ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

47 ವರ್ಷದ ಬಳಿಕ ಬಡ್ಡಿ ಸಮೇತ ಸಂಬಳ ಪಡೆದ ಸುಬ್ರಮಣಿಯನ್ ಸ್ವಾಮಿ!

|
Google Oneindia Kannada News

Recommended Video

20 ವರ್ಷಗಳ ಹೋರಾಟಕ್ಕೆ ಅಂತೂ ಸಿಕ್ಕಿತು ಜಯ | Oneindia Kannada

ನವದೆಹಲಿ, ಏಪ್ರಿಲ್ 9: ತಮ್ಮ ರಾಜಕೀಯ ವೈರಿಗಳನ್ನು ಕಾನೂನಾತ್ಮಕವಾಗಿ ಹಣಿಯುವುದರಲ್ಲಿ ನಿಸ್ಸೀಮರಾದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಮತ್ತೊಂದು ಕಾನೂನು ಹೋರಾಟದಲ್ಲಿ ಜಯಗಳಿಸಿದ್ದಾರೆ. ಆದರೆ, ಇದು ಅವರ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ್ದು.

ತಮಗೆ ಬಾಕಿ ಉಳಿದಿದ್ದ 20 ವರ್ಷಗಳ ಸಂಬಳವನ್ನು ಅವರು ಸುಮಾರು 28 ವರ್ಷಗಳ ಬಳಿಕ ಪಡೆದುಕೊಳ್ಳಲಿದ್ದಾರೆ. ಈ ಹಣದ ಮೊತ್ತ ಹೆಚ್ಚೂ ಕಡಿಮೆ 45 ಲಕ್ಷ ರೂಪಾಯಿ.

ಲೋಕಸಭೆ ಚುನಾವಣೆಗೂ ಮುನ್ನ ಸುಬ್ರಮಣಿಯನ್ ಸ್ವಾಮಿ ಶಾಕಿಂಗ್ ಹೇಳಿಕೆಲೋಕಸಭೆ ಚುನಾವಣೆಗೂ ಮುನ್ನ ಸುಬ್ರಮಣಿಯನ್ ಸ್ವಾಮಿ ಶಾಕಿಂಗ್ ಹೇಳಿಕೆ

1972ರಿಂದ 1991ರ ಅವಧಿಯಲ್ಲಿ ಅವರಿಗೆ ಬಾಕಿ ಉಳಿಸಿಕೊಂಡಿದ್ದ ವೇತನವನ್ನು ಪಾವತಿಸುವಂತೆ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಸ್ಥಳೀಯ ನ್ಯಾಯಾಲಯವೊಂದು ಆದೇಶಿಸಿದೆ.

Subramanian swamy legal battle with IIT Delhi for his salary due with 8 per cent interest

ಆರ್ಥಿಕ ತಜ್ಞರಾಗಿರುವ ಸುಬ್ರಮಣಿಯನ್ ಸ್ವಾಮಿ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಐಐಟಿ) ಅರ್ಥಶಾಸ್ತ್ರ ವಿಷಯದ ಪ್ರೊಫೆಸರ್ ಆಗಿ ಮೂರು ವರ್ಷ ಕೆಲಸ ಮಾಡಿದ್ದರು. ಆದರೆ ಅವರ ಮತ್ತು ಸಂಸ್ಥೆಯ ನಡುವೆ ಕಾನೂನಾತ್ಮಕ ಹೋರಾಟ ನಡೆದಿತ್ತು.

ಟ್ರೆಂಡಿಂಗ್ : ಮೋದಿ 'ಚೌಕಿದಾರ' ಅಭಿಯಾನದ ಬಗ್ಗೆ 'ಬಾಹ್ಮಣ' ಸ್ವಾಮಿ ಟ್ರೆಂಡಿಂಗ್ : ಮೋದಿ 'ಚೌಕಿದಾರ' ಅಭಿಯಾನದ ಬಗ್ಗೆ 'ಬಾಹ್ಮಣ' ಸ್ವಾಮಿ

ಈಗ 1972ರಿಂದ 1991ರ ಅವಧಿಯ ಸುಮಾರು 20 ವರ್ಷದ ವೇತನವನ್ನು ಅವರಿಗೆ ಸಂಸ್ಥೆ ನೀಡುವಂತಾಗಿದೆ. ಮೊತ್ತಕ್ಕೆ ಶೇ 8ರ ಬಡ್ಡಿದರವನ್ನು ಸೇರಿಸಿ ಸುಬ್ರಮಣಿಯನ್ ಸ್ವಾಮಿ ಅವರಿಗೆ ಪಾವತಿ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಇದರಿಂದ ಸ್ವಾಮಿ ಅವರು ಅಂದಾಜು 40 ರಿಂದ 45 ಲಕ್ಷ ರೂಪಾಯಿ ಪಡೆದುಕೊಳ್ಳಲಿದ್ದಾರೆ.

