ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಬಿಐ ಗವರ್ನರ್ ದಾಸ್ ಆಯ್ಕೆಗೆ ಸುಬ್ರಮಣಿಯನ್ ಸ್ವಾಮಿ ವಿರೋಧ, ಮೋದಿಗೆ ಪತ್ರ

|
Google Oneindia Kannada News

ನವದೆಹಲಿ, ಡಿಸೆಂಬರ್ 12: ಭಾರತೀಯ ರಿಸರ್ವ್ ಬ್ಯಾಂಕ್ ನ ನೂತನ ಗವರ್ನರ್ ಆಗಿ ಆಯ್ಕೆಯಾಗಿರುವ ಶಕ್ತಿಕಾಂತ ದಾಸ್ ಅವರ ನೇಮಕವನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ವಿರೋಧಿಸಿದ್ದಾರೆ.

ಆರ್‌ಬಿಐ ಗವರ್ನರ್‌ ಆಗಿ ದಾಸ್‌ ನೇಮಕ: ಚಿದಂಬರಂ ವಿರೋಧ ಆರ್‌ಬಿಐ ಗವರ್ನರ್‌ ಆಗಿ ದಾಸ್‌ ನೇಮಕ: ಚಿದಂಬರಂ ವಿರೋಧ

ಭ್ರಷ್ಟಾಚಾರ ಪ್ರಕರಣಗಳಲ್ಲಿ ಇವರ ವಿರುದ್ಧ ಆರೋಪಗಳಿದ್ದು ಮಾಜಿ ಸಚಿವ ಪಿ ಚಿದಂಬರಂ ಪರವಾಗಿ ಕೆಲಸ ಮಾಡಿದ್ದಾರೆ.ಅಂತಹ ಅಧಿಕಾರಿಯನ್ನು ಆರ್‌ಬಿಐ ಗವರ್ನರ್ ಹುದ್ದೆಗೆ ಪರಿಗಣಿಸಬಾರದು ಎಂದು ಸುಬ್ರಮಣಿಯನ್ ಸ್ವಾಮಿ ಒತ್ತಾಯಿಸಿದ್ದಾರೆ. ಇಷ್ಟೇ ಅಲ್ಲದೆ ಸರ್ಕಾರದ ನಿರ್ಧಾರ ಸರಿ ಇಲ್ಲ ಎಂದು ಪ್ರಧಾನಿ ಮೋದಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಶಕ್ತಿಕಾಂತ್ ದಾಸ್ ಅವರು ಆರ್‌ಬಿಐ ಗವರ್ನರ್ ಆಗಿ ನೇಮಕವಾಗಿರುವುದನ್ನು ಮೊದಲು ಪಿ ಚಿದಂಬರಂ ವಿರೋಧಿಸಿದ್ದರು, ಬಳಿಕ ಸುಬ್ರಮಣಿಯನ್ ಸ್ವಾಮಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ನೇಮಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ನೇಮಕ

Subramanian swamy disagree with RBI Governor Appointment

ನೋಟು ಅಮಾನ್ಯೀಕರಣ ವಿರೋಧಿಸುತ್ತಿದ್ದಂತಹ ಕೆಲವರು ಹಾಗೆಯೇ ನೋಟು ಅಪಮನಗದೀಕರಣವನ್ನು ಸರಿಯಾಗಿ ಜಾರಿ ಮಾಡಿಲ್ಲ ಎನ್ನುವ ಕಾರಣಕ್ಕೂ ಹಲವರಿಂದ ವಿರೋಧ ವ್ಯಕ್ತವಾಗುತ್ತಿದೆ.

 ಊರ್ಜಿತ್ ಪಟೇಲ್ ರಾಜೀನಾಮೆ : ರೂಪಾಯಿ ಮೌಲ್ಯ ಕುಸಿತ ಊರ್ಜಿತ್ ಪಟೇಲ್ ರಾಜೀನಾಮೆ : ರೂಪಾಯಿ ಮೌಲ್ಯ ಕುಸಿತ

ಸಮಾಜಿಕ ಜಾಲತಾಣಗಳಲ್ಲೂ ಕೂಡ ಶಕ್ತಿಕಾಂತ್ ದಾಸ್ ಅವರ ವಿರುದ್ಧ ವಿರೋಧ ವ್ಯಕ್ತವಾಗಿತ್ತು ಯಾಕೆಂದರೆ ಅವರಿಗೆ ಶೈಕ್ಷಣಿಕ ಹಿನ್ನೆಲೆಯಿಲ್ಲ, ಆರ್ಥಿಕತೆಗೆ ಸಂಬಂಧಪಟ್ಟ ಅನುಭವವಿಲ್ಲ ಕೇವಲ ಆಡಳಿತಾತ್ಮಕ ಹುದ್ದೆ ಎನ್ನಬಹುದೇ ಹೊರತು ಆರ್‌ಬಿಐ ಗೆ ಬೇಕಾದಂತಹ ಯಾವುದೇ ಅರ್ಹತೆಯಿಲ್ಲ ಎನ್ನುವ ಮಾತುಗಳು ಕೇಳಿಬಂದಿದ್ದವು. 2015-17ರವರೆಗೂ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಶಕ್ತಿಕಾಂತ್ ದಾಸ್ ಆರ್‌ಬಿಐನ 25ನೇ ಗವರ್ನರ್ ಆಗಿ ಸಧಿಕಾರ ವಹಿಸಿಕೊಳ್ಳಲಿದ್ದಾರೆ.

English summary
Senir BJP leader and Rajyasabha member Subramanian swamy concern about RBI Governor appointment. He wrote a letter to Prime Minister Naredra Modi regarging Shaktikanta Das appointment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X