಸ್ವಾಮಿ ಪ್ರತಿಕ್ರಿಯೆ ನೀಡಿದ್ದರು. "ನನ್ನ ಪ್ರಕಾರ ಮಮತಾ ಬ್ಯಾನರ್ಜಿ ಪಕ್ಕಾ ಹಿಂದೂ ಮತ್ತು ದುರ್ಗಾ ಭಕ್ತರಾಗಿದ್ದಾರೆ. ಇದರ ಆಧಾರದ ಮೇಲೆ ಅವರು ಕಾರ್ಯ ನಿರ್ವಹಿಸುತ್ತಾರೆ. ಅವರ ರಾಜಕೀಯವೇ ಬೇರೆಯಾಗಿದೆ. ನಾವು ಆ ಮೈದಾನದಲ್ಲಿ ಹೋರಾಡುತ್ತೇವೆ," ಎಂದಿದ್ದರು.

ರಾಜೀವ್ ಗಾಂಧಿ ಹಂತಕರ ಪ್ರಕರಣದ ಉಲ್ಲೇಖ:

"ಭಾರತದ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡಬೇಕೆ ಅಥವಾ ಬೇಡವೇ ಎಂಬುದನ್ನು ಡಿಸೆಂಬರ್ 7ರಂದು ಸುಪ್ರೀಂಕೋರ್ಟ್ ನಿರ್ಧರಿಸುತ್ತದೆ. ಈ ಅಪರಾಧಿಗಳಿಗೆ 1999ರಲ್ಲಿಯೇ ಸುಪ್ರೀಂಕೋರ್ಟ್ ನಿಂದ ಮರಣದಂಡನೆ ವಿಧಿಸಲಾಗಿದ್ದು, ಅಕ್ಟೋಬರ್ 6. 1999ರಂದು ಗಲ್ಲಿಗೇರಿಸಬೇಕಿತ್ತು. ಆದರೆ TDK ಮನವಿಯ ಮೇರೆಗೆ ABV ಅದನ್ನು ವಿಳಂಬಗೊಳಿಸಿತು. ಈ ವಿಳಂಬದಿಂದಾಗಿ ಸುಪ್ರೀಂಕೋರ್ಟ್ ನಂತರದಲ್ಲಿ ಶಿಕ್ಷೆಯನ್ನು ದುರ್ಬಲಗೊಳಿಸಿತು! SC ಈಗ ಅವರನ್ನು ಮುಕ್ತಗೊಳಿಸುತ್ತದೆಯೇ!!!!?," ಎಂದು ಸುಬ್ರಮಣಿಯನ್ ಸ್ವಾಮಿ ಕೂ ಮಾಡಿದ್ದಾರೆ.

ಡಿಸೆಂಬರ್ 7ರಂದು ಸುಪ್ರೀಂಕೋರ್ಟ್ ತೀರ್ಪು:

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಏಳು ಅಪರಾಧಿಗಳ ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದ ಪ್ರಕರಣವನ್ನು ಡಿಸೆಂಬರ್ 7ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ನಿರೀಕ್ಷೆಯಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮುನೀಶ್ವರ್ ನಾಥ್ ಭಂಡಾರಿ ಮತ್ತು ನ್ಯಾಯಮೂರ್ತಿ ಪಿ.ಡಿ. ಆದಿಕೇಶವಲು ನೇತೃತ್ವದ ವಿಭಾಗೀಯ ಪೀಠದ ಎಂದು ಹಾಜರಾದ ಅಡ್ವೊಕೇಟ್-ಜನರಲ್ ಆರ್. ಶುಣ್ಮುಗಸುಂದರಂ ಈ ಬಗ್ಗೆ ಪ್ರಸ್ತಾಪಿಸಿದ್ದರು. 2016ರಲ್ಲಿ ಆರು ಅಪರಾಧಿಗಳ ಪೈಕಿ ಒಬ್ಬರಾದ ಎಜಿ ಪೆರಾರಿವಾಲನ್ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಹೇಳಿದ್ದರು.

Recommended Video

ಕೃಷಿ ಕಾಯ್ದೆ ರದ್ದತಿ ಮಸೂದೆ ಮಂಡಿಸಲು ಸರ್ಕಾರದ ಸಿದ್ಧತೆ ಹೇಗಿದೆ? | Oneindia Kannada

English summary
Subramanian Swamy meets Former PM HD Deve Gowda. HD Deve Gowda invited him for Idli dosa vada breakfast. He said Discussed old times and future developments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X