ಈ ವಿಚಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಂಸ್ಥೆಯ ಆಡಳಿತಾಧಿಕಾರಿಗಳ ಮಂಡಳಿಗೆ ಬಿಡುವುದಾಗಿ ಐಐಟಿ ದೆಹಲಿಯ ಅಧಿಕಾರಿಗಳು ತಿಳಿಸಿದ್ದಾರೆ.

'ನಾವು ಮಂಡಳಿಗೆ ಮಾಹಿತಿ ನೀಡಲಿದ್ದೇವೆ. ಮುಂದಿನ ಕ್ರಮ ಏನು ಎಂಬುದನ್ನು ಅವರೇ ನಿರ್ಧಾರ ಮಾಡಲಿದ್ದಾರೆ' ಎಂದು ಐಐಟಿ-ದೆಹಲಿ ನಿರ್ದೇಶಕ ವಿ. ರಾಮ್‌ಗೋಪಾಲ ರಾವ್ ಹೇಳಿದ್ದಾರೆ.

ಇದು ದೇಶ ರಕ್ಷಣೆ ಕಾರ್ಯ, ಗಡಿ ಕಾನೂನು ಉಲ್ಲಂಘಿಸಿಲ್ಲ : ಸ್ವಾಮಿ ಇದು ದೇಶ ರಕ್ಷಣೆ ಕಾರ್ಯ, ಗಡಿ ಕಾನೂನು ಉಲ್ಲಂಘಿಸಿಲ್ಲ : ಸ್ವಾಮಿ

ರಾಜಕಾರಣಕ್ಕೆ ಬರುವ ಮುನ್ನ ಸ್ವಾಮಿ ಅವರು ಐಐಟಿಯಲ್ಲಿ 1969-1972ರ ವರೆಗೆ ಮೂರು ವರ್ಷ ಅರ್ಥಶಾಸ್ತ್ರ ಬೋಧಿಸಿದ್ದರು. ಆದರೆ, ಆಡಳಿತಮಂಡಳಿಯೊಂದಿಗೆ ಅನೇಕ ಮನಸ್ತಾಪಗಳು ಉಂಟಾದ ಕಾರಣ ಸ್ವಾಮಿ ಅವರನ್ನು ಸಂಸ್ಥೆಯಿಂದ ವಜಾ ಮಾಡಲಾಗಿತ್ತು. ಇದರನ್ನು ಸ್ವಾಮಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ದೆಹಲಿಯ ನ್ಯಾಯಾಲಯವೊಂದು 1991ರಲ್ಲಿ ಸ್ವಾಮಿ ಮರು ನೇಮಕಕ್ಕೆ ಸೂಚಿಸಿತ್ತು. ತಮ್ಮನ್ನು ವಜಾಗೊಳಿಸಿದ್ದು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದ ಸ್ವಾಮಿ, ಈ ಅವಧಿಯಲ್ಲಿ ತಮಗೆ ಬರಬೇಕಿದ್ದ ಬಾಕಿ ವೇತನವನ್ನು ನೀಡುವಂತೆ ಒತ್ತಾಯಿಸಿದ್ದರು.

'ಕೋರ್ಟ್ ಆದೇಶವು ಶೈಕ್ಷಣಿಕ ಜಗತ್ತಿನಲ್ಲಿರುವ ಎಲ್ಲ ಖದೀಮರಿಗೆ ಉದಾಹರಣೆಯಾಗಬೇಕು' ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

'47 ವರ್ಷಗಳ ಬಳಿಕ ಸಾಕೇತ್ ಕೋರ್ಟ್‌ನಲ್ಲಿ ಐಐಟಿ ದೆಹಲಿ ನನಗೆ ಸೋತಿದೆ. ಶೇ 8ರ ವಾರ್ಷಿಕ ಬಡ್ಡಿದರದಲ್ಲಿ ನನ್ನ ವೇತನದ ಮೊತ್ತವನ್ನು ಪಾವತಿಸಬೇಕಿದೆ. ಇದು ಶೈಕ್ಷಣಿಕ ಜಗತ್ತಿನಲ್ಲಿರುವ ಎಲ್ಲ ಖದೀಮರಿಗೆ ಉದಾಹರಣೆಯಾಗಲಿ' ಎಂದು ಅವರು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

English summary
BJP leader Subramanian Swamy won the legal battle with IIT Delhi. A Delhi court Monday ordered the IIT Delhi to pay his salary for the period between 1971-1992 with the interest rate of 8% per annum. Swamy has worked in the institute between 1969 to 1971 as an economics professor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X