ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ, ಮತ್ತವರ ಸಂಪುಟದ ಬಗ್ಗೆ ಸ್ವಾಮಿ ವ್ಯಾಪಕ ಟೀಕೆ!

|
Google Oneindia Kannada News

"ಶೈಕ್ಷಣಿಕ ಹಿನ್ನೆಲೆಯ ಕೊರತೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಚಿವರನ್ನು ಆಯ್ಕೆ ಮಾಡುವ ವಿಚಾರದಲ್ಲಿ ತಮ್ಮ ಸ್ನೇಹಿತರ ಮೇಲೆ ಅವಲಂಬಿತರಾಗಿದ್ದಾರೆ. ಅವರು ಎಂದಿಗೂ ಮೋದಿ ಅವರಿಗೆ ಸತ್ಯವನ್ನು ಹೇಳುವುದಿಲ್ಲ" ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದ. ಭಾರತದ ಸಿನಿಮಾದಲ್ಲಾದರೂ ತರ್ಕ ಹುಡುಕಬಹುದು, ಆದರೆ ಸಚಿವೆ ನಿರ್ಮಲಾ?ದ. ಭಾರತದ ಸಿನಿಮಾದಲ್ಲಾದರೂ ತರ್ಕ ಹುಡುಕಬಹುದು, ಆದರೆ ಸಚಿವೆ ನಿರ್ಮಲಾ?

ಸ್ವಾಮಿ ಅವರ 'Reset: Regaining India's Economic Legacy' ಎಂಬ ಹೊಸ ಪುಸ್ತಕದಲ್ಲಿ ಸುಬ್ರಮಣಿಯನ್ ಸ್ವಾಮಿ ಅವರು ಮೋದಿ ಸರ್ಕಾರ ಆರ್ಥಿಕತೆಯನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಲು ವಿಫಲವಾಗುತ್ತಿರುದೇಕೆ ಎಂಬ ಕಾರಣ ನೀಡಿದ್ದಾರೆ. ಮೋದಿ ತಮ್ಮ ಸಂಪುಟಕ್ಕೆ ಆಯ್ಕೆ ಮಾಡಿಕೊಂದಿರುವ ಹಲವು ಸಚಿವರಲ್ಲಿ ಜ್ಞಾನವಿಲ್ಲ ಎಂದು ಸ್ವಾಮಿ ನೇರವಾಗಿ ಈ ಪುಸ್ತಕದಲ್ಲಿ ಬರೆದಿದ್ದಾರೆ.

ಅವರ ಪುಸ್ತಕದ ಕೆಲವು ಮುಖ್ಯ ಭಾಗಗಳನ್ನು "ದಿ ಪ್ರಿಂಟ್" ಪ್ರಕಟಿಸಿದ್ದು, ಅವುಗಳ ಅನುವಾದ ಇಲ್ಲಿದೆ.

ನನಗೆ ಯುಪಿಎ ಸರ್ಕಾರದ ಮೇಲೆ ನಂಬಿಕೆ ಇರಲಿಲ್ಲ!

ನನಗೆ ಯುಪಿಎ ಸರ್ಕಾರದ ಮೇಲೆ ನಂಬಿಕೆ ಇರಲಿಲ್ಲ!

"ನನಗೆ ಎಂದಿಗೂ ಯುಪಿಎ ಸರ್ಕಾರದ ಮೇಲೆ ನಂಬಿಕೆ ಇರಲಿಲ್ಲ. ಒಬ್ಬ ಅತ್ಯುತ್ತಮ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೂ ಅವರಿಗೆ ಸರ್ಕಾರವನ್ನು ಸರಿಯಾಗಿ ನಡೆಸಲು ಸಾಧ್ಯವಾಗಲಿಲ್ಲ. ಅವರ ಸರ್ಕಾರದ ಹಿರಿಯ ಮುಖಂಡರೇ ಬಹುದೊಡ್ಡ ಹಗರಣಗಳಲ್ಲಿ ತೊಡಗಿದರು"- ಸುಬ್ರಮಣಿಯನ್ ಸ್ವಾಮಿ

