ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನೆಯ ಹೆಸರು ದುರ್ಬಳಕೆ: 150 ಹಿರಿಯ ಯೋಧರಿಂದ ರಾಷ್ಟ್ರಪತಿ ಕೋವಿಂದ್‌ಗೆ ಪತ್ರ

|
Google Oneindia Kannada News

ನವದೆಹಲಿ, ಏ.12: ರಾಜಕೀಯ ಪಕ್ಷಗಳು ಎಲ್ಲಿಯೂ ಸೇನೆಯ ಹೆಸರು ಪ್ರಸ್ತಾಪಿಸದಂತೆ ನಿರ್ದೇಶನ ನೀಡುವಂತೆ ಕೋರಿ 150 ಹಿರಿಯ ಯೋಧರು ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ ಪತ್ರ ಬರೆದಿದ್ದಾರೆ.

ಭಾರತೀಯ ಸೇನೆಗೆ 'ಮೋದಿ ಸೇನೆ' ಎಂದು ಹೇಳಿಕೆ ವಿಚಾರ ಪ್ರಸ್ತಾಪಿಸಿರುವ ಅವರು ಸೇನೆಯ ಹೆಸರನ್ನು ರಾಜಕೀಯ ಪಕ್ಷಗಳು ಪ್ರಸ್ತಾಪಿಸದಂತೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

ಭೂ ಸೇನೆಯ ಮೂವರು ನಿವೃತ್ತ ಮುಖ್ಯಸ್ಥರು, ವಾಯು ಸೇನೆಯ ನಿವೃತ್ತ ಮುಖ್ಯಸ್ಥರು, ನೌಕಾಪಡೆಯ ನಾಲ್ವರು ನಿವೃತ್ತ ಮುಖ್ಯಸ್ಥರು ಸೇರಿದಂತೆ ನಿರ್ದೇಶನ ನೀಡಲು ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.

Stop Parties From Using Military for Poll Gains Veterans to President

ಅಷ್ಟೇ ಅಲ್ಲದೆ ವಿಂಗ್ ಕಮಾಂಡರ್ ಅಭಿನಂದನ್ ಅವರ ಫೋಟೊವನ್ನು ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡಿರುವ ಕುರಿತು ವಿರೋಧ ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ ಸೇನೆಯನ್ನು ಮೋದಿ ಸೇನೆ ಎಂದು ಕರೆದಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ರಾಜಕೀಯ ಪಕ್ಷಗಳು ಪಕ್ಷದ ಲಾಭಕ್ಕಾಗಿ ಸೇನೆಯ ಹೆಸರನ್ನು ದುರುಪಯೋಗ ಮಾಡಿಕೊಳ್ಳುವುದು ನಮಗೆ ಬೇಸರ ಉಂಟು ಮಾಡಿದೆ. ಎಲ್ಲಿಯೂ ನಮ್ಮ ಸೇನೆಯ ಸಾಧನೆಯನ್ನು ಪ್ರಸ್ತಾಪಿಸುವುದೇ ಬೇಡ ಎಂದು ನಿರ್ದೇಶನ ನೀಡುವಂತೆ ನಿವೃತ್ತ ಯೋಧರು ಪತ್ರ ಬರೆದಿದ್ದಾರೆ.

ಮಾಧ್ಯಮಗಳಲ್ಲಿ ರಾಷ್ಟ್ರಪತಿಗಳಿಗೆ ಹಿರಿಯ ಯೋಧರು ಪತ್ರ ಬರೆದಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಆದರೆ ಅಂತಹ ಯಾವುದೇ ಪತ್ರ ರಾಷ್ಟ್ರಪತಿಗಳಿಗೆ ಬಂದಿಲ್ಲ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.

English summary
Expressing displeasure over repeated instances of political parties using armed forces for political gains this elections, over 150 ex-servicemen, including eight former chiefs of staff, wrote a letter to President Ram Nath Kovind on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X