ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕು ನಿಮಿಷಕ್ಕೆ ಒಂದು ಆತ್ಮಹತ್ಯೆ: ಇದು ಭಾರತೀಯರ ಕಥೆ!

|
Google Oneindia Kannada News

ನವದೆಹಲಿ, ನವೆಂಬರ್.20: ಭಾರತದ ಜನಸಂಖ್ಯೆ 125 ಕೋಟಿ ದಾಟಿದ್ದು ಎಲ್ಲರಿಗೂ ಗೊತ್ತಿದೆ. ಆದರೆ, ಇದೇ ದೇಶದಲ್ಲಿ ಒಂದು ಗಂಟೆಗೆ 15 ಮಂದಿ ಪ್ರಾಣ ಬಿಡುತ್ತಿದ್ದಾರೆ ಎಂಬ ಆಘಾತಕಾರಿ ವಿಚಾರ ಇದೀಗ ಹೊರ ಬಿದ್ದಿದೆ.

ಹೌದು, ಅಚ್ಚರಿ ಎನಿಸಿದರೂ ಇದು ಸತ್ಯ. ದೇಶದಲ್ಲಿ ನಾಲ್ಕು ನಿಮಿಷಕ್ಕೆ ಒಬ್ಬರು ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಬಿಡುತ್ತಿದ್ದಾರಂತೆ. ಅಂದರೆ ಒಂದು ಗಂಟೆಗೆ 15 ಮಂದಿ ಆತ್ಮಹತ್ಯೆಯಿಂದ ಸಾವನ್ನಪ್ಪುತ್ತಿರುವ ವಿಷಯವನ್ನು ವರದಿಯಂದು ಬಹಿರಂಗಪಡಿಸಿದೆ. ಕೌಟುಂಬಿಕ ಸಮಸ್ಯೆ, ಅನಾರೋಗ್ಯದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡವರೇ ಹೆಚ್ಚು ಎಂದು ಹೇಳಲಾಗಿದೆ.

ಐಐಟಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ: ಪ್ರೊಫೆಸರ್ ಮೇಲೆ ಪೋಷಕರ ಅನುಮಾನಐಐಟಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ: ಪ್ರೊಫೆಸರ್ ಮೇಲೆ ಪೋಷಕರ ಅನುಮಾನ

ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯುರೋ ಈ ಬಗ್ಗೆ ಆಘಾತಕಾರಿ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ ಒಂದು ವರ್ಷದಲ್ಲಿ 1 ಲಕ್ಷ 31 ಸಾವಿರದ 8 ಜನರು ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ಅಂಕಿ-ಅಂಶಗಳು 2018ರ ಸಾಲಿನದ್ದಲ್ಲ. ಬದಲಿಗೆ 2016ರಲ್ಲಿ ನಡೆದ ಆತ್ಮಹತ್ಯೆಗಳ ಬಗ್ಗೆ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 Studies Said: 15 Indians Suicide In Every Hour.

ಆತ್ಮಹತ್ಯೆ ಮಾಡಿಕೊಂಡವರಲ್ಲಿ ಪುರುಷರೇ ಹೆಚ್ಚು!

ಇನ್ನೊಂದು ಅಂಕಿ-ಅಂಶಗಳ ಪ್ರಕಾರ ಪುರುಷರಿಗೆ ಹೋಲಿಸಿ ನೋಡಿದರೆ ಮಹಿಳೆಯರೇ ಮಾನಸಿಕವಾಗಿ ಸ್ಟ್ರಾಂಗ್ ಎನ್ನಲಾಗಿದೆ. ಏಕೆಂದರೆ, 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಪೈಕಿ ಮಹಿಳೆಯರಿಗಿಂತ ಪುರುಷರೇ ಹೆಚ್ಚಂತೆ. ಅದೂ ಆತ್ಮಹತ್ಯೆಯ ಶೇ.68ರಷ್ಟು ಮಂದಿ ಪುರುಷರೇ ಆಗಿದ್ದಾರೆ ಎಂದು ಹೇಳಲಾಗಿದೆ.

ಇನ್ನು, 2016ಕ್ಕಿಂತ 2015ರಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಶೇ.2ರಷ್ಟು ಹೆಚ್ಚಿದೆ. 2015ರಲ್ಲಿ 1 ಲಕ್ಷ 33 ಸಾವಿರದ 623 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯುರೋ ವರದಿಯಲ್ಲಿ ಉಲ್ಲೇಖಿಸಲಾಗಿದೆ.

English summary
Every Four Minutes An Indian Commits Suicide. Latest Data Revealed By National Crime Record Bureau.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X