ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಪ್ರಧಾನಿ ಪರೀಕ್ಷಾ ಪೆ ಚರ್ಚಾ: ಎಲ್ಲಿ ವೀಕ್ಷಿಸಬಹುದು?

|
Google Oneindia Kannada News

ನವದೆಹಲಿ, ಜನವರಿ 20: ಪ್ರಧಾನಿ ನರೇಂದ್ರ ಮೋದಿ ಇಂದು ದೇಶದ ವಿದ್ಯಾರ್ಥಿಗಳೊಂದಿಗೆ 'ಪರೀಕ್ಷಾ ಪೆ ಚರ್ಚಾ'ದಲ್ಲಿ ಭಾಗವಹಿಸಲಿದ್ದಾರೆ.

ದೆಹಲಿಯ ತಲ್ಕಾಟೋರ ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಪರೀಕ್ಷಾ ಪಡ ಚರ್ಚಾ ಸಂವಾದದಲ್ಲಿ 2ಸಾವಿರ ವಿದ್ಯಾರ್ಥಿಗಳು ನೇರವಾಗಿ ಭಾಗವಹಿಸಲಿದ್ದಾರೆ.

ಇದಲ್ಲದೆ ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳು ವಿಡಿಯೋ ಸ್ಟ್ರೀಮಿಂಗ್ ಮೂಲಕ ವೀಕ್ಷಿಲಿಸಲಿದ್ದಾರೆ.

ಸಿಇಟಿ ಪರೀಕ್ಷೆ ಮುಗಿದ ಬಳಿಕವಷ್ಟೇ ದ್ವಿತೀಯ ಪಿಯುಸಿ ಫಲಿತಾಂಶಸಿಇಟಿ ಪರೀಕ್ಷೆ ಮುಗಿದ ಬಳಿಕವಷ್ಟೇ ದ್ವಿತೀಯ ಪಿಯುಸಿ ಫಲಿತಾಂಶ

ಮೈ ಗೌ ನರೇಂದ್ರ ಮೋದಿ ಆಪ್ ಹಾಗೂ ಯೂ ಟ್ಯೂಬ್ ಪುಟಗಳಲ್ಲಿ ಈ ಕಾರ್ಯಕ್ರಮ ನೇರವಾಗಿ ಪ್ರಸಾರವಾಗಲಿದೆ. ಇದರ ಜೊತೆಗೆ ದೂರದರ್ಶನ, ಆಕಾಶವಾಣಿಯಲ್ಲೂ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು, ಸಾವಿರಾರು ಶಾಲೆಗಳಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ವಿಶೇಷ ವ್ಯವಸ್ಥೆ ಮಾಡಿದೆ.

Students Put Up Their Exam Queries Before PM Modi Today

ಸತತ ಮೂರನೇ ಬಾರಿಗೆ ಪ್ರಧಾನಿ ಮೋದಿ ವಿದ್ಯಾರ್ಥಿಗಳೊಂದಿಗೆ ಈ ಚರ್ಚೆ ನಡೆಸುತ್ತಿದ್ದಾರೆ. ಇದೇ ಮೈದಾನದಲ್ಲಿ 2018ರ ಫೆಬ್ರವರಿ 16ರಂದು ಮೊದಲ ಪರೀಕ್ಷಾ ಪೆ ಚರ್ಚಾ ನಡೆದಿತ್ತು.

ಪರೀಕ್ಷೆಯ ಸವಾಲುಗಳನ್ನು ಹೇಗೆ ನಿಭಾಯಿಸುವುದು , ಒತ್ತಡ ನಿಯಂತ್ರಣ ಸೇರಿ ಇತರೆ ವಿಚಾರಗಳಿಗೆ ಸಂಬಂಧಿಸಿ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಮುಕ್ತವಾಗಿ ಸಂವಾದ ನಡೆಸಲಿದ್ದಾರೆ.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ನೇರವಾಗಿ ಮೋದಿ ಉತ್ತರಿಸಲಿದ್ದಾರೆ.

English summary
Prime Minister Narendra Modi will interact with students on January 20 during 'Pariksha Pe Charcha'. The students will get the opportunity to ask questions to the Prime Minister and share their thoughts with him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X