ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ವಿದೇಶಿ ವಿದ್ಯಾರ್ಥಿಗಳ ಓದಿಗೆ 'ಸ್ಟಡಿ ಇನ್ ಇಂಡಿಯಾ' ಯೋಜನೆ

|
Google Oneindia Kannada News

ನವದೆಹಲಿ, ಜುಲೈ 5: ಭಾರತದಲ್ಲಿ ವಿದೇಶಿ ವಿದ್ಯಾರ್ಥಿಗಳ ಓದಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ 'ಸ್ಟಡಿ ಇನ್ ಇಂಡಿಯಾ' ಯೋಜನೆ ಜಾರಿ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

2019ರ ಕೇಂದ್ರ ಬಜೆಟ್‌ ವೇಳೆ ಈ ವಿಷಯ ಘೋಷಿಸಿದ ಅವರು ರಾಷ್ಟ್ರೀಯ ಸಂಶೋಧನಾ ಸಂಸ್ಥೆಯು ದೇಶದಲ್ಲಿ ಹೊಸ ಸಂಶೋಧನೆಗಳಿಗೆ ಒತ್ತು ನೀಡಬೇಕು ಹಾಗೂ ಬಂಡವಾಳ ಹೂಡಲು ಸಿದ್ಧವಿರಬೇಕು ಉತ್ತೇಜನ ನೀಡಬೇಕು ಎಂದರು.

ಕೇಂದ್ರ ಬಜೆಟ್ Liive Updates: ಪ್ರತಿ ಮನೆಗೂ ಶುದ್ಧ ಕುಡಿಯುವ ನೀರುಕೇಂದ್ರ ಬಜೆಟ್ Liive Updates: ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಬಿಗ್ ಡಾಟಾ, ರೊಬೊಟಿಕ್ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಸಂಶೋಧನೆಯಲ್ಲಿ ತೊಡಗುವಂತೆ ಮಾಡಬೇಕಿದೆ. ವಿಶ್ವ ಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ನಿರ್ಮಲಾ ಸೀತಾರಾಮನ್ 400 ಕೋಟಿ ರೂ ಅನುದಾನ ನೀಡುವುದಾಗಿ ಘೋಷಿಸಿದ್ದಾರೆ.

Study in India project announced for foreign students study

ಮೂರು ವಿದ್ಯಾ ಸಂಸ್ಥೆಗಳಿಗೆ ವಿಶ್ವ ಮಾನ್ಯತೆ ನೀಡಲಾಗುತ್ತದೆ, ವಿಶ್ವ ಮಟ್ಟದ ಸಂಸ್ಥೆಯನ್ನಾಗಿಸಲು ಅನುದಾನ ನೀಡಲಾಗುತ್ತದೆ.

100 ಗ್ಲೋಬಲ್‌ ಶಿಕ್ಷಣ ಸಂಸ್ಥೆಗಳಲ್ಲಿ ಬೆಂಗಳೂರಿನ ಎರಡು ಐಐಟಿ ಹಾಗೂ ಐಐಎಸ್‌ಸಿಯು ಮೊದಲನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರವು ಸ್ಟಡಿ ಇನ್ ಇಂಡಿಯಾ ಯೋಜನೆಗೆ ಪುಣೆಯನ್ನು ಕೇಂದ್ರವನ್ನಾಗಿಸಿಕೊಂಡಿದೆ.

English summary
Union budget 2019: Finance minister Nirmala sitharaman announced Study in India project for Foreign students to study in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X