ಮೋದಿ ಭ್ರಷ್ಟ ಅಲ್ಲ

ಮೋದಿ ಭ್ರಷ್ಟ ಅಲ್ಲ

"ಮನಮೋಹನ್ ಸಿಂಗ್ ಅವರಿಗೆ ಹೋಲಿಸಿದರೆ ಮೋದಿ ಓದಿದ್ದು ಬಹಳ ಕಡಿಮೆ. ಅವರಿಗೆ ಸಣ್ಣ ಆರ್ಥಿಕತೆಯ ಬಗ್ಗೆ ತಿಳಿವಳಿಕೆ ಇದೆಯಷ್ಟೇ, ಬೃಹತ್ ಆರ್ಥಿಕತೆಯ ಬಗ್ಗೆ ತಿಳಿವಳಿಕೆ ಇಲ್ಲ. ಆದರೆ ಅವರು ಬಹಳ ಪರಿಶ್ರಮ ವಹಿಸಿ ಕೆಲಸ ಮಾಡುವ ಮಧ್ಯಮ ವರ್ಗದವರು. ಆದ್ದರಿಂದಲೇ ಅವರು ಅತ್ಯುತ್ತಮ ಜನಾದೇಶ ಪಡೆದಿದ್ದು. ಅವರು ವೈಯಕ್ತಿಕವಾಗಿ ಭ್ರಷ್ಟರಲ್ಲ, ಹಣಕ್ಕೆ ಆಸೆ ಪಡುವುದಿಲ್ಲ. ಆದರೆ...."

ಓಲಾ, ಉಬರ್ ಬಳಕೆ ಹೆಚ್ಚಾಗಿ ಕಾರು ಮಾರಾಟದಲ್ಲಿ ಇಳಿಕೆ: ನಿರ್ಮಲಾಓಲಾ, ಉಬರ್ ಬಳಕೆ ಹೆಚ್ಚಾಗಿ ಕಾರು ಮಾರಾಟದಲ್ಲಿ ಇಳಿಕೆ: ನಿರ್ಮಲಾ

ಶಿಕ್ಷಣದ ಕೊರತೆ

ಶಿಕ್ಷಣದ ಕೊರತೆ

"... ಆದರೆ ಶಿಕ್ಷಣದ ಕೊರತೆಯಿಂದಾಗಿ ಅವರು ತಮ್ಮ ಸಚಿವ ಸಂಪುಟದ ಸಚಿವರ ಮೇಲೆ ಅತಿಯಾಗಿ ಅವಲಂಬಿತರಾಗಬೇಕಿದೆ. ಜ್ಞಾನವಿಲ್ಲದ ಎಷ್ಟೋ ಮಂತ್ರಿಗಳು ಸಂಪುಟದಲ್ಲಿದ್ದಾರೆ. ಅವರು ಎಂದಿಗೂ ಮೋದಿಯವರಿಗೆ ಸತ್ಯ ಹೇಳುವುದಿಲ್ಲ. ಅಪನಗದೀಕರಣದ ಮೂರ್ಖತನ ಮತ್ತು ಅರ್ಥವಿಲ್ಲದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಆರ್ಥಿಕತೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂಬ ಸತ್ಯವನ್ನು ಅವರು ಮೋದಿಯವರಿಗೆ ಹೇಳಿಲ್ಲ"- ಸುಬ್ರಮಣಿಯನ್ ಸ್ವಾಮಿ

ಲೋಕಸಭೆ ಚುನಾವಣೆಯಲ್ಲಿ ಪಥ ಬದಲಿಸಿದ ಬಿಜೆಪಿ!

ಲೋಕಸಭೆ ಚುನಾವಣೆಯಲ್ಲಿ ಪಥ ಬದಲಿಸಿದ ಬಿಜೆಪಿ!

"ಲೋಕಸಭೆ ಚುನಾವಣೆಯಲ್ಲಿ ಆರ್ಥಿಕ ಅಭಿವೃದ್ಧಿಯ ಬಗ್ಗೆ ಹೇಳಿಕೊಳ್ಳುವುದಕ್ಕೆ ಬಿಜೆಪಿ ಬಳಿ ಏನೂ ಇರಲಿಲ್ಲ. ಆದ್ದರಿಂದಲೇ ಅದು ರಾಷ್ಟ್ರದ ಭದ್ರತೆ, ಭ್ರಷ್ಟಾಚಾರ ನಿರ್ಮೂಲನೆ, ವಿಕಾಸ... ಎನ್ನುತ್ತ ಪ್ರಚಾರದ ಪಥ ಬದಲಿಸಿತು"- ಸುಬ್ರಮಣಿಯನ್ ಸ್ವಾಮಿ

ಸಮಸ್ಯೆ ಏನು ಅಂದ್ರೆ...

ಸಮಸ್ಯೆ ಏನು ಅಂದ್ರೆ...

"ಮೋದಿಯವರಿಗೆ ತಮ್ಮ ವಿರುದ್ಧ ಯಾರೂ ರಾಜಕೀಯ ಪ್ರತಿಸ್ಪರ್ಧಿಗಳು ಬೇಕಿಲ್ಲ. ಅವರು ತಾವೇ ಪ್ರಾಬಲ್ಯ ಸಾಧಿಸಲು ಬಯಸುತ್ತಾರೆ. ಆದರೆ ಅವರು ಹಲವು ಸಂಕೀರ್ಣ ವಿಷಯಗಳನ್ನು ತಿಳಿಯಲು ತಮ್ಮ ರಾಜಕೀಯ ಸಲಹಗಾರರು ಮತ್ತು ಸಹೋದ್ಯೋಗಿಗಳ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಆ ವಿಷಯಗಳು ಅವರ ಸಹೋದ್ಯೋಗಿಗಳಿಗೂ ಹೆಚ್ಚು ತಿಳಿದಿರುವುದಿಲ್ಲ. ಅವರು(ಮೋದಿ) ನೇಮಿಸಿದ ಅಂಜುಬುರುಕ ಆರ್ಥಿಕತಜ್ಞರು ಸತ್ಯವನ್ನು ಹೇಳದೆ, ಮೋದಿ ಯಾವುದನ್ನು ಕೇಳಲು ಬಯಸುತ್ತಾರೋ ಅದನ್ನು ಮಾತ್ರವೇ ಹೇಳುತ್ತಾರೆ" -ಸುಬ್ರಮಣಿಯನ್ ಸ್ವಾಮಿ

ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಜಿಡಿಪಿ ಇಳಿಕೆ ಒಂದು ಭಾಗವಷ್ಟೇ: ನಿರ್ಮಲಾಅಭಿವೃದ್ಧಿ ಪ್ರಕ್ರಿಯೆಯಲ್ಲಿ ಜಿಡಿಪಿ ಇಳಿಕೆ ಒಂದು ಭಾಗವಷ್ಟೇ: ನಿರ್ಮಲಾ

ಸರ್ಕಾರಕ್ಕೆ ಬೇಕಿರುವುದು ಅನುಭವಿಗಳು

ಸರ್ಕಾರಕ್ಕೆ ಬೇಕಿರುವುದು ಅನುಭವಿಗಳು

ಸರ್ಕಾರಕ್ಕೆ ಈಗ ಬೇಕಿರುವುದು ಸಮಸ್ಯೆಗಳನ್ನು ಬಗೆಹರಿಸಬಲ್ಲ ಅನುಭವೀ, ವೃತ್ತಿಪರ ತಂಡ. ರಾಜಕೀಯವಾಗಿ ಬುದ್ಧಿವಂತರಾದ ಆರ್ಥಿಕತಜ್ಞರೂ ನಮ್ಮ ಅಗತ್ಯ. ಬೃಹತ್ ಆರ್ಥಿಕತೆಯ ಚೌಕಟ್ಟಿನ ಬಗ್ಗೆ ಜ್ಞಾನವನ್ನು, ತರಬೇತಿಯನ್ನು ಹೊಂದಿರುವ ಯಾವ ಸಚಿವರೂ ಸಂಪುಟದಲ್ಲಿಲ್ಲ. ನಮಗೀಗ ತರಬೇತಿ ಉಳ್ಳ ಸಚಿವರ ಅಗತ್ಯವಿದೆ'- ಸುಬ್ರಮಣಿಯನ್ ಸ್ವಾಮಿ'

English summary
BJP leader Subramanian Swamy in his New Book 'Reset: Regaining India's Economic Legacy' blames PM Narendra Modi's cